1. ಸುದ್ದಿಗಳು

ಕೌಶಲ ಆಧಾರಿತ ತರಬೇತಿಗಳಿಗಾಗಿ ಅರ್ಜಿ ಆಹ್ವಾನ

KJ Staff
KJ Staff

ಇಂದಿನ ಕಾಲದಲ್ಲಿ ಸರ್ಕಾರಿ ನೌಕರಿ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ,ಸರ್ಕಾರಿ ಅಷ್ಟೇ ಅಲ್ಲ ಖಾಸಗಿ ನೌಕರಿಯೂ ಕೂಡ ಇಂದು ಅತ್ಯಂತ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿವೆ, ಆದ್ದರಿಂದ ಸರ್ಕಾರ ಹಾಗೂ ಹಲವಾರು ಸಂಸ್ಥೆಗಳು ನಮಗೆ ಕೆಲಸವನ್ನು ನೀಡುವುದಕ್ಕಿಂತ ನಾವೇ ಇನ್ನೊಬ್ಬರಿಗೆ ಕೆಲಸವನ್ನು ನೀಡುವ ಹಾಗೆ ತಯಾರಿ ಮಾಡಲು ಮುಂದೆ ಬಂದಿವೆ, ಹಾಗಾಗಿ ಹಲವಾರು ತರಬೇತಿಗಳನ್ನು ನಡೆಸುತ್ತಿವೆ.

 ಅಂಥವುಗಳಲ್ಲಿ ಕೆನರಾ ಬ್ಯಾಂಕ್ ಆರ್ ಸೆಟ್ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಿರುದ್ಯೋಗಿ ಯುವಕರಿಗಾಗಿ ಟೂರಿಸ್ಟ್ ಗೈಡ್ ತರಬೇತಿಯನ್ನು ಫೆಬ್ರವರಿ ಎಂಟರಿಂದ ಪ್ರಾರಂಭಿಸುತ್ತಿದೆ.18 ರಿಂದ 45 ವರ್ಷದೊಳಗಿನ ಯುವಕರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

 ತರಬೇತಿಯ ಬಗ್ಗೆ ಹೇಳಬೇಕಾದರೆ ತರಬೇತಿ ಒಂದು ಉಚಿತ ತರಬೇತಿ ಆಗಿದ್ದು ಊಟ ಹಾಗೂ ವಸತಿ ಉಚಿತವಾಗಿರುತ್ತದೆ. ತರಬೇತಿ 13 ದಿನಗಳ ಅವಧಿ ಯನ್ನು ಹೊಂದಿದೆ.

ಆಸಕ್ತರು ಕೆನರಾ ಬ್ಯಾಂಕ್, ದೇಶಪಾಂಡೆ ರಸ್ತೆ, ಹಳಿಯಾಳ ಉತ್ತರ ಕನ್ನಡ ಜಿಲ್ಲೆಯನ್ನು ಸಂಪರ್ಕಿಸಬಹುದು.ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಗಳಾದ 9449782425,9483485489 ಸಂಪರ್ಕಿಸಬಹುದು.

Published On: 27 January 2021, 01:44 PM English Summary: Applications invited for skill development(tourist guide)

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.