ಕೇಂದ್ರ ಸರ್ಕಾರದ ಯೋಜನೆ ಆಗಿರುವಂತಹ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2019 -20 ನೇ ಸಾಲಿನ ಮುಂಗಾರಿನ ಹಣ ರಿಲೀಸ್ ಆಗಿದ್ದು, ರೈತರ ಖಾತೆಗೆ ಜಮಾ ಆಗಿದೆ. ಗದಗ ಜಿಲ್ಲೆಯ ರೈತರಿಗೆ 2019 20 ನೇ ಸಾಲಿನ ಮುಂಗಾರಿನ ಬೆಳೆಯಲ್ಲಿ ವಿಮೆ ಮಾಡಿಸಿದ ಹೆಸರು ಹಾಗೂ ಇನ್ನಿತರ ಬೆಳೆಗಳಿಗೆ ಇನ್ಸೂರೆನ್ಸ್ ಹಣ ಜಮೆ ಯಾಗಿದ್ದು, ಆದರೂ ಕೂಡ ಇದು ರೈತರಿಗೆ ಖುಷಿಯನ್ನು ತಂದಿಲ್ಲ.
ಯಾಕೆಂದರೆ ಈ ಬಾರಿ ಕೊರೋನಾ ಹಾಗೂ ಇನ್ನಿತರ ಸಮಸ್ಯೆಗಳ ಕಾರಣದಿಂದ ಸರ್ಕಾರಕ್ಕೆ ಹಣದ ಕೊರತೆಯಿಂದಾಗಿ ಅತ್ಯಂತ ಕಡಿಮೆ ಪರ್ಸೆಂಟ್ ವಿಮಾ ಕ್ಲೇಮ್ ಆಗಿದೆ, ಕಾರಣ ರೈತರು ತುಂಬಿದ್ದ ಕ್ಕಿಂತ ಕೇವಲ 2 ರಿಂದ 4 ಪರ್ಸೆಂಟ್ ಮಾತ್ರ ಹೆಚ್ಚಿಗೆ ಹಣ ಜಮಾ ಆಗಿದೆ. ಒಂದು ಕಡೆ ನೋಡಿದರೆ ದುಃಖದ ಸಂಗತಿ ಇನ್ನೊಂದು ಕಡೆ ನಾವು ತುಂಬಿದ ಹಣವಾದರೂ ವಾಪಸ್ ಬಂತು ಎಂದು ಖುಷಿಪಡುವುದು.
ಈ ಬಾರಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಇನ್ನೊಂದು ವಿಶೇಷತೆ ಏನೆಂದರೆ ಈ ಬಾರಿ ಅತ್ಯಂತ ಕ್ಲಿಯರಾಗಿ ಎಲ್ಲ ಮಾಹಿತಿಯನ್ನು ನೀಡಿದ್ದಾರೆ, ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಹೊಡೆದು ಮುಂದೆ ಅಂತ ಕೊಟ್ಟಾಗ ಅದು ನಿಮ್ಮ ಯಾವ ಖಾತೆಗೆ ಜಮಾ ಆಗಿದೆ ಹಾಗೂ ಯಾವಾಗ ಜಮೆಯಾಗಿದೆ ಹಾಗೂ ಟ್ರಾನ್ಸಾಕ್ಷನ್ ಯುಟಿಆರ್ ನಂಬರ್ ಅನ್ನು ಸಹ ನೀಡಿದ್ದಾರೆ. ಕಾಗೆ ನಿಮ್ಮ ಹಣ ಎಲ್ಲಿ ಹೋಗಿದೆ ಎಂಬುದು ಯಾವುದೇ ಗೊಂದಲಗಳು ಸೃಷ್ಟಿಯಾಗುವುದಿಲ್ಲ ಹಾಗಾಗಿ ರೈತರು ಇದನ್ನು ಚೆಕ್ ಮಾಡಬೇಕಾಗಿ ವಿನಂತಿ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಇಲ್ಲ ಎಂಬುದನ್ನು ನೀವು ಈ ಕೂಡಲೇ ಚೆಕ್ ಮಾಡಿಕೊಳ್ಳಿ ಇದನ್ನು ಹೇಗೆ ಚೆಕ್ ಮಾಡಿಕೊಳ್ಳುವುದೆಂದರೆ
- ಗೂಗಲ್ನಲ್ಲಿ samrakshane ಎಂದು ಟೈಪ್ ಮಾಡಿ ಸರ್ಚ್ ಮಾಡಿ
- ಅವಾಗ ಮೊದಲನೇ ಆಯ್ಕೆ ಸಂರಕ್ಷಣೆ ಕ್ರಾಪ್ ಇನ್ಸೂರೆನ್ಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
- ಅದರಲ್ಲಿ 2019-20 ಹಾಗೂ ಖರೀಫ್ ಅನ್ನು ಆಯ್ಕೆ ಮಾಡಿ ಮುಂದೆ ಎಂದು ಒತ್ತಿ.
- ಅಲ್ಲೇ ಕೆಳಗಡೆ ರೈತರ ಕಾರ್ನರ್ ರಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಮುಂದೆ ನಿಮಗೆ ಮೂರು ಆಯ್ಕೆಗಳು ಬರುತ್ತವೆ ಒಂದು ಪ್ರೊಪೋಸಲ್ ನಂಬರ್, ಎರಡನೆಯದ್ದು ಮೊಬೈಲ್ ನಂಬರ್, ಹಾಗೂ ಮೂರನೆಯದ್ದು ಆಧಾರ್ ನಂಬರ್.-
- ನಿಮಗೆ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡಿ ಅಲ್ಲಿ ಆ ಸಂಖ್ಯೆಯನ್ನು ನಮೂದಿಸಿ
- ಮುಂದಿನ ಬಟನನ್ನು ಒತ್ತಿ ಆಗ ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಬರುತ್ತದೆ.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ
Share your comments