ವ್ಯವಸಾಯದಲ್ಲಿ ಸಮಯ ಹಾಗೂ ಮಾರುಕಟ್ಟೆಯ ಪ್ರಜ್ಞೆ ಇರಬೇಕು. ಮೈಯೆಲ್ಲಾ ಕಣ್ಣಾಗಿರಿಸಿಕೊಳ್ಳಬೇಕು. ಕಂಪನಿಗಳಲ್ಲಿ (company) ಕೆಲಸ ಮಾಡುವಂತೆ ವ್ಯವಸಾಯದಲ್ಲಿಯೂ ಮಾಡಿದರೆ ಲಕ್ಷಾಂತರ ಸಂಪಾದನೆ ಮಾಡಬಹುದು. ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು. ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಹೆಚ್ಚು ಬೇಡಿಕೆಯಿರುತ್ತದೆ ಎಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕೆಂಬುದು ಮಹಾದೇವ ಶೆಟ್ಟಿಯವರ ಅಭಿಪ್ರಾಯ.
ಸಹನೆಯ ಗುಣ(petions):
ಲಾಭ ಹಾನಿಯಾದರೆ ಅದನ್ನು ಸ್ವೀಕಾರ ಮಾಡಿಕೊಳ್ಳುವ ಗುಣ ಇರಬೇಕು. ಬೆಳೆ ಕೈಕೊಟ್ಟಿದೆಯೆಂದು ತಲೆಮೇಲೆ ಕೈಹಾಕಿ ಕುಳಿತು ಅಡ್ಡದಾರಿ ಹಿಡಿಯುದರ ಬದಲು ಸಮಸ್ಯೆಯಿಂದ ಹೊರಗಡೆ ಹೇಗೆ ಬರಬೇಕೆಂಬುದನ್ನು ನಾವೇ ನಿರ್ಧಾರ ಮಾಡಿಕೊಳ್ಳಬೇಕು. ಭೂ ತಾಯಿಗೆ ಸಾವಿರಾರು ರುಪಾಯಿ ಖರ್ಚು ಮಾಡಲಾಗುತ್ತದೆ. ಕೆಲವು ಸಲ ಬೆಳೆಗಳು ರೋಗಕ್ಕೆ ತುತ್ತಾಗಿ ಇಳುವರಿ ಕಡಿಮೆ, ಅತೀವೃಷ್ಟಿಯಿಂದ ಬೆಳೆಹಾನಿ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆಯೂ ಇರುತ್ತದೆ. ಇದನ್ನೆಲ್ಲ ಸಹಿಸಿಕೊಳ್ಳುವ ಗುಣವಿರಬೇಕು ಎನ್ನುತ್ತಾರೆ ಮಹಾದೇವ ಶೆಟ್ಟಿ.
ಅಂತರ್ ಬೆಳೆ (intercrop):
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಅರಿಶಿಣ ಬೆಳೆಸುತ್ತಾರೆ. ಅಲ್ಲಿ ವರ್ಷಕ್ಕೆ ಎರಡ್ಮೂರು ಬೆಳೆ ತೆಗೆಯುತ್ತಾರೆ. ಆದರೆ ಮಹಾದೇವ ಶೆಟ್ಟಿ ವರ್ಷದಲ್ಲಿ ನಾಲ್ಕೈದು ಬೆಳೆ ತೆಗೆದು ಮಾದರಿಯಾಗಿದ್ದಾರೆ. ಇವರ ಸಾಧನೆಗೆ ಇನ್ನೋವೆಟಿವ್ ಪಾರ್ಮರ್ ಎಂಬ ಪ್ರಶಸ್ತಿಯೂ ಬಂದಿದೆ. ತನಗಿದ್ದ ಆರು ಎಕರೆ ಜಮೀನಿಗೆ ಹನಿ ನೀರಾವರಿ ಮಾಡಿಕೊಂಡಿದ್ದಾರೆ. ಅಂತರ ಬೆಳೆಯಾಗಿ, ಕೋತಂಬರಿ, ಸಾಂಬರ ಈರುಳ್ಳಿ, ಮೆಣಸಿನಕಾಯಿ, ಹೂಕೋಸು ಬೆಳೆಯುತ್ತಾರೆ. ಹೊಲದ ಸುತ್ತಲೂ ತೊಗರಿ ಹಾಕಿ ಮಾದರಿಯಾಗಿದ್ದರಿಂದ ಇವರಿಗೆ ಪ್ರಶಸ್ತಿಗಳು ಹುಡುಕಿಕೊಂಡುಬರುತ್ತಿವೆ. ಇದಷ್ಟೇ ಅಲ್ಲ, ತರಕಾರಿ, ಬಾಳೆಹಣ್ಣು ಬೆಳೆದು ಬದುಕಿನಲ್ಲಿ ಸುಧಾರಣೆ ಕಂಡುಕೊಂಡಿದ್ದಾರೆ.
ಪಕ್ಕಾ ಲೆಕ್ಕಾಚಾರ:
ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಕೊತ್ತಂಬರಿ ಬೆಲೆ ಹೆಚ್ಚಿರುತ್ತದೆ ಎಂಬ ಲೆಕ್ಕಾಚಾರ ಮಾಡಿಕೊಂಡು ಏಪ್ರೀಲ್ ಮೊದಲ ವಾರದಲ್ಲಿ ಅರಿಶಿಣ ಜೊತೆಗೆ ಕೊತ್ತಂಬರಿ ಬಿತ್ತಿ ತಿಂಗಳಾಗುವ ಹೊತ್ತಿಗೆ ಕೊತ್ತಂಬರಿ ಬೆಳೆದು ಉತ್ತಮ ಲಾಭ ಪಡೆದುಕೊಂಡರು. ಕೊತಂಬರಿ ನಂತರ ಸಾಂಬರ ಈರುಳ್ಳಿ ನಾಟಿ ಹಾಕಿದರು. ಕೊತಂಬರಿ ಹಾಕಿ ವಾರವಷ್ಟೇ ಕಳೆದಿತ್ತು. ಆಗಲೇ ಈರುಳ್ಳಿ ಬೀಜವನ್ನು ಸಸಿಮಡಿಯಲ್ಲಿ ಹಾಕಿದ್ದರು.ಕೊತಂಬರಿ ಕಟಾವಾಗುವ ಹೊತ್ತಿಗೆ ಈರುಳ್ಳಿ ಪೈರು ನಾಟಿಗೆ ಸಿದ್ದವಾಗಿದ್ದವು. ಈರುಳ್ಳಿ ನಾಟಿ ಮಾಡಿ 33 ಕ್ವಿಂಟಾಲ್ ಈರುಳ್ಳಿ ಪ್ರತಿ ಕಿಂಟಾಲಗೆ 3300 ರೂಪಾಯಿಗೆ ಮಾರಾಟ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಲಾಭ ಪಡೆದಿದ್ದಾರೆ. ಈರುಳ್ಳಿ ಕಟಾವು ಇನ್ನೂ ತಿಂಗಳಾಗುವಾಗಲೇ ಎಕರೆಗೆ 3000 ಹಸಿರು ಮೆಣಸಿನಕಾಯಿ ಸಸಿಗಳನ್ನು ಮೂರಡಿಗೊಂದರಂತೆ ನಾಟಿ ಮಾಡಿದ್ದರು 40 ಸಾವಿರ ರೂಪಾಯಿಯಷ್ಟು ನಿವ್ವಳ ಲಾಭ ಪಡೆದುಕೊಂಡಿದ್ದಾರೆ. ಹೊಲದ ಸುತ್ತ ತೊಗರಿ ಕಟಾವು ಮಾಡಿದ ನಂತರ ಸರದಿ ಅರಿಶಿಣದ್ದು . ಹೀಗೆ ವರ್ಷದಲ್ಲಿ ಐದು ಬೆಳೆ ತೆಗಿದಿದ್ದರಿಂದಲೇ ಇವರಿಗೆ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ, ಜಿಲ್ಲಾಮಟ್ಟದ ಪ್ರಗತಿಪರ ರೈತ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಬಂದಿವೆ.
ಕೇರಳ ಮೂಲದ ಸಿಂಥೇಟ್ ಇಡಸ್ಟ್ರೀಸ್ ಸ್ಯಾಂಪಲ್ ಪರೀಕ್ಷಿಸಿ ಕ್ವಿಂಟಾಲ್ ಅರಿಶಿಣಕ್ಕೆ 7800 ರೂಪಾಯಿಯಂತೆ ದರ ನಿಗದಿ ಮಾಡಿ ಖರೀದಿಸಿದೆ. ಇಳುವರಿ ತಾಯಿಗಡ್ಡೆ ಹೊರತುಪಡಿಸಿ ಎಕರೆಗೆ ಬರೋಬ್ಬರಿ 30 ಕ್ವಿಂಟಾಲ್ ದಿಂದ ಬಂದ ಆದಾಯ 2.34 ಲಕ್ಷ ರೂಪಾಯಿ.ಅರಿಶಿಣಕ್ಕೆ ಮಾಡಿದ ಖರ್ಚು 75 ಸಾವಿರ. ಲಾಭ 1.59 ಲಕ್ಷ ರುಪಾಯಿ. ಅರಿಶಿಣ ಹಾಗೂ ಅಂತರ್ ಬೆಳೆಗಳನ್ನು ಬೆಳೆಯಲು ಮಾಡಿದ ಖರ್ಚು 1.10 ಲಕ್ಷ ರುಪಾಯಿ. ಎಲ್ಲಾ ಬೆಳೆಗಳಿಂದ ಬಂದ ಒಟ್ಟು ಆದಾಯ 4.18 ಲಕ್ಷ. ಖರ್ಚು ತೆಗೆದು ಉಳಿದದ್ದು 3.08 ಲಕ್ಷ ರುಪಾಯಿ ಒಬ್ಬ ಕೃಷಿಕನಿಗೆ ಇದಕ್ಕಿಂತ ಹೆಚ್ಚು ಮತ್ತೇನು ಬೇಕೆನ್ನುತ್ತಾರೆ ಮಹಾದೇವ ಶೆಟ್ಟಿ.
ಹೊಲದ ಸುತ್ತ ಬದುವಿನಲ್ಲಿ ನೇರಳೆ, ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಇವು ಸೀಸನ್ ಫ್ರೂಟ್. ಜೀವನ ಪರ್ಯಂತ ಆದಾಯ ಕೊಡುತ್ತವೆಂದು ಮಾವಿನಗಿಡ, ಸಪೋಟ, ನೇರಳೆ ಸೇರಿದಂತೆ ಇತರ ಗಿಡಗಳಿಂದಲೂ ಆದಾಯ ಪಡೆಯುತ್ತಾರೆ.
Read More : ನೈಸರ್ಗಿಕ ಬೆಲ್ಲ (Natural jagggery) ಮಾರಾಟ ಮಾಡಿ ದೊಡ್ಡವನಾದ ದ್ಯಾವೇಗೌಡ
ಅಂತರ್ ಬೆಳೆಗಳನ್ನು ಯಶಸ್ವಿಯಾಗಿ ಮಾಡುವುದು ಅಷ್ಟು ಸುಲಭವಲ್ಲ, ಆ ಬೆಳಗಳಿಗೆ ಬೇಕಾದಷ್ಟು ಪೋಷಕಾಂಶಗಳನ್ನು ಬೇಕಾದ ರೀತಿಯಲ್ಲಿ ಕೊಡುವುದು ಮುಖ್ಯ. ಇದರ ಕುರಿತು ಸಂಪೂರ್ಣ ಅರಿವಿಟ್ಟುಕೊಂಡ ಅವರು ಅಂತರ ಬೆಳೆ ಹಾಕಿ ಲಾಭ ಪಡೆದಿದ್ದಾರೆ.
ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡಿ ಯಶಸ್ಸು ಗಳಿಸಬೇಕೆಂದು ಕೊಂಡಿದ್ದಾರೆ. ಯಾವುದೇ ಕೇಲಸ ಆರಂಭ ಮಾಡುವುದಕ್ಕಿಂತ ಮೊದಲು ಹಾನಿ ಬಗ್ಗೆ ಯೋಚಿಸಬಾರದು. ಲೆಕ್ಕಾಚಾರ ಕರೆಕ್ಟ್ ಹಾಕಿಕೊಂಡರೆ ಹಾನಿಯಾಗಲ್ಲ ಎಂಬ ವಿಶ್ವಾಸ ಅವರದ್ದು.
ಕೇರಳ ತಮಿಳುನಾಡಿನಲ್ಲಿ ಮಾರಾಟ (marketing):
ಚಾಮರಾಜನಗರದಿಂದ ತಮಿಳುನಾಡು ಹಾಗೂ ಕೇರಳ 25-35 ಕಿ.ಮೀ ಅಂತರದಲ್ಲಿದೆ. ಇವರ ಕರ್ಸಮರ್ಸ್ ಕೆರಳ ತಮಿಳುನಾಡಿನವರು. ಮಾರುಕಟ್ಟೆಗೆ ಯಾವುದೇ ಸಮಸ್ಯೆಯಿಲ್ಲ. ಹಾಗಾಗಿ ಉತ್ತಮ ಲಾಭ ಸಿಗುತ್ತದೆ ಎಂದು ನಸುನಗುತ್ತಲೇ ಕೃಷಿ ಜಾಗರಣ ಪ್ರತಿನಿಧಿಯೊಂದಿಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ರೈತರೆಂದರೆ ಕನಿಷ್ಟ ಎಂಬ ಭಾವನೆ ಹೋಗಬೇಕು:
ರೈತರೆಂದರೆ ಹಸಿರು ಟಾವೆಲ್, ಹರಕಮುರುಕು ಬಟ್ಟೆ, ನೇಗಿಲು, ಕಷ್ಟದ ಜೀವನ ಎಂದೆಲ್ಲ ಬಿಂಬಿಸಿ ಡಿ ಗ್ರೂಪ್ ನೌಕರಗಿಂತಲೂ ಕನಿಷ್ಟ ಬಿಂಬಿಸಿದ್ದಾರೆ. ಮದುವೆ ಮಾಡಿಕೊಳ್ಳಲು ರೈತರಿಗೆ ಕನ್ಯೆ ಕೊಡುವುದಿಲ್ಲ. ರೈತರು ಕಷ್ಟದ ಜೀವನ, ತನ್ನ ಮಗಳು ಸುಖವಾಗಿ ಇರುವುದಿಲ್ಲ ಎಂದೆಲ್ಲ ಭಾವನೆಗಳು ಜನರಲ್ಲಿ ತುಂಬಿದೆ. ಜನರಲ್ಲಿರುವ ಈ ಮನೋಧೋರಣೆಯನ್ನು ಬದಲಾಯಿಸುವುದಕ್ಕಾಗಿಯೇ ತಾವು ನೌಕರಿ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದೇನೆಂದು ಹೆಮ್ಮೆಯಿಂದ ಹೇಳುತ್ತಾರೆಮಹಾದೇವ ಶೆಟ್ಟಿ.
ಮಹಾದೇವ ಶೆಟ್ಟಿ
ಪ್ರಗತಿಪರ ರೈತ, ಚಾಮರಾಜನಗರ ಜಿಲ್ಲೆ
ಮೊ.9740753510
ಬಹುಬೆಳೆಯಲ್ಲಿ ಬದುಕು ಕಟ್ಟಿಕೊಂಡ ರಾಜೇಗೌಡ ಬಿದರಕಟ್ಟೆ
Share your comments