1. ಸುದ್ದಿಗಳು

ಸೋಮವಾರ SSLC ಫ‌ಲಿತಾಂಶ

Result

ಕೋವಿಡ್ -19 ಆತಂಕದ ನಡುವೆ ಯಶಸ್ವಿಯಾಗಿ ನಡೆದ 2019-20ನೇ ಸಾಲಿನ SSLC ಪರೀಕ್ಷೆಯ ಫ‌ಲಿತಾಂಶ ಪ್ರಕಟಗೊಳ್ಳಲು ದಿನಾಂಕ ನಿಗದಿಯಾಗಿದೆ. ಕೋವಿಡ್ 19 ಭೀತಿಯ ನಡುವೆಯೇ ಜೂನ್‌ 25ರಿಂದ ಜುಲೈ 3ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆದಿದ್ದು, ಜುಲೈ 13ರಿಂದ ಮೌಲ್ಯಮಾಪನ ಆರಂಭವಾಗಿತ್ತು. . 7.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  ಸೋಮವಾರ ಅಪರಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು (SSLC Exam result) ಆ.10ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಇಲಾಖೆಯ ಅಧಿಕೃತ ವೆಬ್‌ಸೈಟ್‌ kseeb.kar.nic.in ಅಥವಾ http://www.karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.  ಏಕಕಾಲಕ್ಕೆ ಎಲ್ಲರೂ ಬಳಸುವುದರಿಂದ ನೆಟ್‌ವರ್ಕ್‌ ನಿಧಾನ ವಾಗುವ ಸಾಧ್ಯತೆ ಇದೆ. ಆ.10ರ ಮಧ್ಯಾಹ್ನ 3ರ ನಂತರ,  ಎಸ್ಎಂಎಸ್‌ ಕಳುಹಿಸುವ ಮೂಲಕವೂ ವಿದ್ಯಾರ್ಥಿ ಗಳು ಫಲಿತಾಂಶ ಪಡೆಯಬಹುದು. KSEEB10 ಎಂದು ಟೈಪ್‌ ಮಾಡಿ, ನೋಂದಣಿ ಸಂಖ್ಯೆ ಬರೆದು, 56263ಗೆ ಎಸ್‌ಎಂಎಸ್‌ ಕಳಿಸಿದರೆ, ಅಂಕಗಳ ವಿವರವನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ.

Published On: 08 August 2020, 10:11 AM English Summary: sslc-exams results Karnataka on 10th august

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.