Krishi Jagran Kannada
Menu Close Menu

10 ಸಾವಿರಕ್ಕಿಂತ ಮೇಲ್ಪಟ್ಟ ವ್ಯವಹಾರಕ್ಕೆ ಮೊಬೈಲ್‌ OTP ಕಡ್ಡಾಯ- ಇಂದೇ ಬ್ಯಾಂಕ್ ಖಾತೆಗೆ ಮೊಬೈಲ್ ನಂ. ಲಿಂಕ್ ಮಾಡಿಸಿ

Wednesday, 16 September 2020 05:46 PM

ಎಸ್.ಬಿ.ಐ ಬ್ಯಾಂಕ್ ಗ್ರಾಹಕರು ಇನ್ನೂ ಮುಂದೆ 10 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಬೇಕಾದರೆ ನಿಮ್ಮ ಬಳಿ ಮೊಬೈಲ್ ಇರಲೇಬೇಕು. ಏಕೆಂದರೆ 10 ಸಾವಿರಕ್ಕಿಂತ ಹೆಚ್ಚು ಹಣ ಪಡೆಯುವ ಗ್ರಾಹಕರಿಗೆ ಎಸ್.ಬಿ.ಐ ಬ್ಯಾಂಕ್ ಹೊಸ ನಿಯಮವನ್ನು ರೂಪಿಸಿದೆ.

ಎಟಿಎಂನಿಂದ ಹಣ ವಿತ್​ಡ್ರಾ ಮಾಡುವ ವಿಚಾರದಲ್ಲಿ ಸಾಕಷ್ಟು ಫ್ರಾಡ್​ಗಳು ನಡೆಯುತ್ತಿವೆ  ಸಾಕಷ್ಟು ಜನರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಎಟಿಎಂನಿಂದ ಹಣ ತೆಗೆಯಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸೆಪ್ಟೆಂಬರ್ 18ರಿಂದ ದೇಶಾದ್ಯಂತ ಎಲ್ಲಾ ಎಸ್.ಬಿ.ಐ ಬ್ಯಾಂಕ್ ಎಟಿಎಂಗಳಲ್ಲಿ ಈ ನಿಯಮ ಅನ್ವಯ ಆಗಲಿದೆ.

ಈ ಹಿಂದೆ ನೀವು ನೇರವಾಗಿ ಎಟಿಎಂಗೆ ತೆರಳಿ ನಿಮಗೆ ಬೇಕಾಗ ಹಣವನ್ನು ನಮೂದಿಸಿ ಹಿಂಪಡೆಯಬಹುದಾಗಿತ್ತು. ಇದೀಗ ಆ ಪ್ರಕ್ರಿಯೆಗೆ ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಸೇರ್ಪಡೆಯಾಗಲಿದೆ.

ಎಟಿಎಂನಿಂದ 10 ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ನಗದನ್ನು ಹಿಂತೆಗೆದುಕೊಳ್ಳುವ ಸಂದರ್ಭ ಒಟಿಪಿ ಬರುತ್ತದೆ. ಈ ಮೊದಲು ರಾತ್ರಿ ಎಂಟು ಗಂಟೆಯಿಂದ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭ ಒಟಿಪಿ ಅಗತ್ಯ ಇತ್ತು.ಅದನ್ನೀಗ 24X7 ಮಾದರಿಗೆ ವಿಸ್ತರಿಸಿದೆ.

ಸಾಮಾನ್ಯವಾಗಿ ಬ್ಯಾಂಕ್​ ಖಾತೆಯೊಂದಿಗೆ ನಿಮ್ಮ ಮೊಬೈಲ್​ ನಂಬರ್​ ಲಿಂಕ್​ ಆಗಿರುತ್ತದೆ. ಒಂದೊಮ್ಮೆ ಲಿಂಕ್​ ಆಗಿಲ್ಲ ಎಂದಾದರೆ ಇಂದೇ ಬ್ಯಾಂಕ್​ಗೆ ತೆರಳಿ ಮೊಬೈಲ್​ ಸಂಖ್ಯೆ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ, ಎಟಿಎಂಗೆ ತೆರಳುವಾಗ ನೀವು ಮೊಬೈಲ್​ಅನ್ನು ಕೊಂಡೊಯ್ಯಬೇಕು. ಇಲ್ಲದಿದ್ದರೆ 10 ಸಾವಿರಕ್ಕಿಂತ ಹೆಚ್ಚು ಹಣ ಪಡೆಯಲಾಗುವುದಿಲ್ಲ.

ಹಣ ಪಡೆಯುವ ಪ್ರಕ್ರಿಯೆ:

ಸೆಪ್ಟೆಂಬರ್‌ 18 ಶುಕ್ರವಾರ, ನೀವು 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಎಟಿಎಂಗೆ ಹೋದರೆ, ಕಾರ್ಡ್‌ ನಮೂದಿಸಿ ಮತ್ತು ಮೊತ್ತವನ್ನು ಹಾಕಿದ ಬಳಿಕ ಬ್ಯಾಂಕ್‌ಗೆ ನೀಡಲಾದ ಅಥವ ನೋಂದಾಯಿಸಿದ ಮೊಬೈಲ್‌ ನಂಬರ್‌ಗೆ ಒಟಿಪಿ ಇರುತ್ತದೆ. ಈ ಒಟಿಪಿಯನ್ನು ಡೆಬಿಟ್‌ ಕಾರ್ಡ್‌ನ ಪಿನ್‌ನೊಂದಿಗೆ ನಮೂದಿಸಬೇಕಾಗುತ್ತದೆ. ಇವಿಷ್ಟನ್ನು ನೀವು ಮಾಡಲು ಶಕ್ತವಾದರೆ ಮಾತ್ರ ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯ

OTB based cash withdrawal facility OTP Mobile SBI Bank rules changed SBI Bank atm Changing cash withdrawal rules from September 18th

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.