1. ಸುದ್ದಿಗಳು

ಕಬ್ಬು ಬೆಳೆಯಲ್ಲಿ ಸೂಕ್ತ ತಾಂತ್ರಿಕತೆಗಳ ಕುರಿತು ರೈತರೊಂದಿಗೆ ತಜ್ಞರ ಚರ್ಚೆ ಜುಲೈ 29ರಂದು

Basavaraja KG
Basavaraja KG

ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಹಾಗೂ ಹಾವೇರಿ ಜಿಲ್ಲೆ ಹನುನಮಟ್ಟಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜುಲೈ 29ರಂದು ಗುರುವಾರ ‘ಕಬ್ಬಿನಲ್ಲಿ ಸೂಕ್ತವಾದ ತಾಂತ್ರಿಕತೆಗಳು-ರೈತರೊAದಿಗೆ ಚರ್ಚೆ’ ಆನ್‌ಲೈನ್ ತರಬೇತಿ ಕಾರ್ಯಾಗಾರ (ವೆಬಿನಾರ್) ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಗ್ಗೆ 11.30ಕ್ಕೆ ಸರಿಯಾಗಿ ವೆಬಿನಾರ್ ಆರಂಭವಾಗಲಿದೆ. ನಿವೃತ್ತ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಆರ್.ಜಿ.ಗೊಲ್ಲರ್ ಹಾಗೂ ಸಂಕೇಶ್ವರದಲ್ಲಿರುವ ಕಬ್ಬು ಸಂಶೋಧನಾ ಕೇಂದ್ರದ ಬೇಸಾಯಶಾಸ್ತç ವಿಜ್ಞಾನಿಗಳಾಗಿರುವ ಡಾ. ಸುನೀಲ್ ಕುಮಾರ್ ಎಸ್. ನೂಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಕಬ್ಬಿನ ಬೆಳೆಯಲ್ಲಿ ಬಳಕೆಯಲ್ಲಿರುವ ತಾಂತ್ರಿಕತೆಗಳು, ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಿರುವ ವಿಧಾನಗಳು, ಉತ್ತಮ ಬೀಜಗಳ ಆಯ್ಕೆ ಸೇರಿ ಕಬ್ಬು ಬೆಳೆಯ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

ಇದರೊಂದಿಗೆ ಪ್ರಗತಿಪರ ಕೃಷಿಕರಾಗಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲುಕು ಸದಲಗಾ ಗ್ರಾಮದ ರುದ್ರಕುಮಾರ ವಿ. ಹಾಲಪ್ಪನವರ ಹಾಗೂ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕು ಸಿದ್ನಾಳ ಗ್ರಾಮದ ಪ್ರಗತಿಪರ ರೈತ ವಿಜಯಕುಮಾರ ಮುಗ್ದುಮ ಅವರು ಸಹ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಉತ್ತಮ ಇಳುವರಿ ಪಡೆಯುವಲ್ಲಿ ಅನುಸರಿಸಬೇಕಿರುವ ವಿಧಾನಗಳ ಕುರಿತು ರೈತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತ ಬಾಂಧವರು https://meet.google.com/mib-nswp-abs ಈ ಲೀಂಕನ್ನು ಒತ್ತುವ ಮೂಲಕ ತರಬೇತಿ ವೆಬಿನಾರ್‌ನಲ್ಲಿ ಭಾಗವಹಿಸಬಹುದು. ಈ ಕುರಿತ ಹೆಚ್ಚಿನ ವಿವರಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಗ್ರಿ ವಾರ್ ರೂಂ/ ರೈತ ಚೇತನ ಉಚಿತ ಸಹಾಯವಾಣಿ ಸಂಖ್ಯೆ: 1800-425-1150 ಸಂಪರ್ಕಿಸಬಹುದು ಎಂದು ಹನುನಮಟ್ಟಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ. ಅವರು ಮನವಿ ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

ಕಬ್ಬು, ರಾಜ್ಯದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಮೈಸೂರು, ಮಂಡ್ಯ, ಬೆಳಗಾವಿ, ಬಿಜಾಪುರ, ಹಾವೇರಿ  ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಸಕ್ಕಕರೆ ಉತ್ಪಾದನೆಗೆ ಭಾರತದ ಕೊಡುಗೆ ಶೇ.18ರಷ್ಟಿದೆ. ಇನ್ನು ಇಳುವರಿಯ ವಿಷಯಕ್ಕೆ ಬರುವುದಾದರೆ ರಾಜ್ಯದಲ್ಲಿ ಕಬ್ಬು ಬೆಳೆಯುವ ಎಲ್ಲ ಜಿಲ್ಲೆಗಳಲ್ಲಿ ಒಂದು ಎಕರೆಗೆ ಸರಾಸರಿ 28ರಿಂದ 30 ಟನ್ ಇಳುವರಿ ತೆಗೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ರೈತರು ಒಂದು ಎಕರೆಗೆ 75 ಟನ್‌ವರೆಗೆ ಕಬ್ಬು ಬೆಳೆಯುತ್ತಾರೆ. ರಾಜ್ಯ ಒಂದೇ ಆದರೂ ಕಬ್ಬು ಇಳುವರಿಯಲ್ಲಿ ವ್ಯತ್ಯಾಸ ಕಂಡುಬರಲು ಪ್ರಮುಖ ಕಾರಣ ಆಯಾ ಭಾಗದ ಮಣ್ಣು ಮತ್ತು ರೈತರು ಬಳಸುವ ಪೋಷಕಾಂಶಗಳಾಗಿವೆ.

;

ನೀರಾವರಿ ಬೆಳೆಯಾಗಿರುವ ಕಬ್ಬು ಬೆಳೆಗೆ ಕಾಲಕಾಲಕ್ಕೆ ಅಗತ್ಯ ಪ್ರಮಾಣದ ನೀರು ಬೇಕಾಗುತ್ತದೆ. ಮುಖ್ಯವಾಗಿ ಬೆಳೆಗೆ ಯಾವ ಹಂತದಲ್ಲಿ ಪೋಷಕಾಂಶಗಳನ್ನು ನೀಡಬೇಕು ಎಂಬುದು ರೈತರಿಗೆ ತಿಳಿದಿರಬೇಕು. ಈ ನಿಟ್ಟಿನಲ್ಲಿ ಕಬ್ಬು ಬೆಳೆಗೆ ಸಂಬAಧಿಸಿದ ಸುಧಾರಿತ ತಳಿಗಳು ಹಾಗೂ ಅವುಗಳ ಗಣಧರ್ಮ, ಬೀಜೋತ್ಪಾದನೆ ಕಾರ್ಯ, ಮಣ್ಣಿನ ಗುಣಮಟ್ಟ ನಿರ್ವಹಣೆ, ನೀರಿನ ಬಳಕೆ, ಕಳೆ ನಿಯಂತ್ರಣ, ಗೊಬ್ಬರ ನಿರ್ವಹಣೆ ಪ್ರಕ್ರಿಯೆ, ಕಬ್ಬು ಬೆಳೆಯಲ್ಲಿ ಅಳವಡಿಸಬೇಕಿರುವ ಬೇಸಾಯ ಕ್ರಮಗಳು, ಕುಳೆ ನಿರ್ವಹಣೆ, ಕಬ್ಬಿಗೆ ಬರುವ ರೋಗಗಳು ಹಾಗೂ ಕೀಟಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು, ರೈತರಿಗೆ ಮಾಹಿತಿ ನೀಡಲಿದ್ದಾರೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.