1. ಸುದ್ದಿಗಳು

ಗ್ರಾಹಕರಿಗೆ ಶಾಕಿಂಗ್‌ ಸುದ್ದಿ: ನಾಳೆಯಿಂದ ಮತ್ತೆ Amul, Mother Dairy ಹಾಲಿನ ದರ ಹೆಚ್ಚಳ!

Kalmesh T
Kalmesh T
Shocking news: Amul, Mother Dairy milk price hike again from tomorrow!

ಜನ ಸಾಮಾನ್ಯರಿಗೆ ಮತ್ತೆ ಶಾಕಿಂಗ್‌ ಸುದ್ದಿ. ಆಗಸ್ಟ್‌ 17 ಅಂದರೆ ನಾಳೆಯಿಂದ ಮತ್ತೆ ಅಮುಲ್‌, ಮದರ್‌ ಡೈರಿ ಹಾಲಿನ ದರದಲ್ಲಿ ಹೆಚ್ಚಳ. ಎಷ್ಟು ಗೊತ್ತೆ? ಇಲ್ಲಿದೆ ಮಾಹಿತಿ..

ಇದನ್ನೂ ಓದಿರಿ: ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್‌: ಕರ್ತವ್ಯದ ವೇಳೆ ನಿಧನರಾಗುವ ಈ ಉದ್ಯೋಗಿಗಳ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ!

Milk Price Hike: ಅಮುಲ್‌ ಹಾಗೂ ಮದರ್‌ ಡೈರಿ ಕಂಪನಿ ಹಾಲಿನ ದರ ಹೆಚ್ಚಿಸುತ್ತಿದೆ. ಆಗಸ್ಟ್‌ 17, 2022 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಎರಡೂ ಕಂಪನಿಗಳು ಹೇಳಿಕೊಂಡಿದೆ.

ಇತ್ತೀಚಿಗಷ್ಟೇ ಪೆಟ್ರೋಲ್‌, ಡಿಸೆಲ್‌, ದಿನ ಬಳಕೆ ಸಾಮಗ್ರಿ , ಹಾಲಿನ ದರಗಳು ಹೆಚ್ಚಾಗಿದ್ದವು. ಈಗ ಮತ್ತೆ ಹಾಲಿನ ದರದಲ್ಲಿ ಹೆಚ್ಚಳ ಮಾಡಲು ಅಮುಲ್‌ ಹಾಗೂ ಮದರ್‌ ಡೈರಿ ತಿರ್ಮಾನಿಸಿವೆ.

ಈ ಪರಿಷ್ಕೃತ ಹಾಲಿನ ದರ ನಾಳೆ ಅಂದರೆ ಆಗಸ್ಟ್‌ 17ರಿಂದಲೇ ಜಾರಿಗೊಳ್ಳಲಿದೆ ಎಂದು ಕೂಡ ತಿಳಿದು ಬಂದಿದೆ.

ದೇಶದ ಪ್ರಮುಖ ಹಾಲು ಹಾಗೂ ಹಾಲಿನ ಉತ್ಪನ್ನ ಬ್ರ್ಯಾಂಡ್‌ಗಳಲ್ಲೊಂದಾದ ಅಮುಲ್‌ (Amul)ನ ಹಾಲಿನ ದರ ಹೆಚ್ಚಾಗುತ್ತಿದೆ.  

Postal Jobs: ಯುವಜನತೆಗೆ ಭರ್ಜರಿ ಸುದ್ದಿ: ಅಂಚೆ ಇಲಾಖೆಯಲ್ಲಿದೆ 1 ಲಕ್ಷ ಖಾಲಿ ಹುದ್ದೆ!

ಅಮುಲ್‌ ಹಾಲು ಮಾರಾಟವಾಗುವ ಗುಜರಾತ್‌, ದೆಹಲಿ - ಎನ್‌ಸಿಆರ್‌, ಪಶ್ಚಿಮ ಬಂಗಾಳ, ಮುಂಬೈ ಹಾಗೂ ದೇಶದ ಇತರೆ ಎಲ್ಲ ಮಾರುಕಟ್ಟೆಗಳಲ್ಲಿ ಹಾಲಿನ ದರ ನಾಳೆಯಿಂದಲೇ ಹೆಚ್ಚಾಗುತ್ತಿದೆ.

Milk Price Hike : ಅಮುಲ್‌ ಹಾಲಿನ ಎಲ್ಲ ಬ್ರ್ಯಾಂಡ್‌ಗಳ ದರವೂ ನಾಳೆಯಿಂದ ಪ್ರತಿ ಲೀಟರ್‌ಗೆ 2 ರೂ. ಜಾಸ್ತಿಯಾಗಲಿದೆ. ಆಗಸ್ಟ್‌ 17 ಅಂದರೆ ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಅಮುಲ್‌ ಗೋಲ್ಡ್‌ (Amul Gold) ಹಾಲಿನ ದರ ಅರ್ಧ ಲೀಟರ್‌ಗೆ 31 ರೂ. ಗೆ ಮಾರಾಟವಾಗಲಿದ್ದರೆ, ಅಮುಲ್‌ ತಾಜಾ (Amul Taaza) ಹಾಲು ಅರ್ಧ ಲೀಟರ್‌ಗೆ 25 ರೂ. ಹಾಗೂ ಅಮುಲ್‌ ಶಕ್ತಿ (Amul Shakti) ಹಾಲು ಅರ್ಧ ಲೀಟರ್‌ಗೆ 28 ರೂ. ಗೆ ಮಾರಾಟವಾಗಲಿದೆ ಎಂದು ತಿಳಿದುಬಂದಿದೆ.

ಲೀಟರ್‌ಗೆ 2 ರೂ. ದರ ಹೆಚ್ಚಳ ಅಮುಲ್‌ ಹಾಲಿನ ಎಂಆರ್‌ಪಿಯಲ್ಲಿ ಶೇ. 4 ರಷ್ಟು ತುಟ್ಟಿಯಾಗಲಿದೆ ಎನ್ನಲಾಗುತ್ತಿದೆ. ಆದರೂ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ.

ಯುವಜನತೆಗೆ ಉದ್ಯೋಗ ಮಾಡಲು ಇಲ್ಲಿದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಲಕ್ಷ ಸಾಲ..ಅರ್ಜಿ ಸಲ್ಲಿಸುವುದು ಹೇಗೆ?

ಇನ್ನು, ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹಾಲಿನ ದರ ದುಬಾರಿಯಾಗುತ್ತಿದೆ ಎಂದು ಅಮುಲ್‌ ಕಂಪನಿ ಮಾಹಿತಿ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರು ಆಹಾರ ವೆಚ್ಚವೇ ಅಂದಾಜು ಶೇ. 20 ರಷ್ಟು ದುಬಾರಿಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ.

ಹಾಗೂ, ಇನ್ಪುಟ್‌ ವೆಚ್ಚದಲ್ಲಿ ಹೆಚ್ಚಳ ಹಿನ್ನೆಲೆ ನಮ್ಮ ಸದಸ್ಯ ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8 - 9 ರಷ್ಟು ಹೆಚ್ಚಾಗಿದೆ ಎಂದೂ ಅಮುಲ್‌ ಮಾಹಿತಿ ನೀಡಿದೆ.

ಅಮುಲ್‌ ಬ್ರ್ಯಾಂಡ್‌ನಡಿ ಗುಜರಾತ್‌ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್‌) (Gujarat Cooperative Milk Marketing Federation) ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

Good News: ಭೂ ರಹಿತ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ಲಾಭ-ಸಿಎಂ ಬೊಮ್ಮಾಯಿ

ತನ್ನ ಗ್ರಾಹಕರಿಂದ ಪಡೆದ ಪ್ರತಿ 1 ರೂಪಾಯಿಯಲ್ಲಿ ಅಂದಾಜು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವುದು ಅಮುಲ್‌ ಬ್ರ್ಯಾಂಡ್‌ನ ನೀತಿ.

ಈ ಹಿನ್ನೆಲೆ ಈ ದರ ಹೆಚ್ಚಳವು ನಮ್ಮ ಹಾಲು ಉತ್ಪಾದಕರಿಗೆ ಉತ್ತಮ ಹಾಲಿನ ದರವನ್ನು ನೀಡುವುದಕ್ಕೆ ಸಹಾಯ ಮಾಡುತ್ತದೆ.

ಇದರಿಂದ ಹಾಲಿನ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ತೇಜಿಸುತ್ತದೆ ಎಂದೂ ಗುಜರಾತ್‌ ಸಹಕಾರಿ ಹಾಲು ಮಾರಾಟ ಒಕ್ಕೂಟ ಹೇಳಿಕೊಂಡಿದೆ.

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

ಮದರ್‌ ಡೈರಿಯಿಂದಲೂ ಹಾಲಿನ ದರ ಹೆಚ್ಚಳ

ಇನ್ನೊಂದೆಡೆ, ಅಮುಲ್‌ ಬೆನ್ನಲ್ಲೇ ಮದರ್‌ ಡೈರಿ (Mother Dairy) ಕಂಪನಿ ಸಹ ತನ್ನ ಹಾಲಿನ ದರವನ್ನು ಹೆಚ್ಚಿಸುತ್ತಿದೆ. ನಾಳೆಯಿಂದ ಲೀಟರ್‌ಗೆ 2 ರೂ. ದರ ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ದೆಹಲಿ - ಎನ್‌ಸಿಆರ್‌ ಪ್ರದೇಶ ವ್ಯಾಪ್ತಿಯಲ್ಲಿ ಈ ಪರಿಷ್ಕೃತ ದರ ಜಾರಿಯಾಗಲಿದೆ ಎಂದೂ ಕಂಪನಿ ಹೇಳಿಕೊಂಡಿದೆ.

ಆಗಸ್ಟ್ 17 ರಿಂದ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದೂ ಕಂಪನಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಸಹ ಮದರ್‌ ಡೈರಿ ಕಂಪನಿ ದೆಹಲಿ - ಎನ್‌ಸಿಆರ್‌ ಪ್ರದೇಶದಲ್ಲಿ ಲೀಟರ್‌ಗೆ 2 ರೂ. ನಷ್ಟು ಹಾಲಿನ ದರವನ್ನು ದುಬಾರಿಯಾಗಿಸಿತ್ತು.

ಈಗ 5 ತಿಂಗಳಲ್ಲಿ ಮತ್ತೊಮ್ಮೆ ತನ್ನ ಕಂಪನಿಯ ಹಾಲಿನ ದರ ಹೆಚ್ಚಿಸುತ್ತಿದೆ.

Published On: 16 August 2022, 05:46 PM English Summary: Shocking news: Amul, Mother Dairy milk price hike again from tomorrow!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.