ಭಾರತೀಯ ರೈಲ್ವೆ ಇಲಾಖೆಯು ಮುಂಗಡವಾಗಿ ಟಿಕೆಟ್ ಬುಕ್ ಮಾಡುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಪ್ರಯಾಣಿಕರು ಇನ್ನು ಮುಂದೆ ಕೈಲು ಹೊರಡಲು ಕೇವಲ ಐದು ನಿಮಿಷ ಇರುವಾಗಲೂ ಟಿಕೇಟ್ ಕಾಯ್ದಿರಿಸಬಹುದು. ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಾಮಾನ್ಯ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಆರಂಭಿಸಲಾಗಿದ್ದು, ಅಕ್ಟೋಬರ್ 10 ರಿಂದ ಈ ರೈಲುಗಳು ಹೊರಡುವ ಐದು ನಿಮಿಷ ಮುಂಚೆ ಟಿಕೆಟ್ ಲಭ್ಯತೆ ಬಗ್ಗೆ ಮಾಹಿತಿ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ .
ಕೋವಿಡ್ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ರೈಲು ಹೊರಡುವ 3೦ನಿಮಿಷ ಮುನ್ನ ಕಾಯ್ದಿರಿಸಿದ ಟಿಕೆಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತಿತ್ತು. ಇದೀಗ ಸಮಯವನ್ನು ಐದು ನಿಮಿಷಕ್ಕೆ ಕಡಿತಗೊಳಿಸಲಾಗಿದೆ. ಆನ್‌ಲೈನ್, ಪಿಆರ್‌ಎಸ್ ಟಿಕೆಟ್ ಕೌಂಟರ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ 2ನೇ ಪಟ್ಟಿಯಲ್ಲಿ ಅವಕಾಶ ನೀಡಲಾಗುತ್ತದೆ. ಪಿಆರ್‌ಎಸ್ ಕೌಂಟರ್, ಆನ್‌ಲೈನ್ ಮೂಲಕ ಬುಕ್ ಮಾಡಿದವರಿಗೆ ಮೊದಲು ಬಂದವರಿಗೆ ಆದ್ಯತೆ ನಿಯಮಗಳ ಅನ್ವಯ 2ನೇ ಪಟ್ಟಿಯಲ್ಲಿ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೂ ಸಹ ಹಣವನ್ನು ವಾಪಸ್ ನೀಡಲಾಗುತ್ತದೆ.
ರೈಲು ಹೊರಡುವ 4 ಗಂಟೆ ಮೊದಲು ಮೊದಲ ರಿಸರ್ವ್ ಚಾರ್ಟ್ ಅನ್ನ ಸಿದ್ಧಪಡಿಸಲಾಗುತ್ತದೆ. ಎರಡನೇ ಚಾರ್ಟ್ ಸಿದ್ದಪಡಿಸುವ ಸಮಯ ಬದಲಾಗಿದ್ದರಿಂದ, ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಲು ಹೆಚ್ಚು ಸಮಯಾವಕಾಶ ಸಿಕ್ಕಂತಾಗಿದೆ. ಎರಡನೇ ಚಾರ್ಟ್ ಸಿದ್ಧವಾಗುವವರೆಗೆ ಪ್ರಯಾಣಿಕರು ಮೊದಲ ಬಾರಿಗೆ ಇಂಟರ್ನೆಟ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಎರಡನೇ ಚಾರ್ಟ್ ಸಿದ್ದಗೊಳ್ಳುವ ಮೊದಲು ಮುಂಗಡ ಟಿಕೆಟ್ ಗಳನ್ನು ರದ್ದುಮಾಡುವ ಅವಕಾಶವೂ ಇದೆ.
ಅಕ್ಟೋಬರ್ 10ರಿಂದ ಈ ಚಾರ್ಟ್‌ಗಳನ್ನು ರೈಲು ಹೊರಡುವ 30 ರಿಂದ 5 ನಿಮಿಷದ ನಡುವೆ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರು ಈ ಸಮಯದಲ್ಲಿ ಟಿಕೆಟ್ ಬುಕ್ ಮಾಡಬಹುದು.
ಎರಡನೇ ಹಂತದ ಕಾಯ್ದಿರಿಸಿದ ಟಿಕೆಟ್ ಪಟ್ಟಿಯನ್ನು 3೦ ನಿಮಿಷದ ಬದಲಾಗಿ ರೈಲು ಹೊರಡುವ ಐದು ನಿಮಿಷ ಮುಂಚೆ ಪ್ರಕಟಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು ಅದನ್ನು ರೈಲುನಿಲ್ದಾಣದಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನೇಕರು ತಮ್ಮ ಟಿಕೆಟ್ ರದ್ದು ಮಾಡಿದರೆ ಅದನ್ನು ಎರಡನೇ ಹಂತದ ರಿಸರ್ವೇಶನ್ ಅಲ್ಲಿ ಪಟ್ಟಿಮಾಡಿದರೆ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಸಾಮಾನ್ಯ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದ್ಯತೆ ಮತ್ತು ಅಗತ್ಯತೆ ಆಧಾರದ ಮೇಲೆ ವಿಶೇಷ ರೈಲುಗಳನ್ನು ದೇಶದ ವಿವಿಧ ಭಾಗಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.
Share your comments