1. ಸುದ್ದಿಗಳು

ದೀದಿ ಕಾರ್ಯಕ್ರಮ; ಮಹಿಳೆಗೆ ಎಲೆಕ್ಷನ್‌ ಆಫರ್‌ ಕೊಟ್ಟ ಮೋದಿ!

Maltesh
Maltesh

ಲಖ್ಪತಿ ದೀದಿ ಯೋಜನೆಯ ಫಲಾನುಭವಿಯೊಬ್ಬರಿಗೆ ಪ್ರಧಾನಿ ಮೋದಿ ಅವರು ಚುನಾವಣೆಯ ಆಫರ್‌ ನೀಡಿದ್ದು, ಮಹಿಳೆ ಅದನ್ನು ನಯವಾಗಿ ತಿರಸ್ಕರಿಸಿ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಖ್ಪತಿ ದೀದಿ ಯೋಜನೆಯ ಫಲಾನುಭವಿಯಾದ ಚಂದಾದೇವಿ ಅವರಿಗೆ ವೇದಿಕೆಯ ಮೇಲೆಯೇ ಚುನಾವಣಾ ಆಫರ್‌ ನೀಡಿದ್ರು.

ಈ ಫಲಾನುಭವಿ ವೇದಿಕೆಯ ಮೇಲೆ ಭಾಷಣ ಮಾಡಿದ ನಂತರ ಅವರಿಗೆ ಪ್ರಧಾನಿ ಮೋದಿ ಅವರ ಭಾಷಣದಿಂದ ಪ್ರಭಾವಿತರಾಗಿ ನೀವು ಒಳ್ಳೆಯ ಭಾಷಣ ಮಾಡುತ್ತೀರಿ ನೀವು ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ 'ನಾನು ಚುನಾವಣೆಗೆ ಸ್ಪರ್ಧಿಸುವ ಯೋಚನೆ ಮಾಡಿಲ್ಲ. ಆದರೆ ನಾನು ನಿಮ್ಮಿಂದ ಮಾತ್ರ ಸ್ಫೂರ್ತಿ ಪಡೆದಿದ್ದೆನೆ ನಿಮ್ಮ ಮಾರ್ಗದರ್ಶನದಲ್ಲಿ ಒಳ್ಳೆಯ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಚಂದಾದೇವಿ ಅವರು 2004 ರಲ್ಲಿ ತನ್ನ 10ನೇ ತರಗತಿಯಲ್ಲಿ ಉತ್ತೀರ್ಣರಾದರು ಮುಂದೆ ಕಲಿಯುವ ಹಂಬಲವಿದ್ದರೂ ಕೂಡ ಮುಂದಿನ ವರ್ಷ ಮದುವೆಯಾದ ಕಾರಣ ಮುಂದೆ ಓದಲು ಸಾಧ್ಯವಾಗಲಿಲ್ಲ ಎಂದರು. ಸದ್ಯ ಪತಿ ಓರ್ವ ಪುತ್ರಿ ಪುತ್ರನನ್ನು ಹೊಂದಿರುವ ಚಂದಾದೇವಿ ಅವರು ಸ್ವಸಹಾಯ ಗುಂಪುಗಳ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

ಈ ವೇಳೆ ಕೇಂದ್ರದ ವಿಕಸಿತ ಭಾರತ ಯೋಜನೆಯು ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ನನ್ನ ತಂಡ ಹಾಗೂ ನಾನು ಸಮಾಜದಲ್ಲಿನ ಶಕ್ತಿಶಾಲಿಗಳನ್ನು ಗುರುತಿಸಲು ಅವರ ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡಿತು ಎಂದರು.

Published On: 20 December 2023, 03:59 PM English Summary: Prime Minister Modi gave election offer to a woman on stage!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.