ಕಳೆದ ಏಳು ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡಿದ್ದ ಪೆಟ್ರೋಲ್ ಡಿಸೆಲ್ ಬೆಲೆ ಗುರುವಾರ ಮತ್ತೆ ದಿಢೀರನೆ ಹೆಚ್ಚಾಗಿದೆ. ಹೌದು, ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 35 ಪೈಸೆ ಹೆಚ್ಚಾಗಿದೆ. ಇದರಿಂದಾಗಿ ವಾಹನ ಚಾಲಕರ ಜೇಬಿಗೆ ಕತ್ತರಿ ಬಿದ್ದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 86.65 ಆಗಿದೆ. ಬೆಂಗಳೂರಿನಲ್ಲಿ 89.54, ಮುಂಬೈನಲ್ಲಿ 93.20 ಆಗಿದೆ. ಸೆಲ್ ದರವು ದೆಹಲಿಯಲ್ಲಿ 76.83 ಆಗಿದೆ. ಬೆಂಗಳೂರಿನಲ್ಲಿ 81.44, ಮುಂಬೈನಲ್ಲಿ 83.67 ಆಗಿದೆ.
ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 87.99ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 80.39ರೂಗೆ ಏರಿಕೆಯಾಗಿದೆ. ಚೆನ್ನೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.11ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 82.03ರೂಗೆ ಏರಿಕೆಯಾಗಿದೆ. ಹೈದರಾಬಾದ್ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 90.08ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 83.79ರೂಗೆ ಏರಿಕೆಯಾಗಿದೆ.
ಕೇರಳದ ತಿರುವನಂತಪುರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 88.51ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 82.63ರೂಗೆ ಏರಿಕೆಯಾಗಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.52ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 81.42 ರೂಗೆ ಏರಿಕೆಯಾಗಿದೆ.
Share your comments