1. ಸುದ್ದಿಗಳು

Project Cheetah: ಚೀತಾ ಸ್ಥಳಾಂತರ ಮಾಡುವಂತೆ ಕೇಂದ್ರಕ್ಕೆ ಮಧ್ಯಪ್ರದೇಶ ಸರ್ಕಾರದಿಂದ ಪತ್ರ

Kalmesh T
Kalmesh T
Project Cheetah: Madhya Pradesh govt letter to Center for relocation Photo Credit: The Print

Project Cheetah : ಕಳೆದ ಕೆಲವೇ ದಿನಗಳ ಹಿಂದೆ ಆಫ್ರಿಕಾದಿಂದ ತರಲಾಗಿದ್ದ ಎರಡು ಚೀತಾ ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೆ ಮಧ್ಯ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಚೀತಾ ಸ್ಥಳಾಂತರ ಮಾಡುವಂತೆ ಪತ್ರ ಬರೆದಿದೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ.

ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮಾರ್ಚ್‌ನಲ್ಲಿ ಒಂದು ಹಾಗೂ ಈ ಭಾನುವಾರ ಇನ್ನೊಂದು ಮೃತಪಟ್ಟಿವೆ. ಒಂದು ಚೀತಾ ನಾಲ್ಕು ಮರಿಗಳಿಗೆ ಜನ್ಮವನ್ನು ಸಹ ನೀಡಿತ್ತು.

ಜಗತ್ತಿನ ಅತ್ಯಂತ ವೇಗದ ಪ್ರಾಣಿಯೆಂದು ಹೆಸರಾದ ಚೀತಾಗಳ ಸಂತತಿಯನ್ನು ಭಾರತದಲ್ಲಿ ಮತ್ತೆ ಅಭಿವೃದ್ಧಿಪಡಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಏಳು ತಿಂಗಳ ಹಿಂದಷ್ಟೇ ಆಫ್ರಿಕಾದಿಂದ ತರಲಾಗಿದ್ದ ಚೀತಾಗಳಿಗೆ ಈಗ ಜಾಗದ ಸಮಸ್ಯೆ ಎದುರಾಗಿದೆ.

Relocation of cheetah: ಚೀತಾಗಳು ಮೃತಪಟ್ಟ ಬೆನ್ನಲ್ಲೇ ಮಧ್ಯಪ್ರದೇಶ ಅರಣ್ಯ ಇಲಾಖೆಯು ಜಾಗ ಹಾಗೂ ಸಿಬ್ಬಂದಿ ಕೊರತೆಯ ಸಮಸ್ಯೆ ಮುಂದೊಡ್ಡಿ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮಾರ್ಚ್‌ನಲ್ಲಿ ಒಂದು ಹಾಗೂ ಈ ಭಾನುವಾರ ಇನ್ನೊಂದು ಮೃತಪಟ್ಟಿವೆ. ಒಂದು ಚೀತಾ ನಾಲ್ಕು ಮರಿಗಳನ್ನು ಹಾಕಿದೆ.

ಚೀತಾಗಳನ್ನು ಮಧ್ಯಪ್ರದೇಶದ 748 ಚದರ ಕಿ.ಮೀ. ವಿಸ್ತೀರ್ಣದ ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಬಿಡುವ ನಿರ್ಧಾರ ಕೈಗೊಂಡಿದ್ದಾಗಲೇ ಕೆಲ ವನ್ಯಜೀವಿ ತಜ್ಞರು ಅಷ್ಟು ಜಾಗ ಸಾಲದು ಎಂದಿದ್ದರು.

Project cheetah in India :ಈಗ ಮಧ್ಯ ಪ್ರದೇಶ ಅರಣ್ಯ ಇಲಾಖೆಯು ಜಾಗದ ಸಮಸ್ಯೆಯ ಜೊತೆಗೆ ಸಿಬ್ಬಂದಿಯ ಕೊರತೆಯೂ ಇದೆ. ಒಂದು ಚೀತಾವನ್ನು ನೋಡಿಕೊಳ್ಳಲು 9 ಜನರು ಬೇಕು. ಅಷ್ಟು ಸಿಬ್ಬಂದಿ ನಮ್ಮಲ್ಲಿಲ್ಲ.

ಹೀಗಾಗಿ ಚೀತಾಗಳಿಗೆ ಬೇರೆ ಜಾಗ ತೋರಿಸಬೇಕು ಎಂದು ‘ಚೀತಾ ಯೋಜನೆ’ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಪತ್ರ ಬರೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲ ಚೀತಾಗಳು ಕುನೋ ಅರಣ್ಯದಲ್ಲಿ ಜಾಗ ಸಾಲದೆ ಪದೇಪದೇ ಬೇರೆ ಅರಣ್ಯಕ್ಕೆ ಹೋಗುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು. ಒಂದು ಚೀತಾಕ್ಕೆ ಸಂಚರಿಸಲು ಸರಾಸರಿ 100 ಚ.ಕಿ.ಮೀ. ಅರಣ್ಯ ಬೇಕಾಗುತ್ತದೆ.

Photo Credit: The Print

ಇನ್ನು ಕುನೋ ರಾಷ್ಟ್ರೀಯ ಉದ್ಯಾನವನ್ನೇ ಚೀತಾಗಳಿಗೆ ಯೋಗ್ಯವಾಗಿ ಮಧ್ಯಪ್ರದೇಶದ ಗಾಂಧಿ ಸಾಗರ್‌ ಅಥವಾ ನೌರಾದೇಹಿ ಅರಣ್ಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆರಂಭಿಸಿದರೆ ಅದಕ್ಕೆ ಕ್ರಮವಾಗಿ ಎರಡು ಹಾಗೂ ಮೂರು ವರ್ಷ ಬೇಕಾಗುತ್ತದೆ.

ಅಲ್ಲಿಯವರೆಗೆ ಚೀತಾಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ಅಧಿಕಾರಿಗಳಿಗೆ ಎದುರಾಗಿದೆ. ಹೀಗಾಗಿ ಬೇರೆ ಅರಣ್ಯವನ್ನು ಸೂಚಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಮೊದಲ ಕಂತಿನಲ್ಲಿ ನಮೀಬಿಯಾದಿಂದ ತಂದಿದ್ದ 8 ಚೀತಾಗಳನ್ನು ಈಗಾಗಲೇ ಮುಕ್ತ ಕಾಡಿಗೆ ಬಿಡಲಾಗಿದೆ. ಎರಡನೇ ಕಂತಿನಲ್ಲಿ ದಕ್ಷಿಣ ಆಫ್ರಿಕಾದಿಂದ ತಂದ 12 ಚೀತಾಗಳನ್ನು ಇನ್ನೂ ಪೂರ್ಣ ಪ್ರಮಾಣದ ಕಾಡಿಗೆ ಬಿಟ್ಟಿಲ್ಲ.

ಮೃತಪಟ್ಟ ಎರಡು ಚೀತಾಗಳ ಪೈಕಿ ಒಂದು ನಮೀಬಿಯಾ, ಇನ್ನೊಂದು ದಕ್ಷಿಣ ಆಫ್ರಿಕಾದ್ದಾಗಿದ್ದವು.

Published On: 26 April 2023, 04:26 PM English Summary: Project Cheetah: Madhya Pradesh govt letter to Center for relocation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.