ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಪಿಎಂ ಕಿಸಾನ್ ಯೋಜನೆಯ 12ನೇ ಕಂತನ್ನು ಬಿಡುಗಡೆ ಮಾಡಿದ್ದು, ಇದೀಗ ನೀವು 13ನೇ ಕಂತಿಗಾಗಿ ಕಾಯುತ್ತಿದ್ದರೆ, ಇಲ್ಲಿದೆ ಮುಂದಿನ ಕಂತಿನ ಕುರಿತಾದ ಮಾಹಿತಿ
ಇದನ್ನೂ ಓದಿರಿ: ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮಳೆ ಸಾಧ್ಯತೆ; ನವೆಂಬರ್ 6ರಿಂದ ಚಳಿ ಆರಂಭದ ಮೂನ್ಸೂಚನೆ!
PM Kisan 13th Instalment: ಪಿಎಂ ಕಿಸಾನ್ 13ನೇ ಕಂತಿನ ಮೊದಲ ಕಂತಿನ ಹಣ ರೂ.2000 ರೈತರಿಗೆ ಏಪ್ರಿಲ್ 1 ಮತ್ತು ಜುಲೈ 31 ರ ನಡುವೆ ನೀಡಲಾಗುತ್ತದೆ.
ಎರಡನೇ ಕಂತನ್ನು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಬಿಡುಗಡೆ ಮಾಡಲಾಗುತ್ತದೆ.
ಹಾಗೆಯೇ ವರ್ಷದ ಮೂರನೇ ಕಂತನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.
ಕಳೆದ ವರ್ಷ ಮೂರನೇ ಕಂತನ್ನು ಜನವರಿ 1 ರಂದು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ಜನವರಿಯಲ್ಲಿ ಹಣವನ್ನು ವರ್ಗಾಯಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಇದೆ.
2022-23 ಹಿಂಗಾರು ಋತುವಿನ ರಸಗೊಬ್ಬರಗಳಿಗೆ ₹51,875 ಕೋಟಿ ಸಬ್ಸಿಡಿಗೆ ಕ್ಯಾಬಿನೆಟ್ ಅನುಮೋದನೆ!
ಆದರೆ, ಈ ವಿಷಯದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆಯಾಗಲಿ ಅಥವಾ ಹೇಳಿಕೆಯಾಗಲಿ ಹೊರಬಿದ್ದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾಡದ ರೈತರು ಇದೀಗ ನೋಂದಣಿ ಮಾಡಬಹುದು ಇದರಿಂದ ಅವರು ಮುಂದಿನ ಕಂತನ್ನು ಪಡೆಯಬಹುದು.
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸುವುದು ಹೇಗೆ?
ಈ ಯೋಜನೆಗಾಗಿ ನೋಂದಾಯಿಸಲು ಎರಡು ಮಾರ್ಗಗಳಿವೆ. ಒಂದು ಆಫ್‌ಲೈನ್ ಮತ್ತು ಇನ್ನೊಂದು ಆನ್‌ಲೈನ್.
ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್ ಇಳುವರಿ!
ಪಿಎಂ ಕಿಸಾನ್ ಆಫ್‌ಲೈನ್ ನೋಂದಣಿ ಪ್ರಕ್ರಿಯೆ
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಲು ರೈತರು ಸ್ಥಳೀಯ ಕಂದಾಯ ಅಧಿಕಾರಿ ಅಥವಾ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ನೋಡಲ್ ಅಧಿಕಾರಿಯನ್ನು ಭೇಟಿ ಮಾಡಬೇಕಾಗುತ್ತದೆ.
ನೋಂದಣಿಗಾಗಿ ಅವರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ಸಂಪರ್ಕಿಸಬಹುದು. ನೀವು ಮಾಡಬೇಕಾಗಿರುವುದು ಎಲ್ಲಾ ಪ್ರಮುಖ ದಾಖಲೆಗಳನ್ನು ಒಯ್ಯುವುದು ಮತ್ತು ಅದನ್ನು CSC ಯಲ್ಲಿ ಅಧಿಕೃತ ಉಸ್ತುವಾರಿಗೆ ಸಲ್ಲಿಸುವುದು.
ಪಿಎಂ ಕಿಸಾನ್ ಆನ್‌ಲೈನ್ ನೋಂದಣಿ ಪ್ರಕ್ರಿಯೆ
ಸ್ವಯಂ ನೋಂದಣಿಗಾಗಿ PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಈಗ ಮುಖಪುಟದ ಬಲಭಾಗದಲ್ಲಿರುವ 'ರೈತರ ಮೂಲೆ'(farmers corner) ವಿಭಾಗವನ್ನು ನೋಡಿ.
ನಂತರ 'ಹೊಸ ರೈತ ನೋಂದಣಿ' (New Farmer Registration) ಕ್ಲಿಕ್ ಮಾಡಿ. ಇಲ್ಲಿ ನೀವು ಎರಡು ಆಯ್ಕೆಗಳನ್ನು ಕಾಣಬಹುದು.
ಗ್ರಾಮೀಣ ರೈತ ನೋಂದಣಿ ಮತ್ತು ನಗರ ರೈತ ನೋಂದಣಿ (Rural Farmer Registration and Urban Farmer Registratio). ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ಮೊದಲ ಆಯ್ಕೆ ಅಥವಾ ಎರಡನೆಯದನ್ನು ಆರಿಸಿ.
ಅಕಾಲಿಕ ಮಳೆಯಿಂದ ಖಾರಿಫ್ ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ: ಎಸ್‌ಬಿಐ ವರದಿ!
ಪಿಎಂ-ಕಿಸಾನ್ ಯೋಜನೆಗೆ ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್ (Aadhaar card)
ಮೊಬೈಲ್ ನಂಬರ (Mobile number)
ಭೂಹಿಡುವಳಿ ಪತ್ರಗಳು (Landholding papers)
ಬ್ಯಾಂಕ್ ಖಾತೆ ವಿವರಗಳು (Bank account details)
ಇದನ್ನೂ ಓದಿರಿ: ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು
ಪಿಎಂ ಕಿಸಾನ್‌ಗೆ ಯಾರು ಅರ್ಹರು?
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಹರು
ನಗರ ಮತ್ತು ಗ್ರಾಮೀಣ ಪ್ರದೇಶಗಳ ರೈತರು
ಪಿಎಂ ಕಿಸಾನ್‌ಗೆ ಯಾರು ಅರ್ಹರಲ್ಲ?
ಸಾಂಸ್ಥಿಕ ಭೂಮಾಲೀಕರು
ಪ್ರಸ್ತುತ ಕೆಲಸ ಮಾಡುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಅಥವಾ ರಾಜ್ಯ/ಕೇಂದ್ರ ಸರ್ಕಾರ ಮತ್ತು PSUಗಳು/ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳು.
ಉನ್ನತ ಆರ್ಥಿಕ ಸ್ಥಿತಿಯನ್ನು ಹೊಂದಿರುವವರು ಯೋಜನೆಗೆ ಅರ್ಹರಲ್ಲ
ಆದಾಯ ತೆರಿಗೆ ಪಾವತಿಸುವ ರೈತರು
ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು
ವಕೀಲರು, ವೈದ್ಯರು, ಎಂಜಿನಿಯರ್‌ಗಳು ಮುಂತಾದ ವೃತ್ತಿಪರರು.
10,000 ಕ್ಕಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವವರು
Share your comments