1. ಸುದ್ದಿಗಳು

ಮಾಲೀಕನ ಹುಡುಕಿ ಕೊಟ್ಟ ನಾಯಿ, ಗ್ರಾಮಸ್ಥರ ಹರ್ಷ!

Hitesh
Hitesh
The house owner found the dog and the villagers are happy!

ನಾಯಿಗಳು ಮನುಷ್ಯರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತದೆ. ಇಂತಹದ್ದೇ ಕಾರಣಕ್ಕೆ ಶಿವಮೊಗ್ಗದ ನಾಯಿಯೊಂದು ಸುದ್ದಿಯಲ್ಲಿದೆ.

ಸಾಕು ನಾಯಿ ಕಚ್ಚಿದರೆ ಮಾಲೀಕರು ಕಟ್ಟಬೇಕು 10 ಸಾವಿರ ದಂಡ!

ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಸೂಡೂರು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಕಾಡಿನಲ್ಲಿ ಕಟ್ಟಿಗೆ ತರಲು ಹೋಗಿ ಕಾಣೆಯಾಗಿದ್ದ ಮಾಲೀಕನನ್ನು ಸಾಕು ನಾಯಿ ಪತ್ತೆ ಮಾಡಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.  

BMTC: ವಿದ್ಯಾರ್ಥಿ ಪಾಸ್‌ ಇದ್ದರೆ ಟಿಕೆಟ್‌ ಕೊಡುವಂತಿಲ್ಲ! 

 

ಶಿವಮೊಗ್ಗದ ಸೂಡೂರು ಗ್ರಾಮದ ಶೇಖರಪ್ಪ (50) ಮೂರು ದಿನಗಳ ಹಿಂದೆ ಬೆಳಿಗ್ಗೆ 6 ಗಂಟೆಗೆ ಸೌದೆ ತರಲು ಮನೆಯ ಸಮೀಪದ ಕಾಡಿಗೆ ಹೋಗಿದ್ದರು.

ಅವರು ಪ್ರತಿ ಸಾರಿ ಕಾಡಿಗೆ ಸೌದೆ ತರಲು ಹೋದರೆ, 10 ಗಂಟೆಯ ಒಳಗೆ ಮನೆಗೆ ಮರಳುತ್ತಿದ್ದರು. ಆದರೆ, ಈ ಬಾರಿ 11 ಗಂಟೆಯಾದರೂ ಮನೆಗೆ ಹಿಂದಿರುಗಿರಲಿಲ್ಲ.

ಇದು ಮನೆಯವರ ಆತಂಕಕ್ಕೆ ಕಾರಣವಾಗಿತ್ತು. ಮನೆಯವರು ಕಾಡಿನಲ್ಲಿ ಶೇಖರಪ್ಪ ಅವರಿಗೆ ಏನಾದರು ಆಗಿರಬಹುದು ಎನ್ನುವ ಆತಂಕ ಮನೆಯವರನ್ನು ಕಾಡಲು ಆರಂಭಿಸಿತು.

ಸಮಯ ವ್ಯಯಿಸುವುದು ಬೇಡ ಎಂದು ನಿರ್ಧರಿಸಿದ ಮನೆಯವರು ಗ್ರಾಮಸ್ಥರೊಂದಿಗೆ ಕಾಡಿನಲ್ಲಿ ಶೇಖರಪ್ಪ ಅವರನ್ನು ಹುಡುಕಲು ಮುಂದಾದರು. ಸ್ಥಳೀಯರು ಕಾಡಿಗೆ ಹೋಗಿ ಹುಡುಕಾಡಿದರೂ ಖರಪ್ಪ ಅವರ ಸುಳಿವು ಸಿಕ್ಕಿರಲಿಲ್ಲ.  

ಮಧ್ಯಾಹ್ನದ ವೇಳೆಗೆ ಅವರನ್ನು ಹುಡುಕಲು ಗ್ರಾಮದ 100ಕ್ಕೂ ಹೆಚ್ಚು ಜನ ಕಾಡಿನಲ್ಲಿ ಹುಡುಕಾಟ ಪ್ರಾರಂಭಿಸಿದರು. 

ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”! 

The house owner found the dog and the villagers are happy!

ಶೇಖರಪ್ಪ ಅವರು ಹೋಗುವ ಮಾರ್ಗದಲ್ಲಿಯೇ ಸಾಗಿ ಕಾಡಿನಲ್ಲಿ ಗ್ರಾಮಸ್ಥರು ತಾಸುಗಟ್ಟಲೆ ಹುಡುಕಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.  

ಈ ಸಂದರ್ಭದಲ್ಲಿ ಶೇಖರಪ್ಪ ಅವರನ್ನು ಹುಡುಕಲು ಬಂದಿದ್ದ ಗ್ರಾಮಸ್ಥರ ಹಿಂದೆಯೇ ಬಂದಿದ್ದ ನಾಯಿ ಗ್ರಾಮದ ಜನರನ್ನು ಬಿಟ್ಟು ಬೇರೆ ದಾರಿ ಹಿಡಿದು ಮುನ್ನುಗ್ಗಿದೆ.

ಕೊನೆಗೆ ಸಂಜೆ 4 ಗಂಟೆಯ ಸುಮಾರಿಗೆ ಶೇಖರಪ್ಪ ಅವರನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಗ್ರಾಮಸ್ಥರನ್ನು ಕರೆ ತಂದಿದೆ.

ಮರದ ಕೆಳಗೆ ಅರೆಪ್ರಜ್ಞೆವಸ್ಥೆಯಲ್ಲಿ ಇದ್ದ ಶೇಖರಪ್ಪ ಅವರನ್ನು ಗ್ರಾಮಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಖರಪ್ಪ ಅವರು ಆರೋಗ್ಯ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.

 ಶೇಖರಪ್ಪ ಆಯನೂರಿನ  ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಆಗಾಗ್ಗೆ ಬರುತ್ತಿರುತ್ತಾರೆ.

ಕಟ್ಟಿಗೆ ತರಲು ಹೋಗುವಾಗ ಅವರ ಹಿಂದೆಯೇ ನಾಯಿಯೂ ಹೋಗುವುದರಿಂದ ನಾಯಿಗೂ ಆ ಮಾರ್ಗ ತಿಳಿದಿತ್ತು ಎನ್ನಲಾಗಿದೆ.  

ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”! 

Published On: 14 November 2022, 04:26 PM English Summary: The house owner found the dog and the villagers are happy!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.