1. ಸುದ್ದಿಗಳು

SBI ಬ್ಯಾಂಕ್‌ನಲ್ಲಿ 92 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 8 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಎಸ್.ಬಿ.ಐ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಮತ್ತು ಪೋಸ್ಟ್‌ ಡಾಕ್ಟರಲ್ ರಿಸರ್ಚ್ ಫೆಲೋ ಪೋಸ್ಟಗಳನ್ನು ರೆಗ್ಯುಲರ್ ಬೇಸಿಸ್ ಮೇಲೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ವಿವರ

ರಿಸ್ಕ್‌ ಸ್ಪೆಷಲಿಸ್ಟ್ ಸೆಕ್ಟಾರ್ (ಸ್ಕೇಲ್-3)

05

ರಿಸ್ಕ್‌ ಸ್ಪೆಷಲಿಸ್ಟ್ ಸೆಕ್ಟಾರ್ (ಸ್ಕೇಲ್-2)

05

ಪೋರ್ಟ್‌ಪೊಲಿಯೋ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್‌ ( ಸ್ಕೇಲ್-2)

03

ರಿಸ್ಕ್‌ ಸ್ಪೆಷಲಿಸ್ಟ್ ಕ್ರೆಡಿಟ್ (ಸ್ಕೇಲ್‌-3)

02

ರಿಸ್ಕಟ್‌ ಸ್ಪೆಷಲಿಸ್ಟ್‌ ಕ್ರೆಡಿಟ್ (ಸ್ಕೇಲ್-2)

02

ರಿಸ್ಕ್ ಸ್ಪೆಷಲಿಸ್ಟ್‌ ಎಂಟರ್‌ಪ್ರೈಸಸ್ (ಸ್ಕೇಲ್ -2)

01

ರಿಸ್ಕ್‌ ಸ್ಪೆಷಲಿಸ್ಟ್‌ IND AS(ಸ್ಕೇಲ್-3)

04

ಡೆಪ್ಯೂಟಿ ಮ್ಯಾನೇಜರ್ (ಡಾಟಾ ಸೈಂಟಿಸ್ಟ್‌)

11

ಮ್ಯಾನೇಜರ್ (ಡಾಟಾ ಸೈಂಟಿಸ್ಟ್‌)

11

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ ಆಫೀಸರ್)

05

ಡಾಟಾ ಪ್ರೊಟೆಕ್ಷನ್ ಆಫೀಸರ್

01

ಪೋಸ್ಟ್ ಡಾಕ್ಟರಲ್ ರೀಸನ್ ಫೆಲೋ

05

ಡಾಟಾ ಟ್ರೈನರ್

01

ಡಾಟಾ ಟ್ರ್ಯಾನ್ಸ್‌ಲೇಟರ್

01

ಸೀನಿಯರ್ ಕನ್ಸಲ್ಟಂಟ್ ಅನಾಲಿಸ್ಟ್

01

ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್

01

ಡೆಪ್ಯೂಟಿ ಮ್ಯಾನೇಜರ್ (ಸೆಕ್ಯೂರಿಟಿ)

28

ಮ್ಯಾನೇಜರ್ (ರೀಟೈಲ್ ಪ್ರಾಡಕ್ಟ್‌)

05

ಒಟ್ಟು ಹುದ್ದೆಗಳ ಸಂಖ್ಯೆ

92

ವಿದ್ಯಾರ್ಹತೆಮೇಲಿನ ವಿವಿಧ ಹುದ್ದೆಗಳಿಗೆ ಅಗತ್ಯ ವಿದ್ಯಾರ್ಹತೆಯ ವಿವರಗಳನ್ನು ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಕ್ಲಿಕ್‌ ಮಾಡಿ ತಿಳಿಯಬಹುದು.

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ - ಶುಲ್ಕ ವಿನಾಯಿತಿ ನೀಡಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ - 18-09-2020, ಅರ್ಜಿ ಶುಲ್ಕ ಪಾವತಿಸಲು 08-10-2020 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ ಅಥವಾ ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಸಹ ಪಾವತಿಸಬಹುದು. ಆನ್‌ಲೈನ್‌ ಮೂಲಕ  ಅರ್ಜಿ ಸಲ್ಲಿಸಲು ಈ ಮುಂದಿನ ಲಿಂಕ್- https://www.sbi.co.in/  ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು

Published On: 19 September 2020, 01:05 PM English Summary: SBI SO Recruitment 2020-Apply online for 92 specialist officer posts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.