1. ಸುದ್ದಿಗಳು

ಸೌರಮಂಡಲದಾಚೆಗೆ ಮೊದಲ ಎಕ್ಸೋಮೂನ್ ಪತ್ತೆ?

ನಮ್ಮ ಸೌರಮಂಡಲದ ಹೊರಗಿರುವ ಪ್ರತ್ಯೇಕ ಮತ್ತು ಮೊದಲನೆಯದು ಎನ್ನಲಾದ ಚಂದ್ರನನ್ನು ಹಬಲ್ ಮತ್ತು ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಬಳಸಿ ಬಾಹ್ಯಾಕಾಶ ತಜ್ಞರು ಪತ್ತೆಹಚ್ಚಿದ್ದಾರೆ.

ಸೌರಮಂಡಲದಿಂದ 8000 ಜ್ಯೋರ್ತಿವರ್ಷ ದೂರವಿರುವ ಪ್ರತ್ಯೇಕ ಎಕ್ಸೋಮೂನ್ ಪತ್ತೆಯಾಗಿರುವ ಬಗ್ಗೆ ಜರ್ನಲ್ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಲೇಖನ ಪ್ರಕಟವಾಗಿದೆ. ಪ್ರತ್ಯೇಕ ನಕ್ಷತ್ರ ವ್ಯವಸ್ಥೆಯಲ್ಲಿ ಚಂದ್ರನು ಪರಿಭ್ರಮಿಸುತ್ತಿದ್ದಾನೆ ಎನ್ನಲಾಗಿದ್ದು, ನೆಪ್ಚೂನ್‌ನ ವ್ಯಾಸಕ್ಕೆ ಹೋಲಿಸಿದರೆ ತುಸು ದೊಡ್ಡದು ಎನ್ನಲಾಗಿದೆ.

ನಮ್ಮ ಸೌರಮಂಡಲದಲ್ಲಿ ಅಂತಹ ಇನ್ಯಾವುದೇ ಮತ್ತೊಂದು ಚಂದ್ರನ ಇರುವಿಕೆ ಪತ್ತೆಯಾಗಿಲ್ಲ. ಪ್ರಸ್ತುತ ಸೌರಮಂಡಲದಲ್ಲಿ 200 ನೈಸರ್ಗಿಕ ಉಪಗ್ರಹಗಳು ಇವೆ ಎಂದು ಅಮೆರಿಕದ ಕೊಲಂಬಿಯಾ ವಿವಿಯ ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ನಮ್ಮ ಸೌರಮಂಡಲಕ್ಕೆ ಹೊರತಾದ ಮತ್ತೊಂದು ನಕ್ಷತ್ರ ವ್ಯವಸ್ಥೆಯಲ್ಲಿ ಪತ್ತೆಯಾದ ಮೊದಲ ಚಂದ್ರ ಅದಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಬಲ್ ಮೂಲಕ ನಡೆಸಲಾದ ಪತ್ತೆಕಾರ್ಯಾಚರಣೆಯಲ್ಲಿ ಸೌರಮಂಡಲದಲ್ಲಿ ಚಂದ್ರನ ರೂಪುಗೊಳ್ಳುವಿಕೆ ಕುರಿತಂತೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎನ್ನಲಾಗಿದೆ.

Published On: 16 October 2018, 02:11 PM English Summary: The first exomune detected outside the solar system?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.