1. ಸುದ್ದಿಗಳು

ಮೇವು ಘಟಕ ಸ್ಥಾಪಿಸಲು ಸರ್ಕಾರದಿಂದ ಸಬ್ಸಿಡಿ: ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ!

Kalmesh T
Kalmesh T
Subsidy from Government for setting up forage unit

ರೈತರು ಮೇವು ಘಟಕ ಸ್ಥಾಪಿಸಲು ಸರ್ಕಾರದಿಂದ ಸಬ್ಸಿಡಿ ದೊರೆಯಲಿದೆ. ಇದಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನವಾಗಿದೆ.

ಇದನ್ನೂ ಓದಿರಿ:

ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

ಕರ್ನಾಟಕ ರಾಜ್ಯ ಸರ್ಕಾರವು 'ಮೇವು ಅಭಿವೃದ್ಧಿ ಯೋಜನೆಯಡಿ' ರಸಮೇವು ಘಟಕ ಸ್ಥಾಪಿಸಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ತಮ್ಮ ಜಾನುವಾರುಗಳಿಗೆ ರಾಜ್ಯ ಸರ್ಕಾರವು 'ಮೇವು ಅಭಿವೃದ್ಧಿ ಯೋಜನೆಯಡಿ' ರಸಮೇವು ಘಟಕ ಸ್ಥಾಪಿಸಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ರೈತರಿಗಾಗಿ 'ರಸಮೇವು ಘಟಕ ಸ್ಥಾಪನೆ'ಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಹಸಿರು ಮೇವು ಉತ್ಪಾದನೆ, ಗುಣಮಟ್ಟದ ಹಾಲು ಉತ್ಪಾದನೆ, ಹಾಗೂ ರಾಸುಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ರಸಮೇವು ಘಟಕ ಸ್ಥಾಪನೆಗೆ ರೈತರಿಗೆ ಸಹಾಯಧನ ನೀಡಲಾಗುವುದು.

ಒಬ್ಬ  ಫಲಾನುಭವಿಗೆ ಪ್ಲಾಸ್ಟಿಕ್ ಶೀಟ್, ಮೇವು ಕಟ್ ಮಾಡಿ ಹರಡಲು 500 ಕೆಜಿ ಸಾಮರ್ಥ್ಯದ 4 ಸಿಲೋ ಬ್ಯಾಗ್, 5 ಕೆಜಿ ಆಫ್ರಿಕನ್ ಟಾಲ್ ಮೆಕ್ಕೆಜೋಳ, ಮಿನಿ ಕಟ್ ಮಷಿನ್‌ ನೀಡಲಾಗುತ್ತದೆ.

ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತಿನ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಮಂತ್ರಿ ಸಭೆ!

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

ರೈತರು ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್ ಪ್ರತಿ

ಜಮೀನು ಪಹಣಿ (ಆರ್.ಟಿ.ಸಿ)

ಜಾತಿ, ಆದಾಯ ಪ್ರಮಾಣ ಪತ್ರ

ಮೇಲಿನ ದಾಖಲೆಗಳ ಜತೆ ಇತರೆ ಅಗತ್ಯ ದಾಖಲಾತಿಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು.


ಅರ್ಹತೆಗಳು

ರೈತರು ಕನಿಷ್ಟ 2 ರಾಸುಗಳನ್ನು ಹೊಂದಿರಬೇಕು. ಮತ್ತು ಮೇವು ಕಟ್ ಮಾಡುವ ಯಂತ್ರಗಳು ಇದ್ದವರಿಗೆ ಆದ್ಯತೆ ನೀಡಲಾಗುವುದು.

ಕೊರಟಗೆರೆ ತಾಲೂಕಿಗೆ ಈ ಯೋಜನೆಯಡಿ 46 ರೈತರಿಗೆ ಸೌಲಭ್ಯ ಒದಗಿಸುವ ಗುರಿ ನಿಗದಿಪಡಿಸಿದೆ. ಪರಿಶಿಷ್ಟ ಜಾತಿಗೆ 11, ಪರಿಶಿಷ್ಟ ಪಂಗಡಕ್ಕೆ 5, ಸಾಮಾನ್ಯ ವರ್ಗಕ್ಕೆ ಸೇರಿದ 30 ರೈತರಿಗೆ ಸೌಲಭ್ಯ ನೀಡಲಾಗುವುದು.

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರಗಳಲ್ಲಿ ಭಾರತವನ್ನು ಜಾಗತಿಕ ಚಾಂಪಿಯನ್ ಮಾಡಲು ಉತ್ತೇಜನ!

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ಮೇ 15 ಕೊನೆಯ ದಿನ

ಆಸಕ್ತ ರೈತರು ಮೇ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಹಾಗೂ ಹತ್ತಿರದ ಪಶು ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿದ ತಾಲೂಕು ಸಮಿತಿಯು ಪರಿಶೀಲಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮೊ. 99803 51579 ಕೊರಟಗೆರೆ ಇವರನ್ನು ಸಂಪರ್ಕಿಸಲು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಸಿದ್ದನಗೌಡ ತಿಳಿಸಿದ್ದಾರೆ.

ರಸಮೇವು ಘಟಕದ ಲಾಭಗಳು

ಹಸುಗಳು ಮೇವಿನ ಮೃದು ಭಾಗವನ್ನು ತಿಂದು ಗಡುಸಾದ ಭಾಗವನ್ನು ಹಾಗೆಯೇ ಬಿಡುತ್ತವೆ. ಇದರಿಂದ ಮೇವು ನಷ್ಟವಾಗುತ್ತದೆ. ಈ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಮೇವು ತುಂಡರಿಸುವ ಯಂತ್ರಗಳಿಗೆ ಅನುದಾನ ನೀಡಲಾಗುವುದು.

ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿನ ಜೋಳ, ಹೈಬ್ರೀಡ್ ಜೋಳ ಹಾಗೂ ಒಣ ಮೇವನ್ನು ಈ ಯಂತ್ರದಿಂದ ತುಂಡರಿಸಿದಾಗ ರೈತರಿಗೆ ಆಗುವ ನಷ್ಟ ಕಡಿಮೆಯಾಗುತ್ತದೆ.

ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!

ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!

Published On: 07 May 2022, 10:21 AM English Summary: Subsidy from Government for setting up forage unit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.