1. ಸುದ್ದಿಗಳು

#Gandhadagudi: ಜನಮೆಚ್ಚಿದ ಪುನೀತ್‌ ರಾಜ್‌ಕುಮಾರ “ಗಂಧದಗುಡಿ”ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ!

Kalmesh T
Kalmesh T
Late Puneet Rajkumar’s Gandhadagudi Cinema Released Today

ದಿವಂಗತ ನಟ ಪುನೀತ್ ರಾಜ್‌ಕುಮಾರ್ (Late Puneet Rajkumar’s) ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ಗಂಧದ ಗುಡಿ ಇವತ್ತು ಬಿಡುಗಡೆಯಾಗಿದೆ.

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

ಅಕಾಲಿಕವಾಗಿ ಅಭಿಮಾನಿಗಳನ್ನು ಅಗಲಿದ ನೆಚ್ಚಿನ ನಟನನ್ನು ಮತ್ತೆ ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳ ಭಾವುಕತೆಗೆ ಇವತ್ತಿನ ದಿನ ಸಾಕ್ಷಿಯಾಗಲಿದೆ.

ಪ್ರತಿಯೊಬ್ಬ ಪುನೀತ್‌ ಅಭಿಮಾನಿಯೂ ಇವತ್ತು ತಪ್ಪದೇ ನೋಡಬೇಕಾದ ಸಿನಿಮಾ ಎಂದರೆ ಅದು 'ಗಂಧದಗುಡಿ' (Gandhadagudi) ಎನ್ನಬಹುದೇನೊ. 'ಗಂಧದಗುಡಿ' ಸಿನಿಮಾ ಸುಮಾರು ಒಂದುವರೆ ಗಂಟೆಯ ಡಾಕ್ಯುಮೆಂಟರಿ ಆಗಿದೆ.

ಇಲ್ಲಿ ಪುನೀತ್ ರಾಜ್‌ಕುಮಾರ್‌ (Puneet Rajkumar) ಅವರು ಸ್ಟಾರ್ ಬದಲಾಗಿ ನಾಡಿನ ಪ್ರಾಣಿಸಂಕುಲ, ಜಲಚರ, ಬೆಟ್ಟ ಗುಡ್ಡ, ನದಿ, ಸಮುದ್ರಗಳ ಸೌಂದರ್ಯವನ್ನ ಪುಟ್ಟಮಗುವಿನಂತೆ ವೀಕ್ಷಿಸಿ ಆ ಖುಷಿಯ ಕ್ಷಣಗಳನ್ನ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೇನೊ ಎನ್ನುವ ಭಾವನೆ ಮೂಡುವುದು ಸುಳ್ಳಲ್ಲ.

'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು!

ಗಂಧದಗುಡಿ ಹೌಸ್‌ಫುಲ್‌ ಪ್ರದರ್ಶನ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power star Puneeth Rajkumar) ಕೊನೆಯ ಚಿತ್ರ `ಗಂಧದ ಗುಡಿ’ (Gandhada Gudi) ಬಿಡುಗಡೆಯಾಗಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ನೋಡಿದವರೆಲ್ಲಾ ಹುಟ್ಟಿನಿಂದ ನಾವೆಲ್ಲ ಬದುಕುತ್ತಿರುವ ಕರ್ನಾಟಕ ಇಷ್ಟೊಂದು ಅದ್ಭುತವಾಗಿ, ಸುಂದರವಾಗಿ ಇದ್ಯಾ ಎನ್ನುವುದನ್ನ ಅಚ್ಚರಿಯಿಂದ ನೋಡುತ್ತಿದ್ದಾರೆ.

ತಾಯಿ ನೆಲದ ಸೌಂದರ್ಯವನ್ನು ನಮಗೇ ಪರಿಚಯಿಸಿ ಹೋದ ಅಪ್ಪುವಿನ  ನೆನಪಿನಲ್ಲಿ ಭಾವುಕರಾಗಿದ್ದಾರೆ.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ?

ಪುನೀತ್ ಪರ್ವ ಮಾಡಿದ್ದು ಅಭಿಮಾನಿಗಳಿಗಾಗಿ. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಬಂದಿದ್ದರು. ಇದು ನನಗೆ ತುಂಬಾ ಸಂತೋಷ ನೀಡಿದೆ. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿರುತ್ತದೆ.

ಕಳೆದ ಒಂದು ವರ್ಷದಿಂದ ಸರ್ಕಾರ ನಮ್ಮ ಜೊತೆಗಿದೆ. ಎಲ್ಲರ ಬೆಂಬಲದಿಂದ ಕಾರ್ಯಕ್ರಮ ಚೆನ್ನಾಗಿ ನಡೆಯಿತು ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Raj kumar) ಹೇಳಿದ್ದಾರೆ.

Published On: 28 October 2022, 11:39 AM English Summary: Late Puneet Rajkumar’s Gandhadagudi Cinema Released Today

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.