1. ಸುದ್ದಿಗಳು

ಶೀಘ್ರದಲ್ಲೇ ಕಿರಿಯ ಪಶು ವೈದ್ಯರ ನೇಮಕ: ಸಚಿವ ಪ್ರಭು ಚವ್ಹಾಣ್‌ ಭರವಸೆ!

Kalmesh T
Kalmesh T
Recruitment of Junior Veterinarians soon: Minister Prabhu Chavan promises!

ಬೆಳಗಾವಿಯಲ್ಲಿ 82 ಪಶು ಆ್ಯಂಬುಲೆನ್ಸ್‌, ಪ್ರಯೋಗಾಲಯ, ತರಬೇತಿ ಕೇಂದ್ರ, ಸಂಚಾರಿ ಚಿಕಿತ್ಸಾ ಘಟಕ ಲೋಕಾರ್ಪಣೆ

ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಪಶು ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗಿದೆ. ಶೀಘ್ರದಲ್ಲೇ 250 ಕಿರಿಯ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

ಇದನ್ನೂ ಓದಿರಿ: ಗುಡ್‌ನ್ಯೂಸ್‌: ರೈತ ಕುಟುಂಬಗಳ ವಾರ್ಷಿಕ ಆದಾಯ ₹10,218ಕ್ಕೆ ಏರಿಕೆ! NSS ಸಮೀಕ್ಷಾ ವರದಿ..

ಸುವರ್ಣ ವಿಧಾನಸೌಧದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಮಾಡಿದರು.

ಹಾಗೂ ಇಲಾಖೆಯ ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ, 82 ಪಶು ಸಂಜೀವಿನಿ ಆ್ಯಂಬುಲೆನ್ಸ್‌, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ರೈತರ ತರಬೇತಿ ಕೇಂದ್ರ ಹಾಗೂ ಪಶು ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯರ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೆಲವರು ನ್ಯಾಯಾಲಯಕ್ಕೆ ಪಿಐಎಲ್‌ ಹಾಕಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಶೀಘ್ರ 400 ಪಶು ವೈದ್ಯರ ನೇಮಕ ಮಾಡಲಾಗುವುದು. 12 ವರ್ಷಗಳಿಂದ ಇಲಾಖೆಯಲ್ಲಿ ಬಡ್ತಿ ಆಗಿರಲಿಲ್ಲ. ನಾನು ಬಂದ ಮೇಲೆ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.

ಬ್ರೇಕಿಂಗ್‌: ದಿನಬಳಕೆಯ ಒಟ್ಟು 14 ಅಗತ್ಯ ವಸ್ತುಗಳ ಮೇಲಿನ ತೆರಿಗೆ ಹಿಂಪಡೆದ ಕೇಂದ್ರ; ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌!

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾನು 20 ಸಾವಿರ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದೇನೆ.

ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 900 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಕ್ರೀದ್‌ ವೇಳೆ ಶೇ.70 ರಷ್ಟುಗೋವುಗಳ ರಕ್ಷಣೆಯಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಬೇಕು.

ಕಾರ್ಯಕ್ರಮದಲ್ಲಿ ಪಶು ಸಾಕಣೆ, ಚಿಕಿತ್ಸೆ, ಆಸ್ಪತ್ರೆ, ಲಾಭ ಸೇರಿ ಇನ್ನಿತರ ವಿಷಯಗಳ ಕುರಿತು ಇಲಾಖೆ ಮಾಡಿರುವ ಸಾಧನೆ ಬಗ್ಗೆ 8 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಅಡಿ 18 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳ ಚೆಕ್‌ ವಿತರಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ವಿಧಾನಸಭೆ ಉಪ ಸಭಾಧ್ಯಕ್ಷ ವಿಶ್ವನಾಥ ಮಾಮನಿ ಇತರರು ಇದ್ದರು.

PM Kisan: ರೈತರಿಗೆ ಬರೊಬ್ಬರಿ ₹21,924 ಕೋಟಿ ವರ್ಗಾವಣೆ!

1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ಆ್ಯಂಬುಲೆನ್ಸ್‌

ಗೋಮಾತೆ ಕಸಾಯಿಖಾನೆಗೆ ಹೋಗಬಾರದು. ನಮಗೆ ಹುಷಾರಿಲ್ಲ ಎಂದರೆ 108ಕ್ಕೆ ಕರೆ ಮಾಡುತ್ತೇವೆ. ಜಾನುವಾರುಗಳಿಗೆ ಹುಷಾರಿಲ್ಲದಿದ್ದರೆ 1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ಆ್ಯಂಬುಲೆನ್ಸ್‌ ಬಂದು ಸೇವೆ ನೀಡುತ್ತದೆ.

ಪ್ರಾಣಿ ಸಹಾಯವಾಣಿ ಕೇಂದ್ರದಲ್ಲಿ 24*7 ಕೆಲಸ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಆದಮೇಲೆ ಹೆಚ್ಚು ಕೋಳಿ ಸಾಕಣೆಗೆ ಒತ್ತು ನೀಡಲಾಗುವುದು ಎಂದು ಸಚಿವ ಚವ್ಹಾಣ್‌ ಹೇಳಿದರು.

ದನ, ಎಮ್ಮೆ, ಕರು, ಹಸು, ಕುರಿಗಳನ್ನು ಸಾಕುವ ಮೂಲಕ ಸಾವಯವ ಗೊಬ್ಬರ ಬಳಸಿ, ಭೂಮಿ ಫಲವತ್ತತೆ ಹೆಚ್ಚಿಸುವ ಜೊತೆಗೆ ಗುಣಮಟ್ಟದ ಬೆಳೆ ಬೆಳೆಯಬಹುದು.

ಮುಂದಿನ ಹಂತದಲ್ಲಿ ಸಾವಯವ ಕೃಷಿ, ಜಾನುವಾರು ಸಾಕಣೆ ಪೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಿವೆ.

ಕೇಂದ್ರ ಸರ್ಕಾರ ಪಶುಸಾಕಣೆ ಪೋತ್ಸಾಹಿಸುವ ಮೂಲಕ ರೈತರ ಆದಾಯವನ್ನೂ ದ್ವಿಗುಣಗೊಳಿಸುತ್ತಿದೆ ಎಂದು ತಿಳಿಸಿದರು.

Published On: 21 July 2022, 01:50 PM English Summary: Recruitment of Junior Veterinarians soon: Minister Prabhu Chavan promises!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.