1. ಸುದ್ದಿಗಳು

ಆಹಾರ ಸಂಸ್ಕರಣಾ ಉದ್ದಿಗೆ ಶೇ. 35ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

jaggery

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅತಿಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯ ಮಬದ್ಧಗೊಳಿಸುವಿಕೆಗೆ ಯೋಜನೆಯಡಿಯಲ್ಲಿ  ಸಂಸ್ಕರಣಾ ಘಟಕ ವನ್ನು ಉನ್ನತೀಕರಿಸಲು ಒಂದು ಜಿಲ್ಲೆ- ಒಂದು ಉತ್ಪನ್ನ (ಒಡಿಒಪಿ)ಉಪಕ್ರಮದಲ್ಲಿ ಸಹಾಯಧನ ನೀಡಲಾಗುವುದು’ ಎಂದು ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ಆಸಕ್ತ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹು. ಜಿಲ್ಲೆಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕಗಳ ಸ್ಥಾಪನೆ, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡಲು ರೂಪಿಸಲು ಯೋಜಿಸಲಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಸೌಲಭ್ಯ ಪಡೆಯಲಿಚ್ಚಿಸುವವರು  ಈ ಕೆಳಗೆ ನೀಡಿದ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

‘ವೈಯಕ್ತಿಕವಾಗಿ ಹೊಸದಾಗಿ ಘಟಕಗಳನ್ನು ಸ್ಥಾಪಿಸಿದರೆ, ಗರಿಷ್ಠ  10 ಲಕ್ಷ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ 35ರಷ್ಟು ಸಾಲ-ಸಂಪರ್ಕಿತ ಬಂಡವಾಳ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಫಲಾನುಭವಿಗಳ ಕೊಡುಗೆ ಯೋಜನಾ ವೆಚ್ಚದ ಕನಿಷ್ಠ ಶೇ 10ರಷ್ಟು ಇರಬೇಕು ಹಾಗೂ ಬಾಕಿ ಬ್ಯಾಂಕ್‌ ಸಾಲವಾಗಿರಬೇಕು. ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅವಶ್ಯ ತರಬೇತಿ, ಸಮಗ್ರ ಯೋಜನಾ ವರದಿ ತಯಾರಿಕೆ, ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲಕ್ಕಾಗಿ ಯೋಜ ನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ನ್ಯಾಮಗೌಡರ (ಮೊ: (7483503821) ಹಾಗೂ ಶ್ರೀಶೈಲ ಡುಗ್ಗಿ (ಮೊ:9110443919) ಸಂಪರ್ಕಿಸ ಬಹುದು’ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡಲ್ ಅಧಿಕಾರಿ ಬಸವರಾಜ (ಮೊ:8277934055) ಅವರನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು pmfme.mofpi.gov.in/pmfme ಜಾಲತಾಣದ ಮೂಲಕ ಸಲ್ಲಿಸಬಹುದು. ಆಸಕ್ತರು, ಸಂಘ-ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು, ಒಕ್ಕೂಟಗಳು, ಸಹಕಾರಿ ಸಂಸ್ಥೆಗಳು ಕೂಡ ಪಾಲ್ಗೊಳ್ಳಲು ಅವಕಾಶವಿದೆ.

Published On: 04 February 2021, 01:20 PM English Summary: Subsidy for food processing industry

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.