1. ಸುದ್ದಿಗಳು

ಕೋಲ್ಡ್‌ ಸ್ಟೋರೇಜ್‌ ಘಟಕದ ಕೊರತೆ: ಕರ್ನಾಟಕದ ಒಣದ್ರಾಕ್ಷಿಯಿಂದ ಮಹಾರಾಷ್ಟ್ರಕ್ಕೆ ಲಾಭ!

Hitesh
Hitesh
Shortage of cold storage units: Karnataka's raisins benefit Maharashtra!

ರಾಜ್ಯದ ರೈತರಿಗೆ ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಸರ್ಕಾರ ಪದೇ ಪದೇ ವಿಫಲವಾಗುತ್ತಿದ್ದು, ಇದರ ಲಾಭವನ್ನು ನೆರೆಯ ರಾಜ್ಯಗಳು ಪಡೆದುಕೊಳ್ಳಲು ಪ್ರಾರಂಭಿಸಿವೆ.

Gold Rate| ಹೊಸ ವರ್ಷದ ಮೊದಲ ವಾರವೇ ಚಿನ್ನ, ಬೆಳ್ಳಿದರ ಹೆಚ್ಚಳ!

ರಾಜ್ಯದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಇದೆ. ಇದರಿಂದಾಗಿ ಮಹಾರಾಷ್ಟ್ರ ರಾಜ್ಯವರು, ಕರ್ನಾಟಕದ ಒಣದ್ರಾಕ್ಷಿಗಳ ಪಡೆದುಕೊಳ್ಳುತ್ತಿವೆ. ಮಹಾರಾಷ್ಟ್ರ ಬಳಿಕ ಕರ್ನಾಟಕ ದೇಶದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಎರಡನೇ ರಾಜ್ಯವಾಗಿದೆ. ಆದರೂ, ಒಟ್ಟು ಉತ್ಪನ್ನದ ಪೈಕಿ ಶೇ.25ರಷ್ಟು ದ್ರಾಕ್ಷಿಗಳ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಹೊಂದಿದೆ. ಕರ್ನಾಟಕದಲ್ಲಿ ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 20 ಸಾವಿರ ಹೆಕ್ಟೇರ್‌ಗಳಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ 

ಅಲ್ಲದೇ ವಾರ್ಷಿಕವಾಗಿ ಅಂದಾಜು 5 ಲಕ್ಷ ಟನ್‌ ದ್ರಾಕ್ಷಿಗಳನ್ನ ಬೆಳೆಯಲಾಗುತ್ತದೆ. 4 ಲಕ್ಷ ಟನ್ ದ್ರಾಕ್ಷಿಗಳ ಪೈಕಿ 1.25 ಲಕ್ಷ ಟನ್ ದ್ರಾಕ್ಷಿಗಳನ್ನ್ನು ಬಳಕೆ ಮಾಡಲಾಗುತ್ತದೆ. ಉಳಿದ ದ್ರಾಕ್ಷಿಯನ್ನು ವೈನ್ ತಯಾರಿ ಮಾಡುವುದಕ್ಕೆ ಬಳಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಕೇವಲ 30 ಸಾವಿರ ಕೆಜಿ ಸಾಮರ್ಥ್ಯ ಇರುವಂತಹ ದ್ರಾಕ್ಷಿ ಸಂಗ್ರಹಣೆ ಮಾಡುವುದಕ್ಕೆ ಮಾತ್ರ ಕೋಲ್ಡ್ ಸ್ಟೋರೇಜ್ ಘಟಕದ ವ್ಯವಸ್ಥೆ ಇದೆ.

ರಾಜ್ಯದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳು ದ್ರಾಕ್ಷಿ ಬೆಳೆಗೆ ಅತ್ತ್ಯುತ್ತಮ ವಾತಾವರಣ ಸೃಷ್ಟಿಸುತ್ತದೆ. ರಾಜ್ಯ ಸರ್ಕಾರವು ಒಣದ್ರಾಕ್ಷಿಯಿಂದ ವಾರ್ಷಿಕ 2 ಸಾವಿರಕ್ಕೂ ಹೆಚ್ಚು  ಕೋಟಿ ರೂಪಾಯಿಯ ಆದಾಯವನ್ನು ಗಳಿಸುತ್ತದೆ. ಆದರೆ, ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಇಲ್ಲಿ ಎದುರಾಗಿದ್ದು. ಇದರ ಲಾಭವನ್ನು ಮಹಾರಾಷ್ಟ್ರ ರಾಜ್ಯ ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಒಣದ್ರಾಕ್ಷಿಗಳಿಗೆ ತನ್ನದೇ ಬ್ರ್ಯಾಂಡ್ ನೀಡಿ ಮಾರಾಟ ಮಾಡುತ್ತಿದೆ ಎಂದು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲಿ ವಿಜಯಪುರದ ತೊರವಿ ಗ್ರಾಮದಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದರು.

ಆದರೆ, ಬಜೆಟ್‌ನಲ್ಲಿ ಕೋಲ್ಡ್‌ ಸ್ಟೋರೇಜ್‌ ಘಟಕ ಪ್ರಾರಂಭವಾಗಿ ಘೋಷಣೆ ಮಾಡಿದ್ದರೂ, ಇಲ್ಲಿಯ ವರೆಗೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಕೋಲ್ಡ್‌ ಸ್ಟೋರೇಜ್‌ ಘಟಕವನ್ನು ಪ್ರಾರಂಭ ಮಾಡಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮವನ್ನು ವಹಿಸದೇ ಇರುವುದರಿಂದ ರೈತರು ಸಹ ನಷ್ಟವನ್ನು ಅನುಭವಿಸುವಂತಾಗಿದೆ.

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ   

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಬಯಸಿದೆ ಎಂದು ತೋಟಗಾರಿಕೆ ಇಲಾಖೆಯ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.  

ಸರ್ಕಾರವು ಭೂಮಿಯನ್ನು ಒದಗಿಸುತ್ತಿತ್ತು ಮತ್ತು ಉಳಿದ ವೆಚ್ಚವನ್ನು ಒಪ್ಪಂದ ಮಾಡಿಕೊಂಡ ವ್ಯಕ್ತಿಗಳು ಭರಿಸಬೇಕಿದೆ. ಆದರೆ, ಈ ಕುರಿತು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ ಎನ್ನಲಾಗಿದೆ. 

PM Kisan| ಪಿ.ಎಂ ಕಿಸಾನ್‌ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್‌! 

Published On: 04 January 2023, 04:35 PM English Summary: Shortage of cold storage units: Karnataka's raisins benefit Maharashtra!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.