1. ಸುದ್ದಿಗಳು

Successful Farmer ಕೃಷಿಗೆ ಉದ್ಯಮ ಸ್ಪರ್ಶ; ಆದಾಯದ ಹರ್ಷದಲ್ಲಿ ಎ.ವಿ ರತ್ನಮ್ಮ

Hitesh
Hitesh
ಕೃಷಿಯಲ್ಲಿ ಭರ್ಜರಿ ಯಶಸ್ಸು ಕಂಡ ರೈತ ಮಹಿಳೆ ಎ.ವಿ ರತ್ನಮ್ಮ

Good income ಒಬ್ಬ ರೈತ ಮಹಿಳೆ ಹೇಗೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆ ಎ.ವಿ ರತ್ನಮ್ಮ ಅವರು ಸಾಕ್ಷಿಯಾಗಿದ್ದಾರೆ.

ಎ.ವಿ ರತ್ನಮ್ಮ ಅವರು 3.0 ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ ಮತ್ತು ನವಣೆ ಹಾಗೂ ತೋಟಗಾರಿಕೆ

ಬೆಳೆಗಳಾದ ಮಾವು ಮತ್ತು ಕರಿಬೇವು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಜೊತೆಗೆ ಹಿಪ್ಪುನೇರಳೆ ವಿ-1 ತಳಿಯನ್ನು ಮಾವಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ಅಲ್ಲದೇ ಇವರು ಹೈನುಗಾರಿಕೆಗೆಯಲ್ಲೂ ತೊಡಗಿಸಿಕೊಂಡಿದ್ದು 02 ಎಮ್ಮೆ ಮತ್ತು 05 ಕುರಿ ಸಾಕಣೆ

ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಮೇವಿನ ಜೋಳವನ್ನು ಬೆಳೆಯುತ್ತಿದ್ದಾರೆ.

ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರಿನ ಸಂಗ್ರಹಣೆಗಾಗಿ ಕೃಷಿ ಹೊಂಡವನ್ನು ನಿರ್ಮಿಸಿದ್ದು, ಇದೇ ಹೊಂಡದಲ್ಲಿ ಮೀನು ಸಾಕಣೆ ಸಹ ಮಾಡುತ್ತಿದ್ದಾರೆ.

ಸಿರಿಧಾನ್ಯದಲ್ಲಿ ಸಂಪತ್ತು ಕಂಡ ರತ್ನಮ್ಮ

ಎ.ವಿ ರತ್ನಮ್ಮ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಅಂತರ್ಜಲ ಮಟ್ಟ ಕುಸಿದ ಕಾರಣ, ಮನೆಗೆ ಜೀವನಾಡಿಯಾಗಿದ್ದ

ರೇಷ್ಮೆ ಕೃಷಿ ಮುಂದುವರೆಸಲು ಸಾಧ್ಯವಾಗದೆ ಕೋಲಾರ ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿ ಬೆಳೆಗಳ ಮೌಲ್ಯವರ್ಧನೆ ಕುರಿತು ತರಬೇತಿ

ಪಡೆದು ಮುಖ್ಯ ಕಸುಬಾಗಿ ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡುತ್ತಿದ್ದಾರೆ.  

ರತ್ಮಮ್ಮ ಅವರು ಕೃಷಿ ಇಲಾಖೆ ಸಹಾಯದಿಂದ ತಮ್ಮದೇ ಆದ ಸಿರಿಧಾನ್ಯ ಘಟಕವನ್ನು ಸ್ಥಾಪಿಸಿ

ಸಂಸ್ಕರಣಾ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ

ಗ್ರಾಮಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸಂಸ್ಕರಣೆ ಮಾಡಿಕೊಟ್ಟು ಅಧಿಕ ಲಾಭ ಪಡೆಯುತ್ತಿದ್ದಾರೆ.

ನೈಸರ್ಗಿಕ ಕೃಷಿ ಮಾಡಿ; ಸರ್ಕಾರದ ಸಬ್ಸಿಡಿ ಬಿಡಿ: ರೈತ ರಾಜಶೇಖರ ನಿಂಬರಗಿ

'ವೇದಿಕ್ ಎಂಟರ್ ಪ್ರೈಸಸ್' ಸ್ಥಾಪನೆ: ಉದ್ಯೋಗ ಸೃಷ್ಟಿ

ರತ್ನಮ್ಮ ಅವರು ಕೃಷಿ ಮಹಿಳೆಯಾಗಷ್ಟೇ ಇರದೆ. ತಮ್ಮದೇ 'ವೇದಿಕ್ ಎಂಟರ್ ಪ್ರೈಸಸ್' ಎಂಬ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ

ಉದ್ಯೋಗವನ್ನೂ ಸೃಷ್ಟಿಸಿದ್ದಾರೆ. ಈ ಮೂಲಕ ಸಿರಿಧಾನ್ಯಗಳನ್ನು ಮತ್ತು ಉತ್ಪನ್ನಗಳಾದ ಮಾಲ್ಟ್, ಉಪ್ಪಾ ಮಿಕ್ಸ್, ಪಾಯಸಾ ಮಿಕ್ಸ್

ದೋಸೆ ಮಿಶ್ರಣ, ಇಡ್ಲಿ ಮಿಶ್ರಣ, ಹಪ್ಪಳ, ವರ್‌ ಮಿಸೆಲ್ಲಿ, ಪಾಸ್ತ ಇತ್ಯಾದಿಗಳನ್ನು ತಯಾರಿಸಿ 'ವೇದಿಕ್ ಪುಡ್ ಮತ್ತು ವರದಾ ಪುಡ್'

ಎಂಬ ಬ್ರಾಂಡ್‌ನಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಜೊತೆಗೆ ಇನ್ನು ಇಬ್ಬರು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ರತ್ನಮ್ಮ ಅವರು ಸಿರಿಧಾನ್ಯಗಳ ಉತ್ಪನ್ನಗಳಲ್ಲದೆ

ವಿವಿಧ ರೀತಿಯ ಉಪ್ಪಿನಕಾಯಿ, ನೆಲ್ಲಿಕಾಯಿ ಕ್ಯಾಂಡಿ, ನೆಲ್ಲಿಕಾಯಿ ತೊಕ್ಕು. ವಿವಿಧ ರೀತಿಯ ಮಸಾಲಾ ಪುಡಿಗಳನ್ನು

ಸಹ ತಯಾರಿಸಿ ಸುತ್ತಮುತ್ತಲಿನ ಗ್ರಾಮಗಳಲ್ಲದೆ ಬೆಂಗಳೂರಿನಂತಹ ನಗರದಲ್ಲೂ ಸಹ ಅವರು ತಯಾರಿಸುವ

ಉತ್ಪನ್ನಗಳನ್ನು ಮಾರಾಟ ಮಾಡಿ ಅಧಿಕ ಲಾಭ ಗಳಿಸುತ್ತಿದ್ದಾರೆ.  

ರತ್ನಮ್ಮ ಅವರು ತಯಾರಿಸುವ ಉತ್ಪನ್ನಗಳನ್ನು ವಿವಿಧ ಸಂಸ್ಥೆಗಳು ಆಯೋಜಿಸುವ ಕೃಷಿಮೇಳ, ಸಿರಿಧಾನ್ಯ ಮೇಳ, ತೋಟಗಾರಿಕೆ ಮೇಳ

ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಳಿಗೆಗಳನ್ನು ತೆರೆದು ಈ ಉತ್ಪನ್ನಗಳನ್ನು

ಪ್ರದರ್ಶಿಸಿ ಮಾರಾಟ ಮಾಡುವ ಮೂಲಕ ಪ್ರಶಂಸೆಗೂ ಪಾತ್ರರಾಗಿದ್ದಾರೆ.  

Kavitha Mishra: ಪ್ರತಿ ರೈತರೂ ಕೋಟಿ ಕೋಟಿ ದುಡಿಯಬಹುದು: ಕವಿತಾ ಮಿಶ್ರಾ

ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮಾಹಿತಿ

ರತ್ನಮ್ಮ  ಅವರು ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು

ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಅಲ್ಲದೇ ಈ ಸಂಸ್ಥೆಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ

ವ್ಯಕ್ತಿಯಾಗಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಇತರೆ ರೈತಮಹಿಳೆಯರೊಂದಿಗೆ ಹಂಚಿಕೊಂಡು

ಅವರೂ ಸಹ ಸ್ವಾಲಂಬಿ ಜೀವನ ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.  

ಹಲವು ಪ್ರಶಸ್ತಿಗೆ ಪಾತ್ರರಾಗಿರುವ ರತ್ನಮ್ಮ

ಎ.ವಿ ರತ್ನಮ್ಮ ಅವರು ಕೃಷಿಯಲ್ಲಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಇವರ ಕೃಷಿ ಸಾಧನೆಯನ್ನು ಗುರುತಿಸಿ  2018ರಲ್ಲಿ ಬೆಂಗಳೂರಿನ

ಕೃಷಿ ವಿಶ್ವವಿದ್ಯಾನಿಲಯದ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ ಹಾಗೂ 2020ರಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ

ರೈತ ಮಹಿಳೆ ಪ್ರಶಸ್ತಿ, 2020-21 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ

ಕೃಷಿಕ ಪ್ರಶಸ್ತಿ, 2021 ರಲ್ಲಿ ಕೋಲಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇನ್ನು

ಅನೇಕ ಪ್ರಮಾಣಪತ್ರಗಳು ರತ್ನಮ್ಮ ಅವರಿಗೆ ನೀಡಿ ಗೌರವಿಸಲಾಗಿದೆ.

ಅಲ್ಲದೇ ರತ್ನಮ್ಮ ಅವರ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2022-23ನೇ ಸಾಲಿನ

ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿಯನ್ನು ಸನ್ಮಾನ ಪತ್ರ, ನೆನಪಿನ ಕಾಣಿಕೆ

ಹಾಗೂ 25,000/- ರೂಪಾಯಿಗಳ ಬಹುಮಾನದೊಂದಿಗೆ 2023 ರ ಕೃಷಿಮೇಳದಲ್ಲಿ ನೀಡಿ ಗೌರವಿಸಿದೆ.    

ಕೃಷಿ ಜಾಗರಣದಿಂದ ಸನ್ಮಾನ

ಪ್ರಗತಿಪರ ರೈತ ಮಹಿಳೆ ಎ.ವಿ ರತ್ನಮ್ಮ ಅವರು ಕೃಷಿಯಲ್ಲಿ ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿರುವ ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು 2023ನೇ ಸಾಲಿನಲ್ಲಿ ಮಿಲಿಯನೇರ್‌

ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದೆ. ಅಲ್ಲದೇ ದೇಶದಲ್ಲೇ ಹೆಚ್ಚು

ಮನ್ನಣೆಯನ್ನು ಗಳಿಸಿದ ರೈತರಿಗೆ ನೀಡುವ RFOI ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 

Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!

Published On: 13 January 2024, 02:34 PM English Summary: Ratnamma is a farmer woman who Touch of Modernity to Agriculture: Good income

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.