2020-21ನೇ ಸಾಲಿನಲ್ಲಿ ತಾಡಪತ್ರಿ ಪಡೆಯಲು ಅರ್ಜಿ ಸಲ್ಲಿಸಿದ ರೈತರಿಗೆ ಲಾಟರಿ ಮೂಲಕ ತಾಡಪತ್ರಿ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೃಷಿ ಇಲಾಖೆಯಿಂದ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ, ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಆಹಾರ ಧಆನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲಕ್ಕಾಗಿ ತಾಲೂಕಿನ ರೈತರಿಗೆ ತಾಡಪತ್ರಿ ವಿತರಸಲಾಗುವುದು.
ಇದಕಕ್ಕಾಗಿ ಕಳೆದ 2020-21ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಮಾತ್ರ ಲಾಟರಿ ಮೂಲಕ ತಾಡಪತ್ರಿ ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ವೈ. ಎಲ್. ಹಂಪಣ್ಣ ತಿಳಿಸಿದ್ದಾರೆ.
ಫಲಾನುಭವಿಗಳ ಆಯ್ಕೆಗಾಗಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಸೇಡಂ, ಕೋಡ್ಲಾ, ಆಡಕಿ ಹಾಗೂ ಮುಧೋಳಗಳಲ್ಲಿ ಲಾಟರಿ ಪ್ರಕ್ರಿಯೆ ಮಾಡಲಾಗುವುದು. ರೈತರು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾರ್ಪಲಿನ್ ಅವಶ್ಯಕತೆ
ರೈತರಿಗೆ ಮಳೆ, ಗಾಳಿ, ಧೂಳಿನಿಂದ ರಾಶಿ ಮಾಡಿದ ಬೆಳೆ ಹಾಗೂ ದವಸಧಾನ್ಯಗಳನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ಅಕಾಲಿಕವಾಗಿ ಸುರಿದ ಮಳೆ, ಸುಳಿಗಾಳಿಯಿಂದಾಗಿ ದವಸ ಧಾನ್ಯ ಹಾಳಾಗುತ್ತಿರುತ್ತದೆ. ರಾಶಿ ಮಾಡಲು ಸಹಿತ ತಾಡಪತ್ರಿ ಉಪಯೋಗಿಸಬಹುದು. ಹೆಸರು, ಉದ್ದು ಬೆಳೆಯನ್ನು ರಸ್ತೆಯ ಮೇಲೆಯೇ ರಾಶಿ ಮಾಡುತ್ತಿರುತ್ತಾರೆ. ಇದರಿಂದಾಗಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ.
ಬೆಳೆಗಳನ್ನು ಬಿಸಿಲಿಗೆ ಒಣಗಿಸಲು ಸಹ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ತಾಡಪತ್ರಿ ಪಡೆದುಕೊಂಡರೆ ನಿಮ್ಮ ದವಸಧಾನ್ಯಗಳ ರಕ್ಷಣೆಗೂ ಸಹಾಯವಾಗುತ್ತದೆ.
Share your comments