1. ಸುದ್ದಿಗಳು

ರೈತರಿಗೆ ಶಾಕಿಂಗ್‌ : ನಿಲ್ಲುತ್ತಾ ಪಿಎಂ ಕುಸುಮ್‌ ಯೋಜನೆ?

Maltesh
Maltesh

ದೇಶದ ಕೃಷಿ ಕ್ಷೇತ್ರದಲ್ಲಿ ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ, ಪಿಎಂ ಕುಸಮ್‌ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೌದು 2018 ರಲ್ಲಿ ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಯೋಜನೆಯಾದ PM-KUSUM ಅನ್ನು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ನೀಡಲಾಗುವುದು ಎಂದು ಚರ್ಚೆಗಳು ನಡೆಯುತ್ತಿವೆ. ಆರ್ಥಿಕ ಕಾರಣಗಳಿಂದ ದೇಶದಲ್ಲಿ ಪಿಎಂ ಕುಸುಮ್‌ ಯೋಜನೆಯ ಪ್ರಗತಿಯು ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯಗಳ ಸುಪರ್ದಿಗೆ ಯೋಜನೆಯನ್ನು ಹಸ್ತಾಂತರಿಸಲಾಗುತ್ತೆ ಎಂದು ಮೂಲಗಳು ತಿಳಿಸಿವೆ.

ವಂಚನೆಯ ಪ್ರಭಾವ!
ಇನ್ನು ಪ್ರಧಾನಮಂತ್ರಿ ಕುಸುಮ್‌ ಯೋಜನೆಯ ಹೆಸರಲ್ಲಿ ಸಾಕಷ್ಟು ವಂಚನೆಯ ಪ್ರಕರಣಗಳು ಕೂಡ ಬೆಳಕಿಗೆ ಬಂದವು. ಅನೇಕ ಖದೀಮರು ಪಿಎಂ ಕುಸುಮ್‌ ಯೋಜನೆಯ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಗಳನ್ನು ಸೃಷ್ಟಿ ರೈತರಿಂದ ಅಪಾರ ಹಣವನ್ನು ಪಡೆದು ವಂಚಿಸದ ಘಟನೆಗಳು ಬೆಳಕಿಗೆ ಬಂದವು. ಹೀಗೆ ಈ ಯೋಜನೆಯ ಹೆಸರಿನ ಮೇಲೆ ಸಾಕಷ್ಟು ರೈತರು ತಮ್ಮ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಸಾಂಕ್ರಾಮಿಕ ರೋಗ, ಹಣದ ಕೊರತೆಯಿಂದ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್ ಯೋಜನೆ (PM-KUSUM) ಪ್ರಗತಿಯು ನಿಧಾನವಾಗಿ ಸಾಗಿದೆ. ಇತ್ತ ಅಗತ್ಯವಿರುವ ಅನುದಾನದ ಕೊರತೆ ಮತ್ತು ಜಾಗೃತಿ ಕೊರತೆಯಿಂ ಈ ಯೋಜನೆಯು ಈ ವರ್ಷ ಬಜೆಟ್ ಅನುದಾನವನ್ನು ಪಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ಪ್ರಧಾನ ಮಂತ್ರಿ ಕುಸುಮ್ ಯೋಜನೆ ಬಗ್ಗೆ ಒಂದಿಷ್ಟು (Pradhan Mantri Kusum Yojana)
ಅನ್ನದಾತರಿಗೆ ಬೇಸಾಯಕ್ಕಾಗಿ ನೀರು ಮತ್ತು ವಿದ್ಯುತ್ ಒದಗಿಸುವ ನಿಟ್ಟಿನಲಿ, ಭಾರತ ಸರ್ಕಾರವು 2018 ರಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯನ್ನು ಪ್ರಾರಂಭಿಸಿತು. ಕೃಷಿ ಭೂಮಿಗೆ ನೀರಾವರಿಗಾಗಿ ಸೌಲಭ್ಯಗಳನ್ನು ಒದಗಿಸುವುದ ಈ ಯೋಜನೆಯ ಉದ್ದೇಶವಾಗಿದೆ.

ಇದರಿಂದ ರೈತರ ವಿದ್ಯುತ್ ಮತ್ತು ಶ್ರಮ ಎರಡನ್ನೂ ಉಳಿಸಬಹುದು. ಈ ಯೋಜನೆಯು ಸೌರಶಕ್ತಿಯ ಸಹಾಯದಿಂದ ದೇಶದ ಸುಮಾರು 3 ಕೋಟಿ ರೈತರಿಗೆ ಬಂಜರು ಭೂಮಿಗೆ ನೀರುಣಿಸಲು ಸಹಾಯ ಮಾಡುತ್ತದೆ.

ಕೇಂದ್ರ ಸರ್ಕಾರದ ಅಧೀನದಲಿನ ಪಿಎಂ ಕುಸುಮ್ ಯೋಜನೆಯಡಿ ಸೌರಶಕ್ತಿ ಆಧಾರಿತ ನೀರಾವರಿ ಪಂಪ್‍ಸೆಟ್‍ಗಳನ್ನು ಯOಜಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.

PM-KUSUM, Component_B ಯೋಜನೆಯಡಿಯಲ್ಲಿ ಕೊಳವೆ/ತೆರೆದ ಬಾವಿಗಳಿಗೆ ಗರಿಷ್ಟ 7.5 ಹೆಚ್.ಪಿ. ಸಾಮರ್ಥ್ಯದವರೆಗೆ ಪ್ರತಿ ಸೌರ ಪಂಪ್‍ಸೆಟ್‍ಗೆ ಶೇ. 30 ರಷ್ಟು ಸಹಾಯಧನ ಒದಗಿಸಲಾಗುವುದು ಹಾಗೂ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಪಂಗಡ ವರ್ಗದ ರೈತ ಫಲಾನುಭವಿಗಳ ಕೊಳವೆ/ತೆರೆದ ಬಾವಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಲು ಶೇ. 50 ರಷ್ಟು ಸಹಾಯಧನ ಒದಗಿಸಲಾಗುವುದು.

Published On: 26 December 2023, 02:26 PM English Summary: Shock for farmers: Prime Minister's Kusum Yojana stalled?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.