ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಅನುದಾನ ಕೊರತೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಪತನವಾಗೋ ಸ್ಥಿತಿಯನ್ನ ತಲುಪಿದೆ. ಹೌದು ತೀರ ಸಂಕಷ್ಟದ ಸ್ಥಿತಿಗೆ ತಲುಪಿರುವ ಲಂಕಾದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿವೆ. ಇತ್ತ ತೈಲೋತ್ನನ್ನಗಳನ್ನು ಕೂಡ ಆಮದು ಮಾಡಿಕೊಳ್ಳಲಾರದ ಸ್ಥಿತಿಗೆ ಇಂದು ಲಂಕಾ ಬಂದು ತಲುಪಿದೆ. ಜೊತೆ ಜೊತಗೆ ವಿದ್ಯೂತ್ ಸಮಸ್ಯೆ ಕೂಡ ಜನರನ್ನು ಹೈರಾಣಾಗಿಸಿದೆ.
ಇದನ್ನೂ ಓದಿ: 15 ಸಾವಿರ ಶಿಕ್ಷಕರ ನೇಮಕಾತಿ: ಎಂಜಿನಿಯರಿಂಗ್ ಪದವಿಧರರಿಗೆ ಭರ್ಜರಿ ನ್ಯೂಸ್ ನೀಡಿದ ಸರ್ಕಾರ
ಹೀಗೆ ಅಲ್ಲಿಯ ಸರ್ಕಾರ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳಲಿ ಸಾಧ್ಯವಾಗದೇ ಸಂಕಷ್ಟ ಸಿಲುಕಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರ ಅಲ್ಲಿನ ವಿದ್ಯಾರ್ಥಿಗಳ ಪರೀಕ್ಷೆಯನ್ನು ಕ್ಯಾನ್ಸಲ್ ಮಾಡಿದೆ ಆದೇಶಿಸಿದೆ. ದೇಶದಲ್ಲಿ ಪೇಪರ್ ಕೊರತೆ ಎದುರಾಗಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ ಎಂದು ವರದಿಗಳಾಗಿವೆ. ಈ ನಿರ್ಧಾರದಿಂದ ಲಂಕಾದ 45 ಲಕ್ಷ ವಿದ್ಯಾರ್ಥಿಗಳು ಭವಿಷ್ಯದ ಆತಂಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Share ಮಾರ್ಕೇಟ್‌ನಲ್ಲಿ ಸ್ವಲ್ಪನಾದ್ರು ಹಣ ಗಳಿಸೋದು ಹೇಗೆ..? ಇಲ್ಲಿವೆ Top 5 ಸೂತ್ರಗಳು
ಇವೆಲ್ಲ ಕಾರಣಗಳಿಂದ ದೇಶಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆಯೂ ಇಳಿಮುಖವಾಗಿದ್ದು, ಪ್ರವಾಸೋದ್ಯಮ ಮೇಲೆ ಅಧಿಕ ಪ್ರಭಾವ ಬೀರಿದೆ. ಕೊರೊನಾದಿಂದ ಮೊದಲೇ ಬೆಂಡಾಗಿರುವ ಈ ಕ್ಷೇತ್ರಕ್ಕೆ ಸದ್ಯದ ಈ ಹೊಡೆತ ಇನ್ನಷ್ಟು ಸೋಲಿಸಿ ಆರ್ಥಿಕ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟಿದೆ. ಇದರ ನಡುವೆ ಲಂಕಾದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಲಂಕಾಗೆ 1 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಔಷಧ, ಆಹಾರ, ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ನೆರವಾಗಲು ಸಾಲ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
Trend ಸೃಷ್ಟಿಸಿದ James!̧ Cinema ನೋಡಿದ ಪ್ರೇಕ್ಷಕರು Full ಫಿದಾ
Share your comments