Shah Rukh Khan ಬಾಲಿವುಡ್‌ನ ಬಾದ್ ಶಾ ಎಂದೇ ಖ್ಯಾತರಾದ ಶಾರುಕ್ ಖಾನ್ಅವರು ಮತ್ತೊಂದು ಋಣಾತ್ಮಕ ವಿಷಯಕ್ಕೆ ಸಂಬಂಧಿಸಿ ಸುದ್ದಿಯಲ್ಲಿದ್ದಾರೆ.
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023: ಅದ್ಧೂರಿ ಆಚರಣೆಗೆ ಸಿದ್ಧತೆ!
ಶಾರುಕ್ ಖಾನ್ಅವರಿಗೆ ಈ ಬಾರಿ ಮುಳುವಾಗಿದ್ದು, ಅವರ ದುಬಾರಿ ವಾಚ್! ಶಾರುಕ್ ಖಾನ್ ಅವರನ್ನುಮುಂಬೈ ವಿಮಾನ ನಿಲ್ದಾಣದಲ್ಲಿ
ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಒಂದು ತಾಸಿಗೂ ಅಧಿಕ ವಿಚಾರಣೆಗೆ ಒಳಪಡಿಸಿದ್ದು, ಅಲ್ಲದೇ ದಂಡವನ್ನೂ ಪಾವತಿಸಿಕೊಂಡಿದ್ದಾರೆ.
ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಮಾರುಕಟ್ಟೆಯಲ್ಲಿ ಚಿನ್ನದ ದರ ?
ಕಸ್ಟಮ್ ಅಧಿಕಾರಿಗಳಿಗೆ 6.83 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು ಎಂದು ಹೇಳಲಾಗಿದೆ. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಾಲ್ಗೊಂಡಿದ್ದ ಅವರು, ಶಾರ್ಜಾದಿಂದ ಹಿಂತಿರುಗುತ್ತಿದ್ದರು.
ಈ ವೇಳೆ ಮುಂಬೈನಲ್ಲಿ ಅಧಿಕಾರಿಗಳು ತಡೆದಿದ್ದು, ದುಬಾರಿ ವಾಚ್‌ನ ಕುರಿತು ವಿಚಾರಣೆಗೆ ಒಳಪಡಿಸಿದ್ದಾರೆ.
ಮುಂಬೈನ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 6.88 ಲಕ್ಷ ಕಸ್ಟಮ್ಸ್ ಸುಂಕವನ್ನು ಶಾರುಕ್ ಖಾನ್ ಅವರು ಕಟ್ಟಿದ್ದಾರೆ.
ದುಬೈನಿಂದ ಖಾಸಗಿ ಜೆಟ್‌ನಲ್ಲಿ ಆಗಮಿಸಿದ ಶಾರುಕ್ ಮತ್ತು ಅವರ ತಂಡದ ಐವರು ಸದಸ್ಯರ ಬ್ಯಾಗ್‌ನಲ್ಲಿ ಒಟ್ಟು 18 ಲಕ್ಷ ಮೌಲ್ಯದ ದುಬಾರಿ
ವಾಚ್‌ಗಳು ಪತ್ತೆ ಆಗಿದ್ದರ ಹಿನ್ನೆಲೆಯಲ್ಲಿ ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
MBBS ಪುಸ್ತಕಗಳು ಕನ್ನಡಕ್ಕೆ ಅನುವಾದವಾಗುವುದೇ, ಸರ್ಕಾರದ ನಿಲುವೇನು?
ಶಾರುಕ್ ಖಾನ್ ಅವರು ಶಾರ್ಜಾದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಪ್ರಶ್ನೆ ಮಾಡಿದ್ದಾರೆ.
ಶಾರುಕ್ ಅವರನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಆರು ಐಷಾರಾಮಿ ವಾಚ್‌ಗಳು ಶಾರುಕ್ ಮತ್ತು ಅವರ ತಂಡದವರ ಬ್ಯಾಗ್‌ನಲ್ಲಿ ಪತ್ತೆ ಆಗಿತ್ತು.
ಕಸ್ಟಮ್ಸ್ ನಿಯಮಗಳನ್ನು ಪೂರ್ಣಗೊಳಿಸಿದ ನಂತರ ಶಾರುಕ್ಅವರಿಗೆ ವಿಮಾನ ನಿಲ್ದಾಣದಿಂದ ತೆರಳಲು ಅನುಮತಿ ನೀಡಲಾಗಿದೆ.
ನೇಪಾಳದಲ್ಲಿ ಒಂದೇ ವಾರದಲ್ಲಿ ಮೂರನೇ ಬಾರಿ ಭೂಕಂಪನ: ದೆಹಲಿ ಜನಕ್ಕೆ ಆತಂಕ!
ಶಾರುಕ್ ಅವರ ಪರವಾಗಿ ಅವರ ಬಾಡಿಗಾರ್ಡ್ ರವಿಶಂಕರ್ ಸಿಂಗ್ ಸುಂಕವನ್ನು ಕಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.
ತಡರಾತ್ರಿ 12.30ರ ಸುಮಾರಿಗೆ ಶಾರುಕ್ ಖಾನ್ ಅವರು, ತಮ್ಮ ಮ್ಯಾನೇಜರ್ ಪೂಜಾ ಡಲ್ಡಾನಿಯಾ, ಸಿಂಗ್ ಮತ್ತು ಇತರರ ಜೊತೆ ಚಾರ್ಟರ್ಡ್ ವಿಮಾನದಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.
ಈ ವೇಳೆ ಅವರ ಬ್ಯಾಗ್‌ಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ದುಬಾರಿ ವಾಚ್‌ಗಳು ಇರುವುದು ಬೆಳಕಿಗೆ ಬಂದಿತ್ತು.
ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ಬ್ಯಾಗೇಜ್ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಗಳು 6 ಬ್ಯಾಗ್‌ಗಳ ಪೈಕಿ ಎರಡರಲ್ಲಿ 6 ಐಷಾರಾಮಿ ಕೈಗಡಿಯಾರಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು.
Share your comments