1. ಸುದ್ದಿಗಳು

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ Shock!

Kalmesh T
Kalmesh T
Shock the price hike again for the general public. Many of the services will be expensive from April.

ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈಗ ಮತ್ತೆ ಬೆಲೆ ಏರಿಕೆಯ Shock ತಟ್ಟಲಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲುಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಮೊನ್ನೆಯಷ್ಟೇ LPG ದುಬಾರಿಯಾಗಿತ್ತು. ಇದರೊಂದಿಗೆ ಮತ್ತಷ್ಟು ಸೇವೆಗಳು ದುಬಾರಿಯಾಗುವ ಹಂತದಲ್ಲಿವೆ. ಯಾವೆಲ್ಲಾ ಸೇವೆಗಳ ದರ ಏರಿಕೆಯಾಗಲಿದೆ ಏನ್ನುವುದನ್ನು ತಿಳಿಯಲು ಇದನ್ನು  ಓದಿರಿ.

ಇದನ್ನು ಓದಿರಿ:

Breaking News ಮತ್ತೊಂದು Bank ಮುಚ್ಚಲು RBI ನಿರ್ಧಾರ!

ಬೆಂಗಳೂರಿನ ಜನರಿಗೆ April 1ರಿಂದ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಈ ಬಗ್ಗೆ ಬೆಸ್ಕಾಂ ನಿರ್ಧರಿಸಿದೆ. ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC- Karnataka Electricity Regulatory Commission) ಮುಂದಾಗಿದ್ದು,  April 1ರಿಂದ ಅನ್ವಯವಾಗುವಂತೆ ಹೊಸ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಈಗಾಗಲೇ February ಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ KERC ಅಭಿಪ್ರಾಯ ಸಂಗ್ರಹ ಮಾಡಿದೆ. ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರದ ಪಟ್ಟಿಯನ್ನು KERC ಬಿಡುಗಡೆ ಮಾಡಲಿದೆ.

ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ KERC ದರ ಪರಿಷ್ಕರಣೆ ಮಾಡುತ್ತದೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನಲೆಯಲ್ಲಿ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಡ ಹೆಚ್ಚುತ್ತಿದೆ. ಪ್ರತಿ ಯೂನಿಟ್​ಗೆ 1.50 ರೂ. ಹೆಚ್ಚಿಸುವಂತೆ ಬೆಸ್ಕಾಂ ಪ್ರಸ್ತಾವನೆ ಕಳುಹಿಸಿದೆ. ಜನರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲು KERC ಮುಂದಾಗಿದೆ. 2022-23 ರ ಸಾಲಿನಲ್ಲಿ ಪ್ರತಿ ಯೂನಿಟ್​ಗೆ 35 ರಿಂದ 45 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದ್ದು ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಓದಿರಿ:

Breaking News ಮತ್ತೊಂದು Bank ಮುಚ್ಚಲು RBI ನಿರ್ಧಾರ!

April​ನಿಂದ ಹಾಲಿನ ದರ ಏರಿಕೆಯಾಗುವ ಸಾಧ್ಯತೆ

ಏಪ್ರಿಲ್​ನಿಂದ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹಾಲು ಒಕ್ಕೂಟಗಳು ಬೆಲೆ ಏರಿಕೆಗೆ ಪಟ್ಟು ಹಿಡಿದಿದ್ದು, 5 ರೂಪಾಯಿ ಏರಿಕೆಗೆ ಮನವಿ ಮಾಡಿವೆ. ಕನಿಷ್ಠ 2 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಅಧಿವೇಶನ ಮುಗಿದ ಬಳಿಕವೇ ದರ ಏರಿಕೆಗೆ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ. ಕಳೆದ 2 ವರ್ಷಗಳಿಂದ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 14 ಹಾಲು ಒಕ್ಕೂಟಗಳಿಂದ ದರ ಏರಿಕೆಗೆ ಒತ್ತಡ ಹೇರಲಾಗಿದೆ.

ಇತ್ತೀಚೆಗೆ ಏರಿದ್ದ LPG ಸಿಲಿಂಡರ್ ಬೆಲೆ

ಮಾ.22ರಂದು 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 50 ರೂ. ಏರಿಕೆ ಮಾಡಲಾಗಿತ್ತು. ಇದರಿಂದ 902.50 ಇದ್ದ ಎಲ್​ಪಿಜಿ ಸಿಲಿಂಡರ್ ಬೆಲೆ 952.50 ರೂಗೆ ಏರಿತ್ತು. ವಾಣಿಜ್ಯ ಸಿಲಿಂಡರ್​ನಲ್ಲಿ 100 ರೂ ಏರಿಕೆಯಾಗಿದ್ದು, 19 ಕೆಜಿಯ ಸಿಲಿಂಡರ್​ಗೆ 2,100 ರೂ ದರ ನಿಗದಿಯಾಗಿತ್ತು.

ಮತ್ತಷ್ಟು ಓದಿರಿ:

ರೈತರಿಗಾಗಿ ಸರ್ಕಾರದಿಂದ ಸಹಾಯಧನ..! Hydroponics ಮತ್ತು Aeroponics ಕೃಷಿಗಾಗಿ ನೆರವು

Published On: 25 March 2022, 11:29 AM English Summary: Shock the price hike again for the general public. Many of the services will be expensive from April.

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.