1. ಸುದ್ದಿಗಳು

ಭೂ ಒತ್ತುವರಿ..ಭೂ ಕಬಳಿಕೆ; ಗೊಂದಲ ಬೇಡ..ಯಾಮಾರಿದ್ರೆ ಬೀಳುತ್ತೆ ದಂಡ..!

KJ Staff
KJ Staff

ಕಾನೂನು ಬಾಹಿರವಾಗಿ ಎಲ್ಲೆಂದರಲ್ಲಿ ಸರ್ಕಾರಿ ಜಮೀನುಗಳನ್ನು, ಜಾಗೆ, ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವುದು ಅಪರಾಧ. ಹೀಗೆ ಅತಿಕ್ರಮಣ ಮಾಡಿಕೊಂಡು ಅಕ್ರಮ ಚಟುವಟಿಕೆಗಳನ್ನು ಮಾಡುವುದನ್ನು ತಡೆಗಟ್ಟವ ಸಲುವಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ‌.

ಇದನ್ನು ಓದಿರಿ:

old pension scheme update! ನೌಕರರಿಗೆ ದೊಡ್ಡ ಉಡುಗೊರೆ! ಸರ್ಕಾರದ ಘೋಷಣೆ!

ಸೆಕ್ಷೆನ್ 192(ಎ) ಪ್ರಕಾರ ಸರ್ಕಾರದ ಭೂಮಿಯನ್ನು ಕಬಳಿಕೆಯ ಮಾಡುವ ಉದ್ದೇಶದಿಂದ ಯಾವುದೇ ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಪ್ರವೇಶಿಸುವುದು ಅಥವಾ  ಸ್ವಾಧೀನಪಡಿಸಿಕೊಳ್ಳುವುದು ಅಪರಾಧ, ಹೀಗೆ ಮಾಡಿದವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 50ಸಾವಿರ ದಂಡ ವಿಧಿಸಬಹುದು ಎಂದು ತಿಳಿಸಿದೆ.

ಯಾರಿಗೆ ಅನ್ವಯಿಸುವುದಿಲ್ಲ!

ಈ ಕಾಯ್ದೆ ಕೊಡಗು ಜಿಲ್ಲೆಯಲ್ಲಿ ಜಮ್ಮಾ, ಬಾಣೆ ಭೂಮಿಗಳ ಅಥವಾ ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸಿರುವ ಅಥವಾ 94 ಎ, 94 ಬಿ ಮತ್ತು 94 ಸಿ ಪ್ರಕರಣಗಳ ಮೇರೆಗೆ ರಚಿಸಲಾದ ಸಮಿತಿಗೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದೆ. 

ಇದನ್ನು ಓದಿರಿ:

Ration card Holder's Latest Update! ಸರ್ಕಾರದಿಂದ ದೊಡ್ಡ ಘೋಷಣೆ!

ಭಾರಿ ಪ್ರಮಾಣದಲ್ಲಿ ಸರ್ಕಾರಿ ಜಮೀನು ಕಬಳಿಕೆ ಆಗಿದ್ದು, ಅದರ ಮೇಲೆ ಕಠಿಣ ಕ್ರಮ ಜರುಗಿಸಲು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯವನ್ನೂ ಕೂಡ ಸ್ಥಾಪಿಸಲಾಗಿದೆ.

ಕೃಷಿಗಾಗಿ ಅರಣ್ಯ ಭೂಮಿ ಒತ್ತುವರಿ ಸಕ್ರಮ! ಭೂಕಂದಾಯ ಕಾಯ್ದೆಗೆ ತಿಡ್ಡುಪಡಿ ಮಾಡುವುದಾಗಿ ಸಚಿವರ ಭರವಸೆ

ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಒತ್ತುವರಿ ಮಾಡಿದ ಭೂಮಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆಯ 192 (ಎ) ಕಲಂಮಿಗೆ ತಿದ್ದುಪಡಿ ಮಾಡುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

ಇದನ್ನು ಓದಿರಿ:

Ukraine-russia war effect: ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?

ಅರಣ್ಯವಾಸಿಗಳು ಕೃಷಿಗಾಗಿ ಭೂ ಒತ್ತುವರಿ ಮಾಡುವುದನ್ನು ಭೂ ಕಬಳಿಕೆ ಎಂದು ತಪ್ಪು ಅರ್ಥೈಸಿಕೊಳ್ಳಲಾಗುತ್ತಿದೆ. ಹಾಗೇ ಇದನ್ನೆ ಭೂ ಕಬಳಿಕೆ ಎಂದು ನ್ಯಾಯಾಲಯದ ವ್ಯಾಪ್ತಿಗೆ ಕರೆತರಲಾಗುತ್ತಿದೆ. ಇದರಿಂದ ಅರಣ್ಯಗಳಲ್ಲಿ ವಾಸಿಸುವ ರೈತರಿಗೆ ತುಂಬ ತೊಂದರೆ ಉಂಟಾಗುತ್ತಿದೆ. ಇದೆಲ್ಲವನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು. ರೈತರಿಗೆ ಅನುಕೂಲ ಮಾಡಿಕೊಟ್ಟು, ಈಗಾಗಲೇ ಕೃಷಿಗಾಗಿ ಅರಣ್ಯ ಪ್ರದೇಶದ ರೈತರು ಒತ್ತುವರಿ ಮಾಡಿದ ಭೂಮಿಯನ್ನು ಸಕ್ರಮಗೊಳಿಸಲು 192 (ಎ) ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುವುದು ಎಂದ ಸಚಿವರು ಭರವಸೆ ನೀಡಿದ್ದಾರೆ.

ಇನ್ನಷ್ಟು ಓದಿರಿ:

Russia-Ukraine ಯುದ್ಧ! ರೈತರಿಗೆ BIG Relief! ಸರಕಾರ ರೈತರಿಗೆ ರಸಗೊಬ್ಬರ ನೀಡಲಿದೆ! ಸಬ್ಸಿಡಿ ಬಿಲ್ 10,000 ಕೋಟಿ!

Grow Sugar Cane In Home! ಮನೆಯಲ್ಲಿಯೇ ಕಬ್ಬು ಬೆಳೆಯುವುದು ಹೇಗೆ?

Published On: 15 March 2022, 02:23 PM English Summary: illegall occupied agricultural land

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.