1. ಸುದ್ದಿಗಳು

ಸ್ವಯಂ ಉದ್ಯೋಗಕ್ಕಾಗಿ ಸೀವಿಂಗ್ ಮಶೀನ್ ಖರೀದಿಗೆ ಶೇ.50 ರಷ್ಟು ಸಹಾಯಧನ

sewing machine

ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ನಿಧಿ ಯೋಜನೆಯಡಿ ಮಹಿಳಾ ಅಭ್ಯರ್ಥಿಗಳಿಗೆ  ಸ್ವಯಂ ಉದ್ಯೋಗಕ್ಕಾಗಿ ಸೀವಿಂಗ್ ಮಶೀನ್ ಖರೀದಿಗೆ ಶೇ.50 ರಷ್ಟು ಸಹಾಯಧನ  ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

2020-21ನೇ ಸಾಲಿಗೆ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಇಲಾಖೆಯಿಂದ ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ (ಒಂದು ಇಂಡಸ್ಟ್ರೀಯಲ್ ಸೀವಿಂಗ್ ಮಷಿನ್) ಘಟಕದ ವೆಚ್ಚ 30,000 ರೂ. ಗಳಾಗಿದ್ದು, ಸರ್ಕಾರದ ಸಹಾಯಧನ ಶೇ. 50 ರಷ್ಟು ಗರಿಷ್ಟ ಅಂದರೆ 15,000 ರೂ.ಗಳ ಸಹಾಯ ಧನ ಪಡೆಯಬಹುದಾಗಿದೆ.

ಅರ್ಹ ಫಲಾನುಭವಿಗಳು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2021ರ ಫೆಬ್ರವರಿ 28 ರೊಳಗಾಗಿ ಅರ್ಜಿ ಸಲ್ಲಿಸಬೇಕು.

 ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಎರಡನೇ ಮಹಡಿ, ಕೊಠಡಿ ಸಂಖ್ಯೆ 15, ಮಿನಿ ವಿಧಾನಸೌಧ, ಕಲಬುರಗಿ-585102 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-278629 ಗೆ ಸಂಪರ್ಕಿಸಲು ಕೋರಲಾಗಿದೆ.

Published On: 19 February 2021, 07:06 PM English Summary: subsidy for Sewing Machine

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.