1. ಸುದ್ದಿಗಳು

ದಾಳಿಂಬೆ ಕೃಷಿಯ ಅನುಭವ ಮತ್ತು ಸಂವಾದ ಕಾರ್ಯಕ್ರಮ ಜುಲೈ 3ರಂದು

ಯಾದಗಿರಿ ಜಿಲ್ಲೆಯ ತೋಟಗಾರಿಕೆ ವಿಸ್ತರಣಾ ಘಟಕದ ವತಿಯಿಂದ ಜುಲೈ 3ರಂದು ಶನಿವಾರ ಬೆಳಗ್ಗೆ 11.30ಕ್ಕೆ ಪ್ರಗತಿಪರ ರೈತ ಗಂಗಾಧರ ರಾವ್ ಅವರೊಂದಿಗೆ ‘ದಾಳಿಂಬೆ ಕೃಷಿಯ ಅನುಭವ ಮತ್ತು ಸಂವಾದ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಚಂದ್ಲಾಪುರ ಗ್ರಾಮದ ನಿವಾಸಿಯಾಗಿರುವ ಗಂಗಾಧರ ರಾವ್ ಅವರು ಪ್ರಗತಿಪರ ಕೃಷಿಕರಾಗಿದ್ದು, ದಾಳಿಂಬೆ ಸೇರಿದಂತೆ ಹಲವು ಬೆಳೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಮೂಲಕ ಅತ್ಯಧಿಕ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಗುರುತಿಸಿ ತೋಟಗಾರಿಕಾ ವಿಶ್ವವಿದ್ಯಾಲಯವು 2017ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಒಟ್ಟು 60 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಗಂಗಾಧರ ರಾವ್ ಅವರು, ದಾಳಿಂಬೆ, ಎಲೆಕೋಸು, ಪಪ್ಪಾಯ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಮಿಶ್ರ ಬೆಳೆಗೆ ಹೆಚ್ಚು ಒತ್ತು ನೀಡಿರುವ ಇವರ ಕೃಷಿ ಭೂಮಿಯೇ ಒಂದು ಪುಟ್ಟ ಕೃಷಿ ಉದ್ಯಮದಂತಿದ್ದು, ಪ್ರತಿ ನಿತ್ಯ 50ಕ್ಕೂ ಅಧಿಕ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಾರೆ. ಈ ಮೂಲಕ ಗಂಗಾಧರ ರಾವ್ ಅವರು ಒಬ್ಬ ಪ್ರಗತಿಪರ ಕೃಷಿಕರಾಗಿರುವ ಜೊತೆ ಜೊತೆಗೆ, ಹಲವು ಜನರಗೆ ಉದ್ಯೋಗ ಸೃಷ್ಟಿ ಕೂಡ ಮಾಡಿದ್ದಾರೆ.

ಶನಿವಾರ ನಡೆಯಲಿರುವ ಸಂವಾದ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಗಂಗಾಧರ ರಾವ್ ಅವರು, ದಾಳಿಂಬೆ ಬೆಳೆಗಾರರು ಹಾಗೂ ಇದುವರೆಗೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದು, ಈಗ ದಾಳಿಂಬೆ ಬೆಳೆಯಲು ಸಿದ್ಧತೆ  ನಡೆಸುತ್ತಿರುವ ಆಸಕ್ತ ರೈತರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬಳಿಕ ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮುಲಕ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ವೇಳೆ ರಾವ್ ಅವರು, ದಾಳಿಂಬೆ ಕೃಷಿ ಆರಮಭಿಸುವ ಮುನ್ನ ಮಾಡಿಸಬೇಕಿರುವ ಮಣ್ಣಿನ ಪರೀಕ್ಷೆಯಿಂದ ಆರಂಭಿಸಿ, ಭೂಮಿ ಸಿದ್ಧಪಡಿಸಿಕೊಳ್ಳುವ ವಿಧಾನ, ತಳಿಯ ಆಯ್ಕೆ, ಸಾಲಿನಿಂದ ಸಾಲಿಗೆ ಗಿಡಗಳ ನಡುವೆ ಇರಬೇಕಿರುವ ಅಂತರ, ಗಿಡಗಳು ದೀರ್ಘ ಕಾಲದವರೆಗೆ ಫಲ ನೀಡುವಂತಾಗಲು ಕೈಗೊಳ್ಳಬೇಕಿರುವ ಕ್ರಮಗಳು, ಗೊಬ್ಬರ ನೀಡಬೇಕಿರುವ ಸಮಯ, ಗೊಬ್ಬರದ ಪ್ರಮಾಣ, ಯಾವ ಸಮಯದಲ್ಲಿ ಪೋಷಕಾಂಶಗಳನ್ನು ನೀಡಬೇಕು ಮತ್ತು ಯಾವ ಸಮಯದಲ್ಲಿ ನೀಡಬಾರದು, ಕೀಟಗಳ ಹಾವಳಿ ತಡೆಯಲು ಅನುಸರಿಸಬೇಕಿರುವ ಕ್ರಮಗಳು, ಬೆಳೆಗಳ ನಿರ್ವಹಣೆ... ಹೀಗೆ, ದಾಳಿಂಬೆ ಸಸಿಗಳನ್ನು ಆಯ್ಕೆ ಮಾಡುವುದರಿಂದ ಆರಂಭವಾಗಿ, ಮರಗಳಿಂದ ಹಣ್ಣುಗಳನ್ನು ಕಟಾವು ಮಾಡುವ ಹಂತದವರೆಗೂ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯುವ ಸಂವಾದ ಕಾರ್ಯಕ್ರಮವು ಸರಿಯಾಗಿ ಬೆಳಗ್ಗೆ 11.30ಕ್ಕೆ ಆರಂಭವಾಗಲಿದ್ದು, ಆಸಕ್ತಿ ಹೊಂದಿರುವ ರೈತರು https://meet.google.com/epo-qmjv-twb ಈ ಲಿಂಕ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು. 

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು. ಹೆಚ್ಚಿನ ಮಾಹಿತಿಗೆ ಮೊ: 9481060077, 9036798060 ಸಂಪಪರ್ಕಿಸಲು ಕೋರಲಾಗಿದೆ.

Published On: 02 July 2021, 08:54 PM English Summary: pomegranate farming experience and conversation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.