1. ಸುದ್ದಿಗಳು

ಕಾಂಗ್ರೆಸ್‌ ಪರ ನಟ ಶಿವರಾಜ್‌ಕುಮಾರ್‌ ಪ್ರಚಾರ; ಪುನೀತ್‌ ಹೆಸರು ಪ್ರಸ್ತಾಪಿಸಿದ ಬಿಜೆಪಿ!

Hitesh
Hitesh
Pro-Congress Actor Shivrajkumar Campaign; BJP proposed Puneeth's name!

ರಾಜಕೀಯ ಮುಖಂಡರು ಹಾಗೂ ಪಕ್ಷಗಳ ಪರವಾಗಿ ಪ್ರಚಾರಕ್ಕೆ ಇಳಿದಿರುವ ನಟ ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅವರು ಒಂದೊಂದು ವರ್ಗದ ಮುನಿಸಿಗೆ ಕಾರಣವಾಗಿದ್ದಾರೆ.

ಈ ಮುನಿಸು, ವಾದ- ವಿವಾದದಲ್ಲಿ ಇದೀಗ ದಿ.ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನೂ ಎಳೆದು ತರಲಾಗಿದೆ.

ಇದಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಸೇರಿದಂತೆ ಹಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ.

ನಟ ಸುದೀಪ್‌, ದರ್ಶನ್‌ ಹಾಗೂ ಶಿವರಾಜ್‌ಕುಮಾರ್‌ ಸೇರಿದಂತೆ ಹಲವು ನಟ ಮತ್ತು ನಟಿಯರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ನಟ ಸುದೀಪ್‌ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಕ್ಕೆ ಮುಂದಾದ ಸಂದರ್ಭದಲ್ಲಿ ತೀವ್ರವಾದ ವಿರೋಧ ವ್ಯಕ್ತವಾಗಿತ್ತು.

ಅದೇ ರೀತಿ ಇದೀಗ ನಟ ಶಿವರಾಜ್‌ಕುಮಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುನೀತ್‌ರಾಜ್‌ಕುಮಾರ್‌ ಹೆಸರು

“ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!

ಅವರವ ಭಾವ ಭಕುತಿಗೆ...” ಎಂದು ಸಂಸದ ಪ್ರತಾಪಸಿಂಹ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಇದೀಗ ವಿವಾದಕ್ಕೆ ಕಾರಣವಾಗಿದೆ.

ಸಚಿವ ವಿ.ಸೋಮಣ್ಣ ಅವರು ಸಹ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಅವರ ಪರವಾಗಿ ಪ್ರಚಾರ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಪುನೀತ್‌ ಅವರ ಹೆಸರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ಅಭಿಯಾನ ಪ್ರಾರಂಭಿಸಿದ್ದಾರೆ.

ಅಪ್ಪು ಹೆಸರಲ್ಲಿ ಸಹಾಯ ಮಾಡಿದವರು ಹೇಳುವುದಿಲ್ಲ: ಶಿವರಾಜ್‌ಕುಮಾರ್‌

ಈ ಅಸಮಾಧಾನಗಳಿಗೆ ನಟ ಶಿವರಾಜ್‌ಕುಮಾರ್‌ ಅವರೂ ಸಹ ತೀಕ್ಷಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಚಿಕ್ಕ ಹುಡುಗ ಅಲ್ಲ ನನಗೆ 61 ವರ್ಷ ಈಗ ನನಗೆ ಎಲ್ಲರೂ ಸ್ನೇಹಿತರೇ ಅಂದಿದ್ದಾರೆ.

ಅಲ್ಲದೇ ದಿ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಈಗಲೂ ಸಮಾಜಸೇವೆ ಮಾಡುತ್ತಿದ್ದಾರೆ.

ಅಪ್ಪು ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಿರುವವರು ಯಾರೂ ಹೇಳಿಕೊಂಡು ತಿರುಗುತ್ತಿಲ್ಲ ಎಂದಿದ್ದಾರೆ. 

ವರುಣಾದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರ ನಟ ಶಿವಣ್ಣ ಅವರು ಪ್ರಚಾರ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. 

ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಅವರು  ಅಸಮಾಧಾನ ವ್ಯಕ್ತಪಡಿಸಿದ್ದರು.  

ಇದಕ್ಕೆ ಪ್ರತಿಕ್ರಿಯಿಸಿರುವ ಶಿವಣ್ಣ ಅವರು,  ಸಚಿವ ಸೋಮಣ್ಣ ಹಾಗೂ ಪ್ರತಾಪ ಸಿಂಹ ಅವರು ನಮಗೆ ಒಳ್ಳೆಯ ಆಪ್ತರಾಗಿದ್ದಾರೆ.

ಅಲ್ಲದೇ ಅವರ ಬಗ್ಗೆ ಒಳ್ಳೆಯ ಗೌರವವಿದೆ ಎಂದು ಹೇಳಿದ್ದಾರೆ.

ಇನ್ನು  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕು ಎಂದು ಮೊದಲಿನಿಂದಲೂ ಆಸೆ ಇತ್ತು. 

ಈಚೆಗೆ ಅವರನ್ನು  ಭೇಟಿ ಮಾಡಿದೆ. ರಾಹುಲ್ ಗಾಂಧಿ ಸ್ಮಾರ್ಟ್ ಆಗಿ ಇದ್ದಾರೆ.

ರಾಹುಲ್ ಗಾಂಧಿ ಅವರ ಪಿಟ್ ನೆಸ್ ನನಗೆ ಇಷ್ಟ ಆಯ್ತು ಎಂದು ಹೇಳಿದ್ದಾರೆ. 

pic credits: Puneeth Rajkumar twitter account

HeavyRain ಮೋಚಾ ಚಂಡಮಾರುತ ಪ್ರಭಾವ; ರಾಜ್ಯದಲ್ಲಿ ಮಳೆ!

Mocha Cyclone ಮೋಚಾ ಚಂಡಮಾರುತ ಕರ್ನಾಟಕದ ಮೇಲೆ ಪರಿಣಾಮ! 

Published On: 05 May 2023, 01:56 PM English Summary: Pro-Congress Actor Shivrajkumar Campaign; BJP proposed Puneeth's name!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.