1. ಸುದ್ದಿಗಳು

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದೆ ಬೆಳಗಾವಿಯಲ್ಲಿ ಅಧಿವೇಶನ: ಅಸಮಾಧಾನ

Hitesh
Hitesh
Session in Belgaum without solving sugarcane growers' problem: Discontent

ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳ ಕಬ್ಬು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲದ ಸರ್ಕಾರಕ್ಕೆ ಬೆಳಗಾವಿ ಅಧಿವೇಶನ ನಡೆಸುವ ನೈತಿಕತೆ ಇಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ.

ಮಾಂಡೌಸ್‌ ಚಂಡಮಾರುತ ಪ್ರಭಾವ: ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಬ್ಬು ಬೆಳೆಗಾರರ ನಿರಂತರ ಧರಣಿ 21ನೇ ದಿನದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ರಾಜ್ಯದ 50ರಷ್ಟು ಕಬ್ಬು ಬೆಳೆಯುವ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ರೈತರ ಕಬ್ಬುದರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲದ ರಾಜ್ಯ ಸರ್ಕಾರಕ್ಕೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ನಾಟಕ ಏಕೆ ಎಂದು ಪ್ರಶ್ನಿಸಿದರು.  

ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ  ಲಗಾಣಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲವೇ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ತೆರಿಗೆ ಹಣದಿಂದ ಹೆಚ್ಚುವರಿ ಮಾಡಲಿ, ಸಣ್ಣಪುಟ್ಟ ತಪ್ಪುಗಳಿಗೆ ಜನರನ್ನ ಜೈಲಿಗೆ ಕಳಿಸುವ ಸರ್ಕಾರಕ್ಕೆ ರೈತರಿಗೆ ಹಣ ಪಾವತಿ ಮೋಸ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ ಮಾಡುವ ಸಕ್ಕರೆ ಕಾರ್ಖಾನೆಗಳ ಮಾಲಿಕರ ವಿರುದ್ಧ ಯಾಕೆ ಮೂಕದಮ್ಮೆ ದಾಖಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಮಲೆನಾಡು ಭಾಗದಲ್ಲಿ ಆನೆ ಹಾವಳಿ: ಕೇಂದ್ರಕ್ಕೆ ನಿಯೋಗ ಪ್ರಜ್ವಲ್‌ ರೇವಣ್ಣ 

ದಾವಣಗೆರೆ ಜಿಲ್ಲೆ ರೈತ ಮುಖಂಡ ಅಂಜನಪ್ಪ ಪೂಜಾರ ಮುರುಗೇಂದ್ರಯ್ಯ ಮಾತನಾಡಿದರು.

ಹಳಿಯಾಳದ ಕುಮಾರ್ ಬುಬಾಟಿ,ಬರಡನಪುರ ನಾಗರಾಜ್,ಭೆಳಗಾವಿ ಗುರುಸಿದ್ದಪ್ಪ ಕೋಟಗಿ, ಶ್ರೀ ಮತಿ ಲಕ್ಷ್ಮಿ ,ಮಹಾಂತೇಶ್ ಜಮಖಂಡಿ ಇದ್ದರು.  

ರೈತ ಹುತಾತ್ಮರಿಗೆ ಗೌರವ

ವರ್ಷಕಾಲ ನಡೆದ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತರಿಗೆ ನಮನ ಸಲ್ಲಿಸಲು ಡಿಸೆಂಬರ್ 11 ಅನ್ನು ದೇಶಾದ್ಯಂತ ರೈತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ.

ಕೆಂದ್ರ ಸರ್ಕಾರ ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನ ಹಿಂದೆ ಪಡೆದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿ ನಡೆದ  ರೈತ ಆಂದೋಲನದವನ್ನು ನಿಲ್ಲಿಸಿ ದೆಹಲಿ ಬಾರ್ಡರ್ ನಿಂದ ಹಿಂತಿರುಗಿದ ದಿನವಾಗಿದೆ.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯು ಈ ದಿನವನ್ನು  ದೇಶಾದ್ಯಂತ ರೈತ ಹುತಾತ್ಮ ದಿನವಾಗಿ ಆಚರಿಸಲು ತೀರ್ಮಾನಿಸಿದೆ, ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು ಭಾನುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಮೇಣದ ಬತ್ತಿ ಉರಿಸಿ ಪ್ರಾಣತ್ಯಾಗ ಮಾಡಿದ ರೈತರಿಗೆ ನಮನ ಸಲ್ಲಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ ಕೆ.ವಿ ಬಿಜು ಮಾತನಾಡಿ, ಕೇಂದ್ರ ಸರ್ಕಾರ ಹೋರಾಟದಲ್ಲಿ ಮಡಿದ ರೈತರಿಗೆ 5 ಲಕ್ಷ ರೂ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿ ಇನ್ನೂ ಕೂಡ ಸಾವನಪ್ಪಿದ ಕುಟುಂಬಗಳ ರಕ್ಷಣೆ ಮಾಡಿಲ್ಲ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ರೂಪಿಸುತ್ತೇವೆ ಎಂದು ಹೇಳಿ, ಇನ್ನು ಜಾರಿ ಮಾಡಿಲ್ಲ, ರೈತರ ವಂಚಿಸುವ ಕೆಲಸ ಆಗಬಾರದು, ಎಂದರು.

ಮಾಂಡೌಸ್‌ ಚಂಡಮಾರುತ ಪ್ರಭಾವ: ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

Session in Belgaum without solving sugarcane growers' problem: Discontent

ತೆಲಂಗಾಣ ರಾಜ್ಯದ ರೈತ ಮುಖಂಡ ವೆಂಕಟೇಶ್ವರ ರಾವ್ ಮಾತನಾಡಿ, ದೆಹಲಿ ರೈತ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಕೆಸಿಆರ್ ರವರು ಪ್ರತಿ ಕುಟುಂಬಕ್ಕೆ ಮೂರು ಲಕ್ಷದಂತೆ ಪರಿಹಾರ ನೀಡಿದ್ದಾರೆ, ಕೇಂದ್ರ ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ, ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಹೆಚ್ಚು ಹೊತ್ತು ನೀಡುವುದು ಒಳ್ಳೆ ಬೆಳವಣಿಗೆ ಇಲ್ಲ ದೇಶದ ರೈತರು ಬೆಳೆದ ಉತ್ಪನ್ನಗಳನ್ನು ಶ್ರೀಲಂಕಾ ಬಾಂಗ್ಲಾ ದೇಶಗಳಿಗೆ ದಾನ ಮಾಡುವ ನಮ್ಮ ಪ್ರಧಾನಿಗೆ ನಮ್ಮ ರೈತರ ಸಾವು ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ನಮ್ಮ ತೆಲಂಗಾಣ ರಾಜ್ಯದಲ್ಲಿ ಶೇಕಡ 9 ಸಕ್ಕರೆ ಇಳುವರಿ ಬರುವ ಕಬ್ಬಿಗೆ 3200 ನಿಗದಿ ಮಾಡಿದ್ದಾರೆ ಕರ್ನಾಟಕ ಏಕೆ ಹೆಚ್ಚುವರಿ ನಿಗದಿ ಮಾಡಲು ಸಾಧ್ಯವಿಲ್ಲ ತೆಲಂಗಾಣದಲ್ಲಿ ಸರ್ಕರ ರೈತರಿಗೆ ಗೂಬ್ಬರ ಬೀಜ ಖರೀದಿಗೆ ಎಕರೆಗೆ 10‌ಸಾವಿರ ನಿಡುತಾರೆ ಇದೆ ರೀತಿ ದೇಶದ ಎಲ್ಲ ಭಾಗದಲ್ಲಿ ಇದೆ ರೀತಿ ಯಾಗಭೇಕು ರೈತರು ಸಂಘಟಿತರಾಗಿ ಹೋರಾಟ ಮುಂದುವರಿಸಿ ದೇಶದ ರೈತರೆಲ್ಲ ನಿಮ್ಮ ಜೊತೆಯಲ್ಲಿದ್ದೇವೆ ಎಂದರು.

ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು!

Session in Belgaum without solving sugarcane growers' problem: Discontent

ರಾಜ್ಯ ರೈತ ಸಂಘಟನೆಗಳು ಒಕ್ಕೂಟ ಹಾಗೂ ಸಂಯುಕ್ತ ಕಿಸಾನ್ ಮೋರ್ಚ ದಕ್ಷಿಣ ಭಾರತ ರಾಜ್ಯಗಳ ಮುಖ್ಯಸ್ಥ ಕುರುಬೂರ್ ಶಾಂತಕುಮಾರ್ ಮಾತನಾಡಿ, ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳಶಾಹಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ, ಸುಳ್ಳು ಭರವಸೆಗಳನ್ನು ನೀಡುತ್ತಲೆ ಕಾಲ ಕಳೆದು ರೈತರನ್ನ ದಿಕ್ಕು ತಪ್ಪಿಸುವ ಕಾರ್ಯ ಮಾಡಬೇಡಿ, .

ತಮಿಳುನಾಡಿನ ಮಾಣಿಕ್ಯಂ, ಉತ್ತರಕನ್ನಡ ಜಿಲ್ಲೆ ಅಧ್ಯಕ್ಷ ಕುಮಾರ ಬೂಬಾಟಿ, ರಾಜ್ಯ ರೈತಸಂಘದ ಅಧ್ಯಕ್ಷ ನಾರಾಯಣರೆಡ್ಡಿ,ಪಿ ಸೂಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ, ಗುರುಸಿದ್ದಪ್ಪಕೂಟಗಿ ಇದ್ದರು.

Published On: 12 December 2022, 04:41 PM English Summary: Session in Belgaum without solving sugarcane growers' problem: Discontent

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.