1. ಸುದ್ದಿಗಳು

ಕೊಬ್ಬರಿ (Coconut) ಬೆಳೆಗಾರರಿಗೆ ಸಿಹಿ ಸುದ್ದಿ : ಪ್ರೋತ್ಸಾಹ ಬೆಲೆ ಹೆಚ್ಚಳ!!

  ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ಒದಗಿರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು,  ಉಂಡೆ ಕೊಬ್ಬರಿಗೆ (Coconut) ಕ್ವಿಂಟಾಲಗೆ  ತಲಾ 11,300 ರೂಪಾಯಿ ಬೆಂಬಲ ಬೆಲೆ ನೀಡಲು  ರಾಜ್ಯ ಸರ್ಕಾರ ನಿರ್ಧಾರಿಸಿದೆ.

     ವಿಧಾನಸೌಧದಲ್ಲಿ ಗುರುವಾರ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxmana Savadi) ಹೇಳಿದರು.

ಕೇಂದ್ರ ಸರ್ಕಾರ ಕೊಬ್ಬರಿ ಕ್ವಿಂಟಲ್‌ಗೆ 10,300 ಬೆಂಬಲ ಬೆಲೆ (Support price) ನಿಗದಿ ಮಾಡಿದೆ. ರೈತರಿಗೆ ಇನ್ನೂ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬ ಕಾರಣಕ್ಕೆ, ರೈತರ ಬೇಡಿಕೆಯನ್ನು ಮನ್ನಿಸಿ, ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಲ್‌ಗೆ 1,000 ನೀಡಲು ತೀರ್ಮಾನಿಸಲಾಯಿತು. ಇದರಿಂದ ರಾಜ್ಯ ಸರ್ಕಾರಕ್ಕೆ 38 ಕೋಟಿ ಹೊರೆ ಆಗಲಿದೆ. ಇದರಿಂದ ಪ್ರತಿ ರೈತರಿಗೆ ಒಂದು ಕ್ವಿಂಟಲ್‌ಗೆ 11,300 ಬೆಂಬಲ ಬೆಲೆ ಸಿಕ್ಕಂತಾಗುತ್ತದೆ. ಖರೀದಿ ನೋಂದಣಿ ಅವಧಿಯನ್ನು ಇದೇ 25ರವರೆಗೆ ವಿಸ್ತರಿಸಲಾಗಿದೆ. ಖರೀದಿ ಕಾಲಾವಧಿಯನ್ನು ಸೆಪ್ಟೆಂಬರ್ 10ರವರೆಗೆ ವಿಸ್ತರಿಸಲಾಗಿದೆ.

Published On: 07 August 2020, 09:43 AM English Summary: State govt has decided to offer a support price of 11300 Rs per quintal of coconut

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.