1. ಸುದ್ದಿಗಳು

ಶಾಕಿಂಗ್‌ ಸುದ್ದಿ: ಪಿಎಂ ಕಿಸಾನ್‌ ಯೋಜನೆಯಿಂದ ಶೇ 67 ರಷ್ಟು ರೈತರು ಔಟ್‌..!

Maltesh
Maltesh
ಸಾಂದರ್ಭಿಕ ಚಿತ್ರ

ದೇಶದ ರೈತಾಪಿ ವರ್ಗದಲ್ಲಿ ಬಹು ಜನಪ್ರಿಯಗೊಂಡ ಪಿಎಂ ಕಿಸಾನ್‌ ಯೋಜನೆಗೆ ಸಂಬಂಧಿಸಿದಂತೆ ಶಾಕಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.  ಶೇ 67 ರಷ್ಟು ರೈತರನ್ನು ಈ ಯೋಜನೆಯಿಂದ ಕೈ ಬಿಡಲಾಗಿದೆ.

ಯೆಸ್‌ RTI ಕಾರ್ಯಕರ್ತ ಕನ್ನಯ್ಯ ಕುಮಾರ್‌ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಿದ ಕೃಷಿ ಸಚಿವಾಲಯ ಪಿಎಂ ಕಿಸಾನ್‌ ಯೋಜನೆಯ 12ನೇ ಕಂತಿನಲ್ಲಿ ಶೇ 67 ರಷ್ಟು ಜನರನ್ನು ಕೈಬಿಡಲಾಗಿದೆ ಎಂದಿದೆ.

ಕೃಷಿ ಸಚಿವಾಲಯದ ಕಂತುವಾರು ಪಾವತಿ ಯಶಸ್ಸಿನ ವರದಿಯು 2022 ರ ಮೇ-ಜೂನ್‌ನಲ್ಲಿ, ಕೇವಲ 3.87 ಕೋಟಿ ರೈತರು ತಮ್ಮ ಖಾತೆಗಳಿಗೆ  11 ನೇ ಕಂತನ್ನು ಸ್ವೀಕರಿಸಿದ್ದಾರೆ ಎಂದಿದೆ. ಇದು ಫೆಬ್ರವರಿ 2019 ರಲ್ಲಿ ಮೊದಲ ಕಂತನ್ನು ಪಡೆದ 11.84 ಕೋಟಿ ರೈತರಿಂದ ತೀವ್ರ ಕುಸಿತವಾಗಿದೆ.  

ಬಿಗ್‌ನ್ಯೂಸ್‌: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ

ಮೊದಲ ಕಂತಿನಲ್ಲಿ 11.84 ಕೋಟಿ ರೈತರಿಂದ, 9.87 ಕೋಟಿ ರೈತರಿಂದ ಪಡೆದ ಆರನೇ ಕಂತಿನಿಂದಲೇ ಇಳಿಕೆಯ ಪ್ರವೃತ್ತಿ ಆರಂಭವಾಗಿದೆ. ಆಂಧ್ರಪ್ರದೇಶದಲ್ಲಿ ಫಲಾನುಭವಿಗಳ ಸಂಖ್ಯೆ 55.68 ಲಕ್ಷದಿಂದ 28.2 ಲಕ್ಷಕ್ಕೆ ಇಳಿದಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ಬಿಹಾರದಲ್ಲಿ ಫಲಾನುಭವಿಗಳ ಸಂಖ್ಯೆ 83 ಲಕ್ಷದಿಂದ ಏಳು ಲಕ್ಷಕ್ಕೆ ತಲುಪಿದೆ..ಇನ್ನು ಇಷ್ಟು ಕುಸಿತವಾಘಲು ಕಾರಣ ಏನೆಂಬುದರ ಕುರಿತು ಕೃಷಿ ಸಚಿವಾಲಯ ಯಾವುದೇ ಮಾಹಿತಿ ನೀಡಿಲ್ಲ.

13ನೇ ಕಂತಿಗೆ ರೇಷನ್‌ ಕಾರ್ಡ್‌ ಕಡ್ಡಾಯ

ಈ ಬಾರಿ ರೈತರು ತಮ್ಮ ಖಾತೆಗೆ 13ನೇ ಕಂತಿನ ಹಣ ತಲುಪಲು ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ಇದಕ್ಕಾಗಿ ರೇಷನ್‌ ಕಾರ್ಡ್‌ ನಕಲು ಪ್ರತಿ ಸಲ್ಲಿಸುವುದು ಕಡ್ಡಾಯ. ರೈತರು ರೇಷನ್‌ ಕಾರ್ಡ್‌ (Ration Card) ಹಾರ್ಡ್ ಕಾಪಿಯನ್ನು ನೀಡಬೇಕಾಗಿಲ್ಲ, ಅವರು ಪಿಡಿಎಫ್ (PDF) ಫೈಲ್ ಮಾಡಿ ರೇಷನ್‌ ಕಾರ್ಡ್‌ ಸಾಫ್ಟ್ ಕಾಪಿಯನ್ನು (Soft Copy)ಅಪ್‌ಲೋಡ್ ಮಾಡಬೇಕು. ಇದಲ್ಲದೇ ಇದುವರೆಗೆ ಕೆವೈಸಿ ಮಾಡದ ರೈತರು ಆದಷ್ಟು ಬೇಗ ಕೆವೈಸಿ (eKyc) ಮಾಡಿಸಿಕೊಳ್ಳಬೇಕು. ಈ ಎರಡು ಕೆಲಸಗಳನ್ನು ಮಾಡದೆ ಇರುವ ಅನ್ನದಾತರಿಗೆ 13ನೇ ಕಂತಿನ ಹಣ  ಖಾತೆಗೆ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ನ್ಯೂಸ್‌: ನವೆಂಬರ್‌ 30ರಂದು ಖಾತೆಗೆ ಬರಲಿದೆ ಹಣ

ಕಳೆದ ವರ್ಷ ಮೂರನೇ ಕಂತನ್ನು ಜನವರಿ 1 ರಂದು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ಜನವರಿಯಲ್ಲಿ ಹಣವನ್ನು ವರ್ಗಾಯಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಇದೆ. ಆದರೆ, ಈ ವಿಷಯದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆಯಾಗಲಿ ಅಥವಾ ಹೇಳಿಕೆಯಾಗಲಿ ಹೊರಬಿದ್ದಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾಡದ ರೈತರು ಇದೀಗ ನೋಂದಣಿ ಮಾಡಬಹುದು ಇದರಿಂದ ಅವರು ಮುಂದಿನ ಕಂತನ್ನು ಪಡೆಯಬಹುದು.

Published On: 21 November 2022, 05:23 PM English Summary: PM Kisan Dropout Percent Farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.