1. ಸುದ್ದಿಗಳು

EPF ಖಾತೆದಾರರಿಗೆ Shock..! 2.50 ಲಕ್ಷ ಮೀರಿದ ಕೊಡುಗೆಗೆ ತೆರಿಗೆ

Kalmesh T
Kalmesh T
Shock for EPF Account holders ..! Tax on contribution exceeding Rs. 2.50 lakh

ಉದ್ಯೋಗಿಗಳು ಹಾಗೂ ಉದ್ಯೋಗದಾತರ ಕೊಡುಗೆ ಎರಡೂ ಸೇರಿ ವಾರ್ಷಿಕ  2.50 ಲಕ್ಷ ರೂ. ಮೀರಿರೋ ಕೊಡುಗೆಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲಿದೆ. ಆದ್ರೆ ಸರ್ಕಾರಿ ನೌಕರರಿಗೆ ಮಾತ್ರ ಈ ಗರಿಷ್ಠ ಮಿತಿಯನ್ನು 5ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ವಾರ್ಷಿಕ ಆದಾಯ ಗಳಿಕೆ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಅಧಿಕ ವೇತನ ಪಡೆಯೋ ವ್ಯಕ್ತಿಗಳು ಪಿಎಫ್ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಠೇವಣಿಯಿರಿಸಿರೋ ಪ್ರಕರಣಗಳನ್ನು ನಿದರ್ಶನವಾಗಿಟ್ಟುಕೊಂಡು ಸರ್ಕಾರ ಪಿಎಫ್ ಕೊಡುಗೆಗಳ ಮೇಲೆ ತೆರಿಗೆ ವಿಧಿಸೋ ನಿರ್ಧಾರ ಕೈಗೊಂಡಿದೆ. 

ಇದನ್ನು ಓದಿರಿ:

Job updates: ONGC ಯಲ್ಲಿ ನೇಮಕಾತಿ ಆರಂಭ..ಈ ಪದವಿ ಪಡೆದವರಿಗೆ ಆದ್ಯತೆ

ಭಾರತದಿಂದ IOS-Andriodಗೆ ಟಕ್ಕರ್! ಸ್ವಂತ ಮೊಬೈಲ್ ಒಎಸ್ ತಯಾರಿಸಲಿದೆಯಾ India

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2021-22ನೇ ಆರ್ಥಿಕ ಸಾಲಿನಲ್ಲಿ ಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು 40 ವರ್ಷಗಳಿಗಿಂತಲೂ ಅಧಿಕ ಅವಧಿಯ ಅತ್ಯಧಿಕ ಕಡಿಮೆ ಮಟ್ಟಕ್ಕೆ ಇಳಿಕೆ ಮಾಡಿರೋ ಈ ಸಂದರ್ಭದಲ್ಲೇ ಸರ್ಕಾರ ತೆರಿಗೆ ವಿಧಿಸೋ ನಿರ್ಧಾರವನ್ನು ಕೂಡ ಕೈಗೊಂಡಿರೋದು ನೌಕರರಿಗೆ ಶಾಕ್ ನೀಡಿದೆ. 

ಹೊಸ PF ತೆರಿಗೆ ಏನು ಹೇಳುತ್ತೆ?

ಹೊಸ ಆದಾಯ ತೆರಿಗೆ (IT) ನಿಯಮಗಳಡಿಯಲ್ಲಿ ಪಿಎಫ್ ಖಾತೆಗಳನ್ನು ತೆರಿಗೆ ವಿಧಿಸಲ್ಪಡೋ ಹಾಗೂ ತೆರಿಗೆ ವಿಧಿಸಲ್ಪಡದ ಖಾತೆಗಳೆಂದು 2022ರ ಏಪ್ರಿಲ್ 1ರಿಂದ ವಿಂಗಡಿಸಲಾಗುತ್ತದೆ. ಈ ಹೊಸ ನಿಯಮಗಳ ಮೂಲಕ ಕೇಂದ್ರ ಸರ್ಕಾರ ಅಧಿಕ ವೇತನ ಪಡೆಯೋ ಜನರು ಸರ್ಕಾರದ ಕಲ್ಯಾಣ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳೋದನ್ನು ತಪ್ಪಿಸೋ ಉದ್ದೇಶ ಹೊಂದಿದೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಅಧಿಕ ಕೊಡುಗೆ ಮೇಲೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಇನ್ನಷ್ಟು ಓದಿರಿ:

36 Million ವರ್ಷ ಹಳೆಯ ತಿಮಿಂಗಲು ಪತ್ತೆ! ಇದರ Speciality ಏನು?

Demand ಸೃಷ್ಟಿಸಿದ ಬೀಟ್ರೂಟ್ ಕೃಷಿ! , 60 ದಿನಗಳಲ್ಲಿ ಸಿಕ್ಕಾಪಟ್ಟೆ ಗಳಿಸಬಹುದು

ಹೊಸ ನಿಯಮಗಳ ಅನುಷ್ಠಾನಕ್ಕೆ ಸೆಕ್ಷನ್‌ ಜಾರಿ

ಹೊಸ ನಿಯಮಗಳ ಅನುಷ್ಠಾನಕ್ಕೆ 1962ರ ಆದಾಯ ತೆರಿಗೆ ನಿಯಮಗಳಡಿಯಲ್ಲಿ 9D ಎಂಬ ಹೊಸ ಸೆಕ್ಷನ್ ಸೇರಿಸಲಾಗಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರ ಮಂಡಳಿ (CBDT) ಅಧಿಸೂಚನೆ ಹೊರಡಿಸಿದೆ. 2021 ಏಪ್ರಿಲ್ 1 ರಿಂದ 2022ರ ಮಾರ್ಚ್ 31ರವರೆಗಿನ ಹಣಕಾಸು ವರ್ಷದ ಕೊಡುಗೆಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. 20ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರೋ ಸಂಸ್ಥೆಯಲ್ಲಿ 15 ಸಾವಿರಕ್ಕಿಂತ ಹೆಚ್ಚಿನ ವೇತನ ಪಡೆಯೋ ಉದ್ಯೋಗಿಗಳು ಕಡ್ಡಾಯವಾಗಿ ಪಿಎಫ್ ಖಾತೆ ಹೊಂದಿರಬೇಕು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಪಿಎಫ್ ಠೇವಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಂಪಡೆಯಲಾಗುತ್ತಿತ್ತು. ಆದರೂ ಕೂಡ ಸರ್ಕಾರ  2020-21ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಾಯಿಸದೆ  ಶೇ. 8.5 ಕ್ಕೆಇರಿಸಿತ್ತು.  2019-20ರಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳ ಕನಿಷ್ಠ ಶೇ.8.5ಕ್ಕೆ ಇಳಿಸಿತ್ತು. ಇನ್ನು2018-19ರಲ್ಲಿ ಬಡ್ಡಿ ದರ ಶೇ.8.65 ಇತ್ತು. 

ಮತ್ತಷ್ಟು ಓದಿರಿ: 

BAMBOO FARMING! ಇದು ಹಸಿರು ಬಂಗಾರ! ಸರ್ಕಾರ ಶೇ.50% ಸಹಾಯಧನ ನೀಡಲಿದೆ?

ಹೋಳಿ ಹಬ್ಬದಲ್ಲಿ ಮುಖ ಹಾಗೂ ಕೂದಲಿನ ರಕ್ಷಣೆ ಹೇಗೆ..?ಇಲ್ಲಿವೆ 5 ಬೆಸ್ಟ್‌ ಟಿಪ್ಸ್‌

ತುರ್ತು ವೈದ್ಯಕೀಯ ವೆಚ್ಚಗಳಿಗೆ ಹಣ Draw

ಕೋವಿಡ್ -19 ಪರಿಣಾಮ ವೈದ್ಯಕೀಯ ವೆಚ್ಚ ಭರಿಸಲು ನೌಕರ ವರ್ಗ ಅನುಭವಿಸಿದ ಸಂಕಷ್ಟವನ್ನು ಗಮನಿಸಿ ಕೋವಿಡ್ -19 ಸೇರಿದಂತೆ ಪ್ರಾಣಕ್ಕೆ ಅಪಾಯವುಂಟು ಮಾಡೋ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚಕ್ಕೆ ಹಾಗೂ ವೈದ್ಯಕೀಯ ತುರ್ತು ಅಗತ್ಯವಾಗಿ 1ಲಕ್ಷ ರೂ. ತನಕ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದೆಂದು EPFO 2021May ನಲ್ಲಿ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಕೂಡ ವೈದ್ಯಕೀಯ ವೆಚ್ಚಗಳಿಗೆ ಪಿಎಫ್ ಖಾತೆಯಿಂದ ಮುಂಗಡವಾಗಿ ಹಣ ಪಡೆಯೋ ಅವಕಾಶವಿತ್ತು. ಆದ್ರೆ ಆಸ್ಪತ್ರೆಯಿಂದ ಅಂದಾಜು ವೆಚ್ಚದ ವಿವರಗಳನ್ನು ಪಡೆದು ಇಪಿಎಫ್ ಒಗೆ ಸಲ್ಲಿಸಬೇಕಿತ್ತು. ಆದ್ರೆ ಹೊಸ ಆದೇಶದ ಪ್ರಕಾರ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಹಣ ಪಡೆಯಬಹುದು.

ಇದನ್ನು ಓದಿರಿ:

IMPORTANT: PPF ಖಾತೆದಾರರೆ ಗಮನವಿರಲಿ..ಈ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಬಡ್ಡಿ ಹಣ ಹೋಗೋದು ಫಿಕ್ಸ್‌..!

Share ಮಾರ್ಕೇಟ್‌ನಲ್ಲಿ ಸ್ವಲ್ಪನಾದ್ರು ಹಣ ಗಳಿಸೋದು ಹೇಗೆ..? ಇಲ್ಲಿವೆ Top 5 ಸೂತ್ರಗಳು

Published On: 20 March 2022, 05:39 PM English Summary: Shock for EPF Account holders ..! Tax on contribution exceeding Rs 2.50 lakh

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.