1. ಸುದ್ದಿಗಳು

Bengaluru ಬೆಂಗಳೂರಿನ 8 ವಲಯಗಳಿಗೆ ಇದೀಗ ಪ್ರತ್ಯೇಕ ವಲಯ ಆಯುಕ್ತರು: ಸಮಸ್ಯೆ ಇದ್ದರೆ ಕಾಲ್‌ ಮಾಡಿ!

Hitesh
Hitesh
Separate Zonal Commissioners for 8 Zones of Bengaluru: Call if there is a problem!

ಬೆಂಗಳೂರಿನ 8 ವಲಯಗಳಿಗೆ ಇದೀಗ ಪ್ರತ್ಯೇಕ ವಲಯ ಆಯುಕ್ತರು ಆಯೋಜಿಸಿದ್ದು, ಅವರ ದೂರವಾಣಿ ಸಂಖ್ಯೆ ಸೇರಿ ಎಲ್ಲ ವಿವರ ಇಲ್ಲಿದೆ.   

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯಗಳಿಗೆ ಸರ್ಕಾರವು ಸಾರ್ವಜನಿಕ ಕೆಲಸ ಕಾರ್ಯಗಳ

ಸುಗಮ ನಿರ್ವಹಣೆಯ ಉದ್ದೇಶದಿಂದ ಹಿರಿಯ ಐ.ಎ.ಎಸ್ ಅಧಿಕಾರಿಗಳನ್ನು ಪ್ರತ್ಯೆಕವಾಗಿ ನಿಯೋಜಿಸಿದೆ.

ಎಲ್ಲಾ ವಲಯ ಆಯುಕ್ತರುಗಳು ತಮ್ಮ ವಲಯ ವ್ಯಾಪ್ತಿಯ ಸಂಪೂರ್ಣ ಅಧಿಕಾರ ನಿರ್ವಹಣೆ,

ಸರ್ಕಾರದ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ.

ಸಾರ್ವಜನಿಕರು ಸಂಬಂಧಿಸಿದ ವಲಯ ಆಯುಕ್ತರ ಕಛೇರಿಗಳಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿ,

ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಆಯಾ ವಲಯ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ವಲಯ ಆಯುಕ್ತರ ಮಟ್ಟದಲ್ಲಿಯೇ ನಿವಾರಿಸಿಕೊಳ್ಳಬಹುದಾಗಿದೆ. 

ಇದರಿಂದ ಆಯಾ ವಲಯ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಕಛೇರಿ ಕೆಲಸ ಕಾರ್ಯಗಳನ್ನು ಹಾಗೂ ಸೇವೆಗಳನ್ನು ಒದಗಿಸಲಾಗುವುದು.

ವಲಯ ಆಯುಕ್ತರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಕಚೇರಿಗಳ ವಿಳಾಸದ ವಿವರ ಇಲ್ಲಿದೆ.  

 1. ಪೂರ್ವ ವಲಯ:

ಸ್ನೇಹಲ್. ಆರ್, ಭಾ.ಆ.ಸೇ.,

ಮೊ.ಸಂ: 8277335816

ವಿಳಾಸ: ರೆಸಿಡೆನ್ಸಿ ರಸ್ತೆ, ಮೇಯೋಹಾಲ್, ಬೆಂಗಳೂರು - 560001.

 1. ಪಶ್ಚಿಮ ವಲಯ:

ಡಾ. ಆರ್. ಎಲ್. ದೀಪಕ್, ಐ.ಆರ್.ಎಸ್.,

ಮೊ.ಸಂ: 94484 50954

ವಿಳಾಸ: ಸಂಪಿಗೆ ರಸ್ತೆ(ಮಂತ್ರಿ ಮಾಲ್ ಎದುರು), ಭಾಷ್ಯಂ ಉದ್ಯಾನ ಪಕ್ಕ, ಮಲ್ಲೇಶ್ವರ, ಬೆಂಗಳೂರು - 560020

 1. ದಕ್ಷಿಣ ವಲಯ: 

ಆರ್. ವಿನೋಥ್ ಪ್ರಿಯಾ, ಭಾ.ಆ.ಸೇ.,

ಮೊ.ಸಂ: 9482575916

ವಿಳಾಸ: 9ನೇ ಅಡ್ಡ ರಸ್ತೆ, 2ನೇ ಬ್ಲಾಕ್, ಜಯ ನಗರ ಪೂರ್ವ, ಜಯನಗರ, ಬೆಂಗಳೂರು – 560011.

 1. ಯಲಹಂಕ ವಲಯ:
  ಕರೀ ಗೌಡ, ಭಾ.ಆ.ಸೇ.,

ಮೊ.ಸಂ: 7760504651

ವಿಳಾಸ: ಅಮೃತಹಳ್ಳಿ ಮುಖ್ಯ ರಸ್ತೆ, ಅಮೃತಹಳ್ಳಿ, ಬ್ಯಾಟರಾಯನಪುರ, ಬೆಂಗಳೂರು – 560092.

 1. ಮಹದೇವಪುರ ವಲಯ:

ಇಬ್ರಾಹಿಂ ಮೈಗೂರು, ಭಾ.ಆ.ಸೇ.,

ಮೊ.ಸಂ: 9986716666

ವಿಳಾಸ: ವೈಟ್‌ಫೀಲ್ಡ್ ಮುಖ್ಯ ರಸ್ತೆ, ಫೀನಿಕ್ಸ್ ಮಾರ್ಕೆಟ್‌ಸಿಟಿ ಎದುರು, ಆರ್.ಹೆಚ್.ಬಿ ಕಾಲೋನಿ, ಮಹದೇವಪುರ, ಬೆಂಗಳೂರು – 560048. 

 6. ಬೊಮ್ಮನಹಳ್ಳಿ ವಲಯ:

ರಮ್ಯಾ , ಭಾ.ಆ.ಸೇ.,
ಮೊ.ಸಂ: 97413 53738
ವಿಳಾಸ: ಬಿಡಿಎ ಕಾಂಪ್ಲೆಕ್ಸ್, ಮೊದಲನೇ ಹೆಚ್.ಎಸ್.ಆರ್ ಲೇಔಟ್, ಬೆಂಗಳೂರು – 560102. 

 7. ರಾಜರಾಜೇಶ್ವರಿ ನಗರ ವಲಯ:

ವಿಕಾಸ್ ಕಿಶೋರ್ ಸುರೋಳ್ಕರ್, ಭಾ.ಆ.ಸೇ.,

ಮೊ.ಸಂ: 9480502491

ವಿಳಾಸ: ಐಡಿಯಲ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು – 560098.

 1. ದಾಸರಹಳ್ಳಿ ವಲಯ: 
  ಪ್ರೀತಿ ಗೆಹ್ಲೋಟ್, ಭಾ.ಆ.ಸೇ.,
  ಮೊ.ಸಂ: 9480683000
  ವಿಳಾಸ: ಹೆಸರಘಟ್ಟ ಮುಖ್ಯ ರಸ್ತೆ, ಎಂ.ಇ.ಐ ಬಡಾವಣೆ, ಬಗಲಗುಂಟೆ, ಬೆಂಗಳೂರು - 560073

ಆಯಾ ವಲಯ ವ್ಯಾಪ್ತಿಯಲ್ಲಿ ಎದುರಾಗುವ ಹಾಗೂ ಬಿಬಿಎಂಪಿಗೆ ಸಂಬಂಧಿಸಿದ ಕರೆಗಳಿಗೆ ನೀವು ಸಂಪರ್ಕಿಸಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ. 

Published On: 13 October 2023, 03:25 PM English Summary: Separate Zonal Commissioners for 8 Zones of Bengaluru: Call if there is a problem!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.