-
-
ನೂರುಪಾಯಿ ಹಳೆಯ ನೋಟು ಅಮಾನ್ಯತೆ ಇಲ್ಲ :ಆರ್.ಬಿ ಐ ಸ್ಪಷ್ಟನೆ
ಹಲವು ದಿನಗಳ ಹಿಂದೆ ಹಳೆ ನೂರು ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿದೆ ಆದಷ್ಟು ಬೇಗನೆ ಅವುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿ ಎಂಬ ವದಂತಿಯನ್ನು ಜಾಲತಾಣಗಳಲ್ಲಿ ನಾವು-ನೀವೆಲ್ಲ ಕಂಡಿದ್ದೇವೆ. ಆದರೆ ಇದು ಒಂದು ಸುಳ್ಳು ಸುದ್ದಿ ಎಂದು RBI ಸ್ಪಷ್ಟಪಡಿಸಿದೆ.
ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 5,10,100 ರೂಪಾಯಿ ಮುಖಬೆಲೆಯ ನೋಟುಗಳು ಮಾರ್ಚ್ ವೇಳೆಗೆ ಅಮಾನತುಗೊಳ್ಳಲ್ಲಿವೆ ಎಂಬ ವದಂತಿ ಹರಡಿತ್ತು.ಹಾಗೂ ಹಲವಾರು ಪತ್ರಿಕೆಗಳನ್ನು ಕೂಡ ಈ ಸುದ್ದಿ ಬಂದಿತ್ತು.
ಆದರೆ ಸೋಮವಾರ ಟ್ವಿಟರ್ ಮೂಲಕ ಅಧಿಕೃತ ಹೇಳಿಕೆ ನೀಡಿದ ಆರ್ ಬಿಐ" ಪ್ರಸ್ತುತ ಚಲಾವಣೆಯಲ್ಲಿರುವ 5,10,100 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಉದ್ದೇಶ ಇಲ್ಲ" ಎಂದು ಹೇಳಿದೆ.
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ಕೊಡುಗೆ ನೀಡಿ (Contribute now)
Published On: 27 January 2021, 01:50 PM
English Summary: Rbi confirms about fake news on ban of rs. 5,10,100 notes
Share your comments