1. ಸುದ್ದಿಗಳು

Rain news | ಮಳೆ ವರದಿ : ಮುಂದಿನ 24 ಗಂಟೆ ರಾಜ್ಯದ ಬಹುತೇಕ ಕಡೆ ಗುಡುಗು ಸಹಿತ ಜೋರು ಮಳೆ !

Kalmesh T
Kalmesh T
Rain news | Rain report : Thunderstorm in most parts of the state for the next 24 hours!

Rain report: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸೂಚನೆಯನ್ನು (Rain news) ಹವಾಮಾನ ಇಲಾಖೆ ನೀಡಿದೆ.

16 ನೇ ಜುಲೈ 2023 ರ ಬೆಳಗಿನವರೆಗಿನ ರಾಜ್ಯದ ಮಳೆ ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಹಾಗೂ ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ/ ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಜೋರು ಮಳೆ ಮುನ್ನೆಚ್ಚರಿಕೆ | Thunderstorm in most parts of the state for the next 24 hours!

ಮುಂದಿನ 24 ಘಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆ ಇದ್ದು, ಒಂದೆರಡು ಕಡೆಗಳಲ್ಲಿ ಅತಿ ಜೋರು ಮಳೆಯಾಗುವ ಸಾಧ್ಯತೆ ಇದೆ. 

ಅಲ್ಲದೇ ಮುಂದಿನ 48 ಘಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ (Rain) ಸಾಧ್ಯತೆಯಿದೆ.

ಗುಡುಗು ಕುರಿತು ಮುನ್ನೆಚ್ಚರಿಕೆ | Thunderstorm Warning

ಮುಂದಿನ 48 ಘಂಟೆಗಳಲ್ಲಿ ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಮಿಂಚು ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಉತ್ತರ ಒಳನಾಡಿನಲ್ಲಿ ಘಂಟೆಗೆ 40-50 ಕಿ.ಮೀ ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಘಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ | A warning to fishermen

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಲೋ ಮೀಟರ್‌ನಿಂದ 55 ಕಿಲೋ ಮೀಡರ್‌ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

16 ನೇ ಜುಲೈ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಕೆಲವೊಮ್ಮೆ ಬಲವಾದ ಮೇಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಕೆಲವೊಮ್ಮೆ ಬಲವಾದ ಮೇಲ್ಮಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಅತಿ ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ): ಮಂಕಿ (ಉತ್ತರ ಕನ್ನಡ ಜಿಲ್ಲೆ) 15; ಅಂಕೋಲಾ (ಉತ್ತರ ಕನ್ನಡ ಜಿಲ್ಲೆ) 13; ಕಾರವಾರ (ಉತ್ತರ ಕನ್ನಡ ಜಿಲ್ಲೆ) 12. ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ): ಬೇಲಿಕೇರಿ, ಹೊನ್ನಾವರ (ಎರಡೂ ಉತ್ತರ ಕನ್ನಡ ಜಿಲ್ಲೆ) ತಲಾ 11; ಕುಮಟಾ (ಉತ್ತರ ಕನ್ನಡ ಜಿಲ್ಲೆ) 9; ಕ್ಯಾಸಲ್ ರಾಕ್, ಕದ್ರಾ, ಗೇರುಸೊಪ್ಪಾ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಕುಂದಾಪುರ, ಕೋಟ (ಎರಡೂ ಉಡುಪಿ ಜಿಲ್ಲೆ), ಸಾಯಿಗಾಂವ್ (ಬೀದರ್ ಜಿಲ್ಲೆ) ತಲಾ 7. ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಜೋಯಿಡಾ, ಗೋಕರ್ಣ (ಎರಡೂ ಉತ್ತರ ಕನ್ನಡ ಜಿಲ್ಲೆ), ಕೊಲ್ಲೂರು (ಉಡುಪಿ ಜಿಲ್ಲೆ), ಶೋರಾಪುರ (ಯಾದಗಿರಿ ಜಿಲ್ಲೆ) ತಲಾ 6; ಪಣಂಬೂರು (ದಕ್ಷಿಣ ಕನ್ನಡ ಜಿಲ್ಲೆ), ಉಡುಪಿ ತಲಾ 5; ಮಾಣಿ, ಮಂಗಳೂರು,

ಮಂಗಳೂರು ವಿಮಾನ ನಿಲ್ದಾಣ, ಮೂಲ್ಕಿ (ಎಲ್ಲ ದಕ್ಷಿಣ ಕನ್ನಡ ಜಿಲ್ಲೆ), ಶಿರಾಲಿ ಪಿಟಿಒ, ಯಲ್ಲಾಪುರ (ಎರಡೂ ಉತ್ತರ ಕನ್ನಡ ಜಿಲ್ಲೆ), ಕವಡಿಮಟ್ಟಿ ಏಆರ್‌ಜಿ (ಯಾದಗಿರಿ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ) ತಲಾ 4; ಉಪ್ಪಿನಂಗಡಿ, ಪುತ್ತೂರು (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಸಿದ್ದಾಪುರ (ಉಡುಪಿ ಜಿಲ್ಲೆ), ಔರಾದ್ (ಬೀದರ್ ಜಿಲ್ಲೆ), ಮುನಿರಾಬಾದ್ (ಕೊಪ್ಪಳ ಜಿಲ್ಲೆ), ಹೊಸಪೇಟೆ (ವಿಜಯನಗರ ಜಿಲ್ಲೆ), ಭಾಗಮಂಡಲ, ಸುಂಟಿಕೊಪ್ಪ (ಎರಡೂ ಕೊಡಗು ಜಿಲ್ಲೆ), ತಾಳಗುಪ್ಪ (ಶಿವಮೊಗ್ಗ ಜಿಲ್ಲೆ), ಹೆಬ್ಬರು (ತುಮಕೂರು ಜಿಲ್ಲೆ), ಬೆಂಗಳೂರು ನಗರ, ಚಂದೂರಾಯನಹಳ್ಳಿ ಕೆವಿಕೆ (ರಾಮನಗರ ಜಿಲ್ಲೆ) ತಲಾ 3; ಕಾರ್ಕಳ (ಉಡುಪಿ ಜಿಲ್ಲೆ), ಸುಳ್ಯ, ಬೆಳ್ತಂಗಡಿ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಸಿದ್ದಾಪುರ, ಕಿರವತ್ತಿ, ಬನವಾಸಿ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಲೋಂಡಾ (ಬೆಳಗಾವಿ ಜಿಲ್ಲೆ),

ಸಾಂದರ್ಭಿಕ ಚಿತ್ರ

ಬೇವೂರು (ಕೊಪ್ಪಳ ಜಿಲ್ಲೆ), ಸಂತಪುರ (ಬೀದರ್ ಜಿಲ್ಲೆ), ಕುರ್ಡಿ (ರಾಯಚೂರು ಜಿಲ್ಲೆ), ಕೊಟ್ಟಿಗೆಹಾರ, ಶೃಂಗೇರಿ, ಜಯಪುರ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ), ಮಾಗಡಿ (ರಾಮನಗರ ಜಿಲ್ಲೆ), ಜ್ಞಾನಭಾರತಿ ಬಿಯು ಕ್ಯಾಂಪಸ್, ಕೆಎಸ್ಎನ್‌ಡಿಎಂಸಿ ಕ್ಯಾಂಪಸ್, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ (ಎಲ್ಲಾ ಬೆಂಗಳೂರು ನಗರ ಜಿಲ್ಲೆ), ಗುಬ್ಬಿ (ತುಮಕೂರು ಜಿಲ್ಲೆ), ನಾಪೋಕ್ಲು, ಮೂರ್ನಾಡು (ಎರಡೂ ಕೊಡಗು ಜಿಲ್ಲೆ) ತಲಾ 2; ಮಂಚಿಕೆರೆ, ಜಗಲಬೆಟ್‌, ಮುಂಡಗೋಡ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಸುಬ್ರಹ್ಮಣ್ಯ, ಧರ್ಮಸ್ಥಳ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಗಬ್ಬರು (ರಾಯಚೂರು ಜಿಲ್ಲೆ), ಹುಮನಾಬಾದ್‌, ಭಾಲ್ಕಿ (ಎರಡೂ ಬೀದರ್ ಜಿಲ್ಲೆ),

ಸಂಕೇಶ್ವರ, ಗುಂಜಿ, ನಿಪ್ಪಾಣಿ (ಎಲ್ಲವೂ ಬೆಳಗಾವಿ ಜಿಲ್ಲೆ), ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ), ಲಕ್ಷ್ಮೀಶ್ವರ (ಗದಗ ಜಿಲ್ಲೆ), ಕುಕನೂರು (ಕೊಪ್ಪಳ ಜಿಲ್ಲೆ), ಅಕ್ಕಿಆಲೂರು (ಹಾವೇರಿ ಜಿಲ್ಲೆ), ಉತ್ತರಹಳ್ಳಿ (ಬೆಂಗಳೂರು ನಗರ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ತ್ಯಾಗರ್ತಿ, ಹುಂಚದಕಟ್ಟೆ, ಆನವಟ್ಟಿ (ಎಲ್ಲವೂ ಶಿವಮೊಗ್ಗ ಜಿಲ್ಲೆ), ಕಮ್ಮರಡಿ, ಕೊಪ್ಪ (ಎರಡೂ ಚಿಕ್ಕಮಗಳೂರು ಜಿಲ್ಲೆ), ಸೋಮವಾರಪೇಟೆ, ವಿರಾಜಪೇಟೆ (ಎರಡೂ ಕೊಡಗು ಜಿಲ್ಲೆ), ಸರಗೂರು (ಮೈಸೂರು ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ), ದಾವಣಗೆರೆ, ದಾವಣಗೆರೆ ಪಿಟಿಒ, ಸಂತೆಬೆನ್ನೂರು (ದಾವಣಗೆರೆ ಜಿಲ್ಲೆ), ತುಮಕೂರು ತಲಾ 1.

Published On: 15 July 2023, 03:56 PM English Summary: Rain news | Rain report : Thunderstorm in most parts of the state for the next 24 hours!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.