1. ಸುದ್ದಿಗಳು

Price Hike: ಮತ್ತೆ ಬೆಲೆ ಏರಿಕೆಯ ಶಾಕ್‌! “ಸ್ನಾನ ಮಾಡುವಂತಿಲ್ಲ, ಬಿಸ್ಕೆಟ್ ತಿನ್ನುವಂತಿಲ್ಲ” , ಮಾರುಕಟ್ಟೆ ತಜ್ಞರು ಹೇಳೊದೇನು ಗೊತ್ತೆ?

Kalmesh T
Kalmesh T
Price Hike: Soap, Biscuit, smartphone, TV, laptop

ಪೆಟ್ರೋಲ್‌ ಡಿಸೇಲ್‌ ದರಗಳ ಬೆನ್ನಲ್ಲೇ ಈಗ ಮತ್ತೆ ದಿನಬಳಕೆ ವಸ್ತುಗಳ ಜೊತೆಗೆ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚುತ್ತಿವೆ. ಇನ್ನೂ ಬೆಲೆ ಹೆಚ್ಚೆ ಆಗಲಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದ್ದು ದಿನನಿತ್ಯದ ಗ್ರಾಹಕ ಸರಕು ಸರಂಜಾಮುಗಳ ಮಾರುಕಟ್ಟೆ ಮೇಲೆ ಬೆಲೆ ಏರಿಕೆಯ ಒತ್ತಡ ಬೀಳಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿರಿ: Petrol ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಸಿಹಿಸುದ್ದಿ; 2025 ಕ್ಕೆ ಬರಲಿದೆ ಪರಿಸರ ಸ್ನೇಹಿ ಪೆಟ್ರೋಲ್!

ಭಾರತೀಯರಿಗೆ ಹೆಮ್ಮೆಯ ಸುದ್ದಿ : 2022-24 ಕ್ಕೆ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (AAEA) ಅಧ್ಯಕ್ಷರಾಗಿ ಭಾರತ ಆಯ್ಕೆ!

ಇನ್ನೂ ಜೊತೆಜೊತೆಗೆ ಉತ್ಪಾದನಾ ದರ ಹೆಚ್ಚಾಗಿದ್ದು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟಿವಿ, ರೆಫ್ರಿಜಿರೇಟರ್‌ ಸೇರಿದಂತೆ ಸಾಬೂನಿನಿಂದ ಬಿಸ್ಕತ್‌ ತನಕ FMCG ವಲಯದ ಪದಾರ್ಥಗಳ ದರವೂ ಏರಿಕೆಯಾಗಲಿದೆ ಎಂದಿದ್ದಾರೆ.

ಡಾಲರ್‌ ಎದುರು ಭಾರತದ ಕರೆನ್ಸಿ 77 ರೂ.ಗಿಂತ ಕೆಳಗೆ ಕುಸಿದಿರುವುದರಿಂದ ಆಮದು ಕಚ್ಚಾ ವಸ್ತುಗಳನ್ನು ಒಳಗೊಂಡ ಉತ್ಪನ್ನಗಳ ದರ ಹೆಚ್ಚು ಮಾಡಬೇಕಾದ ಒತ್ತಡ ಉತ್ಪಾದಕ ಕಂಪನಿಗಳ ಮೇಲಿದೆ.

ಈ ತಿಂಗಳಿನಿಂದಲೇ ಬೆಲೆ ಏರಿಕೆ ಸಾಧ್ಯತೆ!

ಈಗಾಗಲೇ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸಾಕಷ್ಟು ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಎರಡನೇ ಹಂತದ ಬೆಲೆ ಹೆಚ್ಚಳವು ಮೇ 2-3ನೇ ವಾರದಿಂದಲೇ ಆರಂಭವಾಗಬಹುದು ಎಂದು ಉದ್ಯಮದ ಮೂಲಗಳು ತಿಳಿಸಿವೆ.

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ಕಳೆದ ಎರಡು ತಿಂಗಳಲ್ಲಿ ಉಕ್ಕು, ಅಲ್ಯುಮಿನಿಯಂ,  ಪ್ಲಾಸ್ಟಿಕ್‌ನಂಥ ಸರಕುಗಳ ದರಗಳು ಶೇ. 8ರಿಂದ 10ರಷ್ಟು ಹೆಚ್ಚಾಗಿವೆ. ಹೆಚ್ಚುವರಿ ವೆಚ್ಚಗಳನ್ನು ಭರಿಸುತ್ತಿರುವ ಕಾರಣಕ್ಕೆ ಕಂಪನಿಗಳ ಲಾಭದ ಪ್ರಮಾಣ ಕೂಡ ಕುಸಿದಿದೆ ಎಂದು ಮಾಹಿತಿ ಇದೆ.

ಕಾಸ್ಟ್ಲಿ ಜಗತ್ತು!

- ತುಟ್ಟಿಯಾಗಲಿವೆ ಬಿಸ್ಕತ್‌, ರಸ್ಕ್‌, ಬ್ರೆಡ್‌, ಕೇಕ್‌, ಡೇರಿ ಉತ್ಪನ್ನಗಳು

- ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳ ಬೆಲೆ ಈ ತಿಂಗಳಿಂದಲೇ ಶೇ. 3-5ರಷ್ಟು ಏರಿಕೆಯಾಗಲಿವೆ.

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ

- ಕಾರ್‌ ಉತ್ಪಾದಕ ಕಂಪನಿಗಳ ಮೇಲೂ ದರ ಏರಿಕೆಯ ಒತ್ತಡವಿದೆ.

- ಹೈಯರ್‌ ಇಂಡಿಯಾದ ಉತ್ಪನ್ನಗಳ ದರ ಕಳೆದ ತಿಂಗಳು ಶೇ. 3, ಈ ತಿಂಗಳು ಶೇ. 3 ರಿಂದ 5ರಷ್ಟು ಹೆಚ್ಚಿವೆ.

ಈಗಾಗಲೇ ಬೆಲೆ ಏರಿಕೆಯ ಸುಳಿಗೆ ಸಿಕ್ಕು ನರಳುತ್ತಿರುವ ಜನತೆಗೆ ಇನ್ನೂ ಅದೆಷ್ಟು ಬರೆಗಳು ಬೀಳಲಿವೆಯೋ. ಸರ್ಕಾರಗಳು ಈ ಕುರಿತು ಕೊಂಚ ಎಚ್ಚರಿಕೆ ನಡೆಯನ್ನು ಅನುಸರಿಸುವುದು ಉತ್ತಮ.

50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

Published On: 12 May 2022, 10:00 AM English Summary: Price Hike: Soap, Biscuit, smartphone, TV, laptop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.