1. ಸುದ್ದಿಗಳು

karnataka state budget 2023-2024 ಬೊಮ್ಮಾಯಿ ಗಿಫ್ಟ್‌: ಗೃಹಿಣಿಯರಿಗೆ ಮಾಸಿಕ ಸಿಗಲಿದೆ ಇಷ್ಟು ಸಹಾಯಧನ!

Hitesh
Hitesh
State budget 2023 Bommayi Gift: Housewives will get monthly subsidy!

ರಾಜ್ಯ ಸರ್ಕಾರವು ಈಗಾಗಲೇ ಘೋಷಣೆ ಮಾಡಿದಂತೆ ಗೃಹಿಣಿಯರಿಗೆ ಈ ಬಾರಿ ಬಜೆಟ್‌ನಲ್ಲಿ ಸಿಹಿಸುದ್ದಿಯೊಂದನ್ನು ನೀಡಿದೆ.

State budget 2023 ಬೊಮ್ಮಾಯಿಯಿಂದ ರೈತರಿಗೆ ಮಿಠಾಯಿ: ರೈತರಿಗೆ 5 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ಸಾಲ!

ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ. ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ 10 ಸಾವಿರ ಕೋಟಿ ಅನುದಾನ ಮೀಸಲಿರಿಸಲಾಗಿದೆ.

ಅಲ್ಲದೇ ಮಹಿಳೆಯರ ಸ್ವಾಲಂಬಿತನಕ್ಕೆ ಆದ್ಯತೆ ನೀಡಲಾಗಿದ್ದು, ಸರ್ಕಾರವು ಈ ಬಾರಿ ಗೃಹಿಣಿ ಶಕ್ತಿ ಯೋಜನೆಯನ್ನು ಪರಿಚಯ ಮಾಡಿದೆ.

ಅಲ್ಲದೇ ಗೃಹಿಣಿಯರಿಗೆ ತಿಂಗಳಿಗೆ   500 ಸಹಾಯ ಧನ ನೀಡುವ ಮಹತ್ವದ ಯೋಜನೆಯನ್ನು ಪರಿಚಯ ಮಾಡಿದೆ.  

ಇಲ್ಲಿಯ ವರೆಗೆ ರೈತರಿಗೆ ಬಡ್ಡಿ ರಹಿತ ಸಾಲದ ಮಿತಿಯನ್ನು ರಾಜ್ಯ ಸರ್ಕಾರ ಹೆಚ್ಚಳ  

ಮಾಡಿದೆ ಇದರಲ್ಲಿ ಮೂರು ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿರುವುದು ವಿಶೇಷವಾಗಿದೆ.

ಈ ಮೂಲಕ ರಾಜ್ಯದಲ್ಲಿ ಬಹುದೊಡ್ಡ ಮತದಾರರನ್ನು ಸೆಳೆಯಲು ಸರ್ಕಾರವು ಮುಂದಾಗಿದೆ.

ದೇಶದ ಗ್ರಾಮಗಳ ಅಭಿವೃದ್ಧಿಗೆ ಬರೋಬ್ಬರಿ 4,800 ಕೋಟಿ ಬಿಡುಗಡೆ! 

ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿಯ ಮೇಲೆ ಗೃಹಿಣಿಯರಿಗೆ ಮಾಸಿಕ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದವು.

ಅದಂತೆಯೇ ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹಿಣಿಯರಿಗೆ ತಿಂಗಳಿಗೆ 500 ಸಹಾಯ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

State budget 2023 ರಾಜ್ಯ ಸರ್ಕಾರದ 2023-24ನೇ ಸಾಲಿನ ಮಹತ್ವದ ಬಜೆಟ್‌ಗೆ ಕೌಂಟ್‌ಡೌನ್‌!

ನಿರ್ಣಾಯಕ ಮತದಾರರು ಎಂದು ಗುರುತಿಸಲಾಗಿರುವ ರೈತರನ್ನು ಗುರಿಯಾಗಿ ಇರಿಸಿಕೊಂಡು ಅವರ ಒಲವು ಗಿಟ್ಟಿಸಲು ಈಗ ಇರುವ 3 ಲಕ್ಷದವರೆಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು  5 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಹೇಳಲಾಗಿತ್ತು.

ಅದರಂತೆ ರಾಜ್ಯದ ಬಹುದೊಡ್ಡ ರೈತರಿಗೆ ಬೊಮ್ಮಾಯಿ ಮಿಠಾಯಿ ನೀಡಿದ್ದಾರೆ. 

ಇನ್ನು ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ವೇತನ ಆಯೋಗದ ಅನುಷ್ಠಾನದತ್ತ  ಎಲ್ಲ ನೌಕರರ ವರ್ಗದವರು ಕಣ್ಣಿರಿಸಿದ್ದಾರೆ.

ಇದರ ಮೇಲೆ ಇಡೀ ನೌಕರರ ವರ್ಗವೇ ನಿರೀಕ್ಷೆ ಇರಿಸಿದೆ.  

ವೇತನ ಆಯೋಗವು ವರದಿ ಸಲ್ಲಿಕೆ ಮಾಡಿದ ನಂತರದಲ್ಲಿ ಇದನ್ನು ಜಾರಿ ಮಾಡುವುದಕ್ಕೆ ಸರ್ಕಾರವು  10 ಸಾವಿರ

ಕೋಟಿ ಅನುದಾನ ಮೀಸಲಿಡುವುದಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಅಲ್ಲದೇ ಸಾಂಪ್ರದಾಯಿಕ ವೃತ್ತಿ ಆಧಾರಿತ ಸಮುದಾಯದವರಿಗೆ ಪ್ರೋತ್ಸಾಹ ನೀಡಲು  50 ಸಾವಿರ ಸಹಾಯಧನ

ನೀಡುವ ಬಗ್ಗೆಯೂ ಬೊಮ್ಮಾಯಿ ಪ್ರಕಟಿಸುವ ನಿರೀಕ್ಷೆ ಇದೆ.  

ಎಲ್‌ಟಿಟಿಇ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆಯೇ, ದಶಕದ ಹಿಂದೆಯೇ ಹತ್ಯೆ ಎಂಬ ಸುದ್ದಿ ಸುಳ್ಳೇ ? 

State budget 2023 Bommayi Gift: Housewives will get monthly subsidy!

ರಾಜ್ಯ ಬಜೆಟ್‌ನ ಮುಖ್ಯಾಂಶಗಳು  

 • ರೈತರಿಗೆ ಈ ಹಿಂದೆ 3 ಲಕ್ಷ ರೂಪಾಯಿಯವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿತ್ತು. ಇದೀಗ 5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ.
 •  ಕಿಸಾನ್ ಕಾರ್ಡ್ ಸೌಲಭ್ಯ ಇರುವ ರೈತರಿಗೆ ಭೂಸಿರಿ ಯೋಜನೆ
 • ಗೃಹಿಣಿಯರಿಗೆ ತಿಂಗಳಿಗೆ 500 ರೂಪಾಯಿ ಮೊತ್ತದ ಸಹಾಯ ಧನ
 • ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ ಇನ್ಮುಂದೆ ಉಚಿತ ಬಸ್ ಪಾಸ್
 •  ಮಹಿಳಾ ಸಂಘಟಿತ ಕಾರ್ಮಿಕರಿಗೂ ಸಿಹಿ ಇನ್ಮುಂದೆ ಎಲ್ಲರಿಗೂ ಉಚಿತ ಬಸ್ ಪಾಸ್
 •   ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ ಕಲ್ಪಿಸಲು ಕ್ರಮ
 •   ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನ 3 ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಹೆಚ್ಚಳ!  
 •  ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಪರಿಚಯ
 •  ಮಹಿಳಾ ಸಂಘಟಿತ ಕಾರ್ಮಿಕರಿಗೂ ಉಚಿತ ಬಸ್ ಪಾಸ್ ಸೌಲಭ್ಯ. 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್.
 •  ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನ 3 ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಹೆಚ್ಚಳ
 •  ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ 

ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಪ್ರಮುಖ ಘೋಷಣೆಗಳು ಹಾಗೂ ಯೋಜನೆಗಳನ್ನು ರಾಜ್ಯ ಸರ್ಕಾರವು ಈಗಾಗಲೇ ಪರಿಚಯಿಸುವುದಾಗಿ ಹೇಳಿತ್ತು.

ಗೃಹಿಣಿಯರಿಗೆ ಅಂದಾಜು 2000 ಸಾವಿರ ರೂಪಾಯಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದನ್ನು 500 ರೂಪಾಯಿ ಮಾಡಲಾಗಿದೆ.

ಎಲ್ಲವನ್ನೂ ಪರಿಗಣಿಸಿ ಯೋಜನೆಯನ್ನು ಪರಿಚಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ತಿಳಿಸಿದ್ದರು.

ಅದರಂತೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಜೆಟ್‌ ಘೋಷಣೆ ಮಾಡಲಾಗಿದೆ. 

ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟ: 901 ಕೋಟಿ ರೂ. ಆದಾಯ! 

Published On: 17 February 2023, 11:31 AM English Summary: State budget 2023 Bommayi Gift: Housewives will get monthly subsidy!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.