1. ಸುದ್ದಿಗಳು

ಲ್ಯಾಂಡಿಂಗ್ ವೇಳೆ ವಿಮಾನ ದುರಂತ- ಪೈಲಟ್ ಸೇರಿ 16 ಜನರ ಸಾವು

air india

ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬಾಯಿಯಿಂದ ಪ್ರಯಾಣಿಕರನ್ನು ಹೊತ್ತು ಕೇರಳದ ಕಲ್ಲಿಕೋಟೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳುತ್ತಿದ್ದ ಏರ್ ಇಂಡಿಯಾ ವಿಮಾನ (Air india express) ಟೇಬಲ್ ಟಾಪ್ ರನ್ ವೇನಿಂದ ಜಾರಿ ಸಂಭವಿಸಿದ (skids off runway) ದುರಂತದಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಸಹಿತ ಕನಿಷ್ಟ 16 ಜನ (16 people) ಸಾವನ್ನಪ್ಪಿದ್ದಾರೆ.

ಶುಕ್ರವಾರ ರಾತ್ರಿ 7.40ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ವಿಮಾನವು ದುಬೈಯಿಂದ ಬಂದಿತ್ತು. ಕೋವಿಡ್‌ ಪಿಡುಗಿನಿಂದಾಗಿ ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಆರಂಭಿಸಲಾದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಈ ವಿಮಾನ ಹಾರಾಟ ನಡೆಸಿತ್ತು.  ವಿಮಾನದಲ್ಲಿ 174 ವಯಸ್ಕರು ಮತ್ತು 10 ಪುಟ್ಟ ಮಕ್ಕಳಿದ್ದರು. ಐವರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಪ್ರತಿಕೂಲ ಹವಾಮಾನ ದಿಂದಾಗಿ ವಿಮಾನ ಇಳಿಯುವುದು ಸುಮಾರು 30 ನಿಮಿಷ ತಡವಾಗಿತ್ತು. ಪ್ರತಿಕೂಲ ಹವಾಮಾನವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ರನ್‌ವೇಯನ್ನು ದಾಟಿ ಮುಂದೆ ಸಾಗಿದ ವಿಮಾನವು, ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ (Captain deepk sathe) ಸಾವು:

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅನುಭವಿ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ ಸಾವನ್ನಪ್ದಿದ್ದಾರೆ. ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ ಅವರು ಭಾರತೀಯ ವಾಯುಪಡೆಯ ರಫೆಲ್ ಸ್ಕ್ವಾಡ್ರನ್​ನಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದರು. ಅವರು ರಫೆಲ್ ಸ್ಕ್ವಾಡ್ರನ್​ ನಂ.17ರ ಗೋಲ್ಡನ್ ಏರೋಸ್​ ಎಂಬ ರಫೆಲ್ ಫೈಟರ್ ಜೆಟ್​ನ ಪೈಲಟ್ ಆಗಿ ಸ್ವೋರ್ಡ್ ಆಫ್ ಹಾನರ್ ಪ್ರಶಸ್ತಿ ಪಡೆದವರಾಗಿದ್ದರು. ಸಾಠೆ ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ 58ನೇ ಕೋರ್ಸ್​ ಬ್ಯಾಚಿನವರು.ಫೈಟರ್ ಜೆಟ್ ಪೈಲಟ್ ಪರಿಣತರಷ್ಟೇ ಅಲ್ಲ ಸಾಠೆ, ಬೋಯಿಂಗ್ 737-800 ಏರ್​ಕ್ರಾಫ್ಟ್​ ಪೈಲಟ್ ಆಗಿಯೂ ಅನುಭವಿ. ಇದಕ್ಕೂ ಮುನ್ನ ಅವರು ಏರ್​ಬಸ್​ ಎ-310 ವಿಮಾನವನ್ನು ಚಲಾಯಿಸಿದ್ದರು

ದೇಶದಲ್ಲಿ ಹಿಂದೆ ನಡೆದಿರುವ ವಿಮಾನ ದುರಂತಗಳ ವಿವರ ಇಲ್ಲಿದೆ

1966 ಫೆ.7 ಬನಿಹಲ್‌ ಪಾಸ್‌ ಜಮ್ಮು ಮತ್ತು ಕಾಶ್ಮೀರದಲ್ಲಿ ಫಾಕ್ಕರ್‌ ಫ್ರೆಂಡ್‌ಶಿಪ್‌ ಅಪಘಾತ;  37 ಸಾವು

1970 ಆ.29 ಸಿಲೂcರ್‌, ಅಸ್ಸಾಂನಲ್ಲಿ ವಿಮಾನಾಪಘಾತ; 39 ಸಾವು

1971 ಮಾ.26 ದಿಲ್ಲಿಯಲ್ಲಿ ಡಕೋಟಾ ವಿಮಾನಾಪಘಾತ; 15 ಮಂದಿ ಸಾವು

1972, ಆ.11 ಪಾಲಂನಲ್ಲಿ ಫಾಕ್ಕರ್‌ ಫ್ರೆಂಡ್‌ಶಿಪ್‌ ಅಪಘಾತ; 18 ಸಾವು

1973 ಮೇ.31 ದಿಲ್ಲಿಯಲ್ಲಿ ಬೋಯಿಂಗ್‌ ಪತನ; 48 ಸಾವು

1976 ಅ.12 ಮುಂಬಯಿಯಲ್ಲಿ ವಿಮಾನ ಪತನ; 95 ಮಂದಿ ಸಾವು

1978 ಆ.4 ಪುಣೆಯಲ್ಲಿ ಆವ್ರೋ 748 ಪತನ; 45 ಸಾವು

1978 ನ/ಡಿ ನವೆಂಬರ್‌ನಲ್ಲಿ ಲೇಹ್‌ನಲ್ಲಿ ಎಎನ್‌ 42 ಪತನ; 77 ಸಾವು, ಡಿಸೆಂಬರ್‌ನಲ್ಲಿ ಹೈದ್ರಾಬಾದ್‌ನಲ್ಲಿ ಬೋಯಿಂಗ್‌ 737 ಪತನ; 3 ಮಂದಿ ಸಾವು

1988 ಅ.19 ಅಹ್ಮದಾಬಾದ್‌ನಲ್ಲಿ ಏರ್‌ ಇಂಡಿಯಾ 737 ಬೋಯಿಂಗ್‌ ಪತನ 131 ಸಾವು

1990 ಫೆ.14 ಬೆಂಗಳೂರು ವಿ.ನಿಲ್ದಾಣದಲ್ಲಿ ಏರ್‌ಬಸ್‌ 320 ಪತನ; 92 ಮಂದಿ ಸಾವು

1991 ಮಾ.25 ಯಲಹಂಕದಲ್ಲಿ ಆವ್ರೋ ಎಚ್‌ಎಸ್‌ 748 ವಾಯುಪಡೆ ವಿಮಾನ ಪತನ; 25 ಮಂದಿ ಸಾವು

1991 ಆ.16 ಇಂಫಾಲಾದಲ್ಲಿ ಬೋಯಿಂಗ್‌ 737 ಪತನ ; 69 ಮಂದಿ ಸಾವು

1993 ಎ.26 ಔರಂಗಾಬಾದ್‌ನಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಬೋಯಿಂಗ್‌ 737 ಪತನ; 56 ಮಂದಿ ಸಾವು

1996 ನ.12 ದಿಲ್ಲಿಯಿಂದ 60 ಕಿ.ಮೀ. ದೂರದಲ್ಲಿ ವಿಮಾನಗಳ ಡಿಕ್ಕಿ: ಸೌದಿ ಬಿ747 ಮತ್ತು ಕಝಕ್‌ ಐಎಲ್‌ 76 ಢಿಕ್ಕಿ ಎಲ್ಲ 365 ಮಂದಿ ಸಾವು.

1998, ಜು.30 ಕೊಚ್ಚಿಯಲ್ಲಿ ಡ್ರೋನಿಯರ್‌ ವಿಮಾನ ಪತನ; 6 ಮಂದಿ ಸಾವು

1999 ಮಾ.5 ಚೆನ್ನೈ ನಿಲ್ದಾಣದಲ್ಲಿ ಕಾರ್ಗೋ ವಿಮಾನ ಏರ್‌ ಫ್ರಾನ್ಸ್‌ನ ಬೋಯಿಂಗ್‌ 747ಗೆ ಬೆಂಕಿ

1999 ಮಾ.7 ಪೋಖರಣ್‌ನಲ್ಲಿ ವಾಯುಪಡೆ ಪ್ರದರ್ಶನದಿಂದ ಬರುತ್ತಿದ್ದ ವೇಳೆ ಆ್ಯಂಟನೋವ್‌ 32 ವಿಮಾನ ದಿಲ್ಲಿಯಲ್ಲಿ ಪತನ; 21 ಸಾವು

2000 ಜು.17 ಪಾಟ್ನಾ ನಿಲ್ದಾಣದಲ್ಲಿ ಅಲಯನ್ಸ್‌ ಏರ್‌ ಬೋಯಿಂಗ್‌ 737 ಪತನ; 60 ಮಂದಿ ಸಾವು

2002, ಅ.1 ಗೋವಾದ ಸನಿಹ ಎರಡು ನೌಕಾ ಪಡೆ ವಿಮಾನಗಳ ಢಿಕ್ಕಿ; 17 ಮಂದಿ ಸಾವು

2010 ಮೇ.22 ಮಂಗಳೂರಿನಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್‌ 737 ಪತನ; 152 ಮಂದಿ ಸಾವು

Published On: 08 August 2020, 09:56 AM English Summary: Air india express flight skids off runway at least 16 people dead

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.