1. ಸುದ್ದಿಗಳು

Kavitha Mishra: ಪ್ರತಿ ರೈತರೂ ಕೋಟಿ ಕೋಟಿ ದುಡಿಯಬಹುದು: ಕವಿತಾ ಮಿಶ್ರಾ

Hitesh
Hitesh
ಕವಿತಾ ಮಿಶ್ರಾ ಅವರೊಂದಿಗೆ ಕೃಷಿ ಜಾಗರಣ ಕನ್ನಡ ಸಂದರ್ಶನ

ಕರ್ನಾಟಕದ ಹೆಮ್ಮೆಯ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರ ಯಶೋಗಾಥೆ ಇಲ್ಲಿದೆ.

ರಾಯಚೂರಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು ಈಗ ಎಲ್ಲರಿಗೂ ಚಿರಪರಿಚಿತ.

ಅವರ ಕೃಷಿ ಮಾದರಿ ಹಲವು ರೈತರಿಗೆ ಪ್ರೇರಣೆ. ಕವಿತಾ ಮಿಶ್ರಾ ಅವರೊಂದಿಗೆ ಕೃಷಿ ಜಾಗರಣ ಕನ್ನಡ ನಡೆಸಿದ ಸಂದರ್ಶನ ಇಲ್ಲಿದೆ. 

ರೈತರು ಸಹ ಕೋಟಿ ಕೋಟಿಗಳಲ್ಲಿ ದುಡಿಯಬಹುದು ಎನ್ನುತ್ತಾರೆ ನಮ್ಮ ರಾಯಚೂರಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ.

ಪ್ರತಿ ರೈತರೂ ಕೋಟಿಗಳಲ್ಲಿ ದುಡಿಯಬಹುದು ಎನ್ನುವ ಅವರ ಮಾತು ಅತಿಯಶೋಕ್ತಿ  ಅನಿಸುವುದಿಲ್ಲ.

ಕವಿತಾ ಅವರು ಕೃಷಿಯಲ್ಲಿ ಸಾಧಿಸಿರುವ ಯಶಸ್ಸಿನ ಉದಾಹರಣೆಗಳನ್ನು ನೀಡುತ್ತಲ್ಲೇ ಮಾತನಾಡುವುದರಿಂದ ಈ ಯಶೋಗಾಥೆ ಪ್ರತಿ ರೈತರಿಗೂ ಸ್ಫೂರ್ತಿ ನೀಡಬಲ್ಲದು. 

ಕವಿತಾ ಮಿಶ್ರಾ ಅವರ ಕೃಷಿ ಹಿನ್ನೆಲೆ

ಕವಿತಾ ಮಿಶ್ರಾ ಅವರು 8 ಎಕರೆ 10 ಗುಂಟೆಯಲ್ಲಿ ಮಿಶ್ರ  ಬೇಸಾಯದ ಮೂಲಕ ಖ್ಯಾತಿ ಗಳಿಸಿದ್ದಾರೆ.

8 ಎಕರೆ ವ್ಯಾಪ್ತಿಯಲ್ಲಿ 2,500 ಶ್ರೀಗಂಧದ ಬೆಳೆ, 1 ಸಾವಿರ ಮಾವು, 600 ಸಿಬೇಕಾಯಿ, 600 ಸೀತಾಫಲ, 100 ಬೆಟ್ಟದ ನೆಲ್ಲಿಕಾಯಿ

100 ಹುಣಸೆಹಣ್ಣು, 100 ಕರಿಬೇವು, 100 ತೆಂಗಿನ ಮರ 100 ನಿರಳೆಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ.

ಇದರೊಂದಿಗೆ ಕುರಿಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನೂ ಅವರು ಮಾಡುತ್ತಿದ್ದಾರೆ.

ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ : ಕವಿತಾ ಮಿಶ್ರಾ

ರೈತರು ಸಮಗ್ರ ಬೇಸಾಯವನ್ನು ಅಳವಡಿಸಿಕೊಳ್ಳಬೇಕು. ಇದರೊಂದಿಗೆ ವಿವಿಧ ಬೆಳೆ, ಪಶು ಸಂಗೋಪನೆ ಸೇರಿದಂತೆ

ಕೃಷಿಯಲ್ಲಿ ಕಾಂಬಿನೇಷನ್‌ ಇರಬೇಕು ಎನ್ನುತ್ತಾರೆ ಕವಿತಾ ಮಿಶ್ರಾ ಅವರು.

ನಾಲ್ಕು ವಿಧವಾಗಿ ವಿಂಗಡಣೆ ಮಾಡಿಕೊಳ್ಳಿ

ರೈತರು ಕೃಷಿಯನ್ನು ಮುಖ್ಯವಾಗಿ ನಾಲ್ಕು ವಿಧವಾಗಿ ವಿಂಗಡಣೆ ಮಾಡಿಕೊಳ್ಳಬೇಕು.

ಅದರಲ್ಲಿ ಮುಖ್ಯವಾಗಿ ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಹಾಗೂ ಪಶುಸಂಗೋಪನೆಯನ್ನು ಅಳವಡಿಸಿಕೊಳ್ಳಬೇಕು.

ಈ ರೀತಿ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದರಿಂದ ರೈತರ ಕೈಯಲ್ಲಿ ಸದಾ ಹಣ ಓಡಾಡುತ್ತಿರುತ್ತದೆ ಎನ್ನುತ್ತಾರೆ ಅವರು.

ಯಾವ ಮಾದರಿಯ ಪ್ಲಾನ್‌ ಇರಬೇಕು ?

ರೈತರ ಕೈಯಲ್ಲಿ ಸದಾ ಹಣ ಇರಬೇಕಾದರೆ, ಅವರು ಮೂರು ಮಾದರಿಯಲ್ಲಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಆದಾಯದ ಮೂಲ ಸೃಷ್ಟಿಸಿಕೊಳ್ಳಬೇಕು.

ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಹಾಗೂ ಪಶುಸಂಗೋಪನೆಯನ್ನು ಅಲ್ಪಾವಧಿ, ಮಧ್ಯಮ ಹಾಗೂ ದೀರ್ಘವಧಿಯಾಗಿ ವಿಂಗಡಿಸಿಕೊಳ್ಳಬೇಕು.

ನಾನು ಇದರಲ್ಲಿ ಈಗಾಗಲೇ ಯಶಸ್ಸು ಸಾಧಿಸಿದ್ದೇನೆ ಎನ್ನುತ್ತಾರೆ ಕವಿತಾ ಮಿಶ್ರಾ ಅವರು.

ಕವಿತಾ ಮಿಶ್ರಾ

ಕೃಷಿಯ ಅಲ್ಪಾವಧಿಯಲ್ಲಿ ಮೂರರಿಂದ ನಾಲ್ಕು ತಿಂಗಳಲ್ಲಿ ಹಣ ಬರುತ್ತದೆ.

ಇದಕ್ಕೆ ಒಂದು ಬಾರಿ ಬರುವ ಬೆಳೆಗಳನ್ನು ಬೆಳೆಯಬೇಕು. ಅಂದರೆ, ಇದು ಪ್ರಕೃತಿಯೊಂದಿಗೆ ಹೋಗುವ ಮಾದರಿಯಾಗಿದೆ.

ಅಲ್ಲದೇ  ತೋಟಗಾರಿಕೆ ಮಧ್ಯಮ ಹಾಗೂ ಅರಣ್ಯ ಕೃಷಿ ದೀರ್ಘ ಕೃಷಿ ಇರುತ್ತದೆ.

ಇದರೊಂದಿಗೆ ಆಗಾಗ್ಗೆ ಕೈ ಖರ್ಚು ಹಾಗೂ ಮನೆಯ ಖರ್ಚಿಗೆ ನೀವು ಪಶುಸಂಗೋಪನೆ ಮಾಡಬಹುದು.

ಮೂರು ತಿಂಗಳ ಕುರಿ ಮರಿಯನ್ನು ನೀವು ತಂದು ಸಾಕಿದರೆ, ಆರರಿಂದ 8 ತಿಂಗಳ ಅವಧಿಯಲ್ಲಿ 32ರಿಂದ 42 ಕೆ.ಜಿ ತೂಕ ಬರುತ್ತೆ.  

ಈ ತೂಕದ ಕುರಿಗಳು 18ರಿಂದ 16 ಸಾವಿರಕ್ಕೆ ಹೋಗುತ್ತವೆ. ನಾನು 50ರಿಂದ 60 ಕುರಿ, ಕೋಳಿ ಸಾಗಣಿಕೆ ಮಾಡುತ್ತಿದ್ದೇನೆ.

ಕುರಿ ಸಾಕಾಣಿಕೆಯಲ್ಲಿ ಕವಿತಾ ಮಿಶ್ರಾ

ಡ್ರ್ಯಾಗನ್‌ ತಳಿಯ ಕೋಳಿ ಹಾಗೂ ದೇಸಿಯ ಹಸುಗಳನ್ನು ಸಾಕಿದ್ದೀನಿ. ಅಲ್ಲದೇ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದೀನಿ.

ಜೀವಾಮೃತ ಹಾಗೂ ಪಂಚಗವ್ಯ ಬಳಸಿಕೊಂಡು ಕೃಷಿ ಮಾಡುತ್ತಿದ್ದೇನೆ. ಋತುವಿಗೆ ಅನುಗುಣವಾಗಿ ಕೃಷಿಯನ್ನು ಮಾಡುತ್ತಿದ್ದೇನೆ

ಎಂದು ಅವರ ಕೃಷಿ ಮಾದರಿಯನ್ನು ಹಾಗೂ ಯಶಸ್ಸಿನ ಕಥೆಯನ್ನು ವಿವರಿಸುತ್ತಾರೆ ಕವಿತಾ ಮಿಶ್ರಾ.

ಪರಿಸ್ಥಿತಿಯ ಜೊತೆಗೆ ಋತುಮಾನದ ಬೆಳೆ ಅನುಸರಿಸಿ

ರೈತರು ಪರಿಸ್ಥಿತಿಯೊಂದಿಗೆ ಋತುಮಾನದ ಕೃಷಿಯನ್ನು ಅಳವಡಿಸಿಕೊಳ್ಳಬೇಕು.

ಪ್ರಕೃತಿಯೊಂದಿಗೆ ಹೋಗುವ ಕೃಷಿಯನ್ನು ಮಾಡಬೇಕು.

ಯಾವುದೇ ಕಾರಣಕ್ಕೂ ಪ್ರಕೃತಿಯ ವಿರುದ್ಧ ಹೋಗಬಾರದು. ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ರೈತರು ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದು ಸಲಹೆ ನೀಡಿದರು.  

ನರ್ಸರಿಯಲ್ಲಿ ಕವಿತಾ ಮಿಶ್ರಾ

ನರ್ಸರಿ ಮೂಲಕ ಸಸಿ ಮಾರಾಟ

ಕವಿತಾ ಮಿಶ್ರಾ ಅವರು ಕೃಷಿಯಲ್ಲಿ ಹಣ ಬರುವ ಯಾವ ಮಾರ್ಗವನ್ನೂ ಬಿಟ್ಟಿಲ್ಲ ಅಂದರೆ,ಎಲ್ಲೆಲ್ಲಿ ಲಾಭವಾಗುತ್ತದೆಯೋ

ಅದನ್ನು ಅವರು ಸರಿಯಾಗಿಯೇ ಬಳಸಿಕೊಂಡಿದ್ದಾರೆ.

ಅದಕ್ಕೆ ಇನ್ನೊಂದು ಉದಾಹರಣೆಯೆಂದರೆ ಅವರು ಮೂರು ವರ್ಷದಿಂದ ನರ್ಸರಿ ನಡೆಸುತ್ತಿರುವುದು.

ನರ್ಸರಿ ನಡೆಸುವ ಮೂಲಕ ಹಣ್ಣು ಹಾಗೂ ಹೂವುಗಳ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಅರಣ್ಯಕೃಷಿ ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. 

ಶ್ರೀಗಂಧದ ಮರ ನೋಡುತ್ತಿರುವ ಕವಿತಾ ಮಿಶ್ರಾ

ಶ್ರೀಗಂಧ ಕರ್ನಾಟಕದ ಹೊನ್ನ ಕಳಸ

ಕವಿತಾ ಮಿಶ್ರಾ ಅವರು ಶ್ರೀಗಂಧದ ಬೆಳೆಯ ಮೂಲಕ ದೇಶ – ವಿದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ.

ಶ್ರೀಗಂಧದ ಮರ ಹಾಗೂ ಅದರ ಖ್ಯಾತಿಯ ಬಗ್ಗೆ ಕವಿತಾ ಮಿಶ್ರಾ ಅವರು ವಿವರಿಸುವುದು ಈ ರೀತಿ, 

ಕರ್ನಾಟಕದ ಶ್ರೀಗಂಧದ ಮರಕ್ಕೆ ದೇಶ ವಿದೇಶದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇದೆ.

45ರಿಂದ 50 ವರ್ಷ ಆದ ಮೇಲೆ ರೈತರಿಗೂ ವಿಶ್ರಾಂತಿ ಬೇಕಾಗುತ್ತದೆ. ನಾವು ಸಹ ಈ ರೀತಿ ದೀರ್ಘಕಾಲದ ಯೋಜನೆ ರೂಪಿಸಿಕೊಳ್ಳಬೇಕು.

ಶ್ರೀಗಂಧವನ್ನು ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಯಬಹುದು.

ಆಧುನಿಕ ತಂತ್ರಜ್ಞಾನ ಸಾಕಷ್ಟು ಬಂದಿದೆ. ರೈತರು ಇದರಿಂದ ಲಾಭವನ್ನು ಪಡೆಯಬಹುದು.

ಮುಂದಾಲೋಚನೆ ಮಾಡಿಕೊಂಡು ಶ್ರೀಗಂಧವನ್ನು ಬೆಳೆಯಬೇಕು. ಒಂದೇ ಎಕರೆಯಾದರೂ ಯೋಜನೆ ರೂಪಿಸಿಕೊಂಡರೆ

ಕೋಟಿಗಳಲ್ಲಿ ಮಾತನಾಡಬಹುದು. ರೈತರೂ ಸಹ ಆರ್ಥಿಕವಾಗಿ ಸದೃಢವಾಗಬಹುದು ಎನ್ನುತ್ತಾರೆ ಅವರು.

ಕವಿತಾ ಮಿಶ್ರಾ ಅವರಿಗೆ ಕೃಷಿ ಜಾಗರಣದ ವತಿಯಿಂದ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ ನೀಡಿ ಸನ್ಮಾನ

ನೀರಿನ ಸಮಸ್ಯೆಯನ್ನು ತಪ್ಪಿಸಿದ್ದು ಹೇಗೆ ?

ಕವಿತಾ ಮಿಶ್ರಾ ಅವರ ಕೃಷಿ ಯಶಸ್ಸಿನ ಕಥೆಗಳಲ್ಲಿ ಅವರು ಕೃಷಿಯಲ್ಲಿ ನೀರು ಬಳಸಿದ ಮಾದರಿ ಸಹ ಎಲ್ಲ ರೈತರಿಗೂ ಮಾದರಿಯಾಗಿದೆ.

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬರಗಾಲ ಆಗಾಗ್ಗೆ ಕಾಣಿಸಿಕೊಂಡು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಅದರಲ್ಲೂ ಉತ್ತರ ಕರ್ನಾಟಕದಲ್ಲಿ ರೈತರು ಮಳೆಯನ್ನೇ ಆಶ್ರಯಿಸಿಷದ್ದು, ಸಕಾಲದಲ್ಲಿ ಮಳೆಯಾಗದೆ

ಸಂಕಷ್ಟವನ್ನು ಎದುರಿಸುವುದು ವರದಿಯಾಗುತ್ತಲ್ಲೇ ಇದೆ.

ರೈತರು ಕೃಷಿ ಭೂಮಿಯಲ್ಲಿ ನೀರಿನ ಸಂಕಷ್ಟವನ್ನು ತಪ್ಪಿಸಲು ಕವಿತಾ ಮಿಶ್ರಾ ಅವರು ಅನುಸರಿಸಿರುವ ಮಾದರಿ ಎಲ್ಲರಿಗೂ ಸಹಕಾರಿಯಾಗಲಿದೆ.

ಅವರು ನೀರು ಸಮಸ್ಯೆಯನ್ನು ತಪ್ಪಿಸಲು ಸಸಿಗಳ ಎಲೆಗಳನ್ನು ಹೊಲಗಳಲ್ಲೇ ಬಿಡುತ್ತಿದ್ದಾರೆ.

ಇದರಿಂದ ಭೂಮಿಗೆ ಮೈಕ್ರೋನ್ಯೂಟ್ರನ್ಸ್‌ ಸಿಗುತ್ತದೆ. ಬದುಕಿ ಆಗುತ್ತದೆ.

ಸೂಕ್ಷ್ಮ ಜೀವಿಗಳ ಪ್ರಮಾಣ ಹೆಚ್ಚಳವಾಗಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಪ್ರಮಾಣ ಹೆಚ್ಚಳವಾಗುತ್ತದೆ.

ಬೆಳಕು ಹಾಗೂ ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಳವಾಗುತ್ತದೆ.

ತೇವಾಂಶ ಭೂಮಿಯಲ್ಲೇ ಉಳಿಯುತ್ತದೆ ಮಂದಿಯ ಹೊಲಕ್ಕೆ ನೀರು ಹರಿದು ಹೋಗುವುದಿಲ್ಲ.

 ಗಿಡಗಳು ಒಣಗುವುದಿಲ್ಲ. ಚೌಕುಮಣಿಗಳನ್ನು ನಿರ್ಮಾಣ ಮಾಡಿ ನೀರು ಹೊರಗೆ ಹೋಗದಂತೆ

ಹೊಲಗಳಲ್ಲೇ ಬದು ನಿರ್ಮಾಣ ಮಾಡಲಾಗಿದೆ.

ಇದರಿಂದ 45 ಡಿಗ್ರಿ ಸೆಲ್ಸಿಯಸ್‌ನಲ್ಲೂ ಕೃಷಿ ಮಾಡಲು ಅನುಕೂಲವಾಗಿದೆ ಇದನ್ನು ಎಲ್ಲರೂ

ಅನುಸರಿಸಬಹುದು ಎನ್ನುವುದು ಕವಿತಾ ಮಿಶ್ರಾ ಅವರ ವಿಶ್ವಾಸದ ಮಾತು.    

ಪಶು ಸಂಗೋಪನೆಯಲ್ಲಿ ಕವಿತಾ ಮಿಶ್ರಾ

ಯುವ ರೈತರಿಗೆ ಕಿವಿ ಮಾತು

ಮಣ್ಣು ನಿಮ್ಮ ಕೈಬಿಡುವುದಿಲ್ಲ. ನಾನು ಕೃಷಿ ಮಾಡುವುದರಲ್ಲಿ ಬಿದ್ದೆ, ಮತ್ತೆ ಎದ್ದೆ.

ಮಣ್ಣು ನಂಬಿದವರು ಎಂದಿಗೂ ನಷ್ಟ ಹೊಂದುವುದಿಲ್ಲ. ಮಣ್ಣನ್ನು ನಂಬಿದರೆ ಬಡ್ಡಿ ಸಮೇತ ಹಣ ಬರುತ್ತದೆ.

ಆದರೆ, ಕೃಷಿಯಲ್ಲಿ ತ್ವರಿತವಾಗಿ ಲಾಭ ಸಿಗುವುದಿಲ್ಲ. ಕೃಷಿ ನೀವು ಮ್ಯಾಗಿ, ಇಲ್ಲ ಕಾಫಿ ಮಾಡಿದಷ್ಟು ಸುಲಭವಲ್ಲ.

ಅದೊಂದು ತಪಸ್ಸು. ಕೃಷಿಯನ್ನು ನೀವು ನಿರಂತರವಾಗಿ ಮಾಡಿದರೆ ಅದು ಒಂದಿಲ್ಲ ಒಂದು ದಿನ ನಿಮ್ಮ ಕೈಹಿಡಿದೇ ಹಿಡಿಯುತ್ತದೆ

ಎನ್ನುವುದು ಕವಿತಾ ಮಿಶ್ರಾ ಅವರು ಯುವ ರೈತರಿಗೆ ನೀಡುವ ಸಲಹೆ.    

ಶ್ರೀಗಂಧ ಬೆಳೆವವರಿಗೆ ಕವಿತಾ ಮಿಶ್ರಾ ಬೆಸ್ಟ್‌ ಟಿಪ್ಸ್‌!

ಶ್ರೀಗಂಧ ಬೆಳೆಯುವವರಿಗೆ ಒಳ್ಳೆಯ ಹಾಗೂ ಕೈತುಂಬಾ ಆದಾಯವಿದೆ.

ಇದೀಗ ರಾಜ್ಯ ಸರ್ಕಾರವೂ ಸಹ ಶ್ರೀಗಂಧ ಬೆಳೆಯುವವರಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದೆ. 

ಕವಿತಾ ಮಿಶ್ರಾ ಅವರು ಶ್ರೀಗಂಧವನ್ನು ಬೆಳೆಯುವ ಮೂಲಕ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ.

ಅವರು ಶ್ರೀಗಂಧವನ್ನು ಬೆಳೆಯುವವರಿಗೆ ಅತ್ಯುತ್ತಮವಾದ ಸಲಹೆ ನೀಡುತ್ತಿದ್ದಾರೆ.

ಶ್ರೀಗಂಧದ ಸಸಿಗಳನ್ನು ಸುದೀರ್ಘ ಅವಧಿಗೆ ದೃಷ್ಟಿಯಲ್ಲಿ ಇರಿಸಿಕೊಳ್ಳಬೇಕು. ಇದರಿಂದ ಶ್ರೀಗಂಧ ಬೆಳೆ

ಬೆಳೆದರೆ ಸುದೀರ್ಘ ಅವಧಿಯಲ್ಲಿ ಉತ್ತಮ ಆದಾಯ ಸಿಗಲಿದೆ ಎನ್ನುವುದು ಅವರ ಮಾತು. 

Published On: 27 December 2023, 02:08 PM English Summary: Every farmer can earn crores: Kavitha Mishra

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.