1. ಸುದ್ದಿಗಳು

ಡ್ರೋಣ್‌ ಮೂಲಕ ಕೀಟನಾಶಕ ಸಿಂಪಡಣೆ: ಚುರುಕುಗೊಂಡ ಕೃಷಿ ಚಟುವಟಿಕೆ

Kalmesh T
Kalmesh T
Pesticide spraying by drone: accelerated agricultural activity

1. ಆಧುನಿಕ ಯಂತ್ರೋಪಕರಣ ಬಂದ ನಂತರ ರೈತರ ಕೃಷಿ ಚಟುವಟಿಕೆಗೆ ಸಾಕಷ್ಟು ಅನುಕೂಲವಾಗಿದೆ. ನವಲಗುಂದ ತಾಲೂಕಿನಲ್ಲಿ ಹತ್ತಿ ಬೆಳೆ ಹೂ ಬಿಟ್ಟಿದ್ದು, ಇನ್ನೇನು ಕಾಯಿ ಕಟ್ಟುವ ಸಮಯ. ಬರೋಬ್ಬರಿ 4 ರಿಂದ 6 ಅಡಿ ಬೆಳೆದ ಗಿಡಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುವ ಸಮಯವಿದು. ಈ ಹಿನ್ನಲೆಯಲ್ಲಿ ಕೆಲವು ರೈತರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ.

ಡ್ರೋನ್​ ಮೂಲಕ ಈಗ ತಾಲೂಕಿನಲ್ಲಿ ರೈತರು ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ. ಈ ಮೂಲಕ ಆಧುನಿಕ ಸೌಕರ್ಯ ಬಳಕೆ ಮಾಡುವ ಮೂಲಕ ಬೆಳೆ ಕಾಪಾಡಲು ರೈತರು ಸಜ್ಜಾಗಿದ್ದಾರೆ. ರೈತರಿಗೆ ಆಧುನಿಕ ಯಂತ್ರೋಪಕರಣ ಬಳಕೆ ಮಾಡುವುದರಿಂದ ಕಾರ್ಮಿಕರ ಸಮಸ್ಯೆ, ವೇಳೆಯ ಅಭಾವ ತಪ್ಪುತ್ತದೆ. ಮುಂದಿನ ದಿನಗಳಲ್ಲಿ ರಸಗೊಬ್ಬರಗಳು ಸಹ ದ್ರವ ರೂಪದಲ್ಲಿ ಬರಲಿದ್ದು, ಡ್ರೋನ್ ತಂತ್ರಜ್ಜಾನ ಸಹಕಾರಿಯಾಗಲಿದೆ.

2. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಕಬ್ಬು ಖರೀದಿ ಮಂಡಳಿ ಸಭೆ ವಿಫಲವಾಗಿದೆ.

ಪ್ರತಿಭಟನೆಯನ್ನು ಮತ್ತೆ ಮುಂದುವರಿಸುವುದಾಗಿ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ  ಶಾಂತಕುಮಾರ್ ತಿಳಿಸಿದ್ದಾರೆ.

ಕಬ್ಬಿಗೆ ನ್ಯಾಯ ಸಮ್ಮತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ, ಕಳೆದ 13ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಸೋಮವಾರ ಸಂಜೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿತ್ತು. ಸಭೆಯಲ್ಲಿ ಸಚಿವ ಮುನೇನಕೊಪ್ಪ ಅವರು

ಕಬ್ಬಿನ ಉಪ ಉತ್ಪನ್ನಗಳಿಂದ ಟನ್ ಕಬ್ಬಿಗೆ 126ರೂಪಾಯಿ ಲಾಭ ಬರುತ್ತದೆ.

ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಎಫ್‌ಆರ್‌ಪಿಗೆ ಹೆಚ್ಚುವರಿಯಾಗಿ 50ರೂಪಾಯಿ ನೀಡುವಂತೆ ಕಾರ್ಖಾನೆಗಳಿಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಆದರೆ, ಸರ್ಕಾರದ ಈ ನಿಲುವನ್ನು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ ಶಾಂತಕುಮಾರ್ ತಿರಸ್ಕಾರ ಮಾಡಿದ್ದಾರೆ.

ರೈತರೊಬ್ಬರ ಹೊಲದಲ್ಲಿ ಪುರಾತನ ಕಾಲದ ಚಿನ್ನದ ನಾಣ್ಯಗಳು ಪತ್ತೆ!

3. ಭಾರತದಲ್ಲಿ ಒಟ್ಟಾರೆ 31 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಮಾಡುವ ಸಾಧ್ಯತೆ ಇದೆ ಎಂದು ಐಸಿಎಆರ್ ತಿಳಿಸಿದೆ. ಈ ಬಾರಿ ಗೋಧಿ ಬಿತ್ತನೆಯು ಕಳೆದ ವರ್ಷಕ್ಕಿಂತ  ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಅಂದಾಜು 1.5 ಮಿಲಿಯನ್ ಹೆಕ್ಟೇರ್‌ಗಳಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಸಾಮಾನ್ಯವಾಗಿ ಗೋಧಿ ಬಿತ್ತನೆ ನವೆಂಬರ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಮಾಡಲಾಗುತ್ತದೆ. ಈ ಪೈಕಿ ಇಡೀ ಗೋಧಿ ಸುಗ್ಗಿಯ ಅವಧಿಯಲ್ಲಿ ಈ ವರ್ಷ ಭಾರತ ಬಿತ್ತನೆಯಲ್ಲಿ ಗರಿಷ್ಠ ಸಾಧನೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಾರೆ ಈ ವರ್ಷ ಭಾರತವು 112 ಮಿಲಿಯನ್ ಟನ್ ಗೋಧಿ ಉತ್ಪಾದಿಸುವ ನಿರೀಕ್ಷೆ ಇದೆ. ಈ ಪ್ರಮಾಣದಲ್ಲಿ ಗೋಧಿ ಉತ್ಪಾದನೆಯಾದರೆ, ಅದು ಕಳೆದ ಸಾಲಿಗಿಂತ 5ಮಿಲಿಯನ್ ಟನ್‌ಗಳಷ್ಟು ಅಧಿಕವಾಗಲಿದೆ. ಎಂದು ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ ನಿರ್ದೇಶಕ ಜ್ಞಾನೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.

4. ಹೈದರಾಬಾದ್ ಮೂಲದ ಸ್ಟಾರ್ಟಪ್ ಆಗಿರುವ 'ಖೇತಿ' ಪ್ರಿನ್ಸ್ ವಿಲಿಯಂ ಅವರ ಅರ್ಥ್‌ಶಾಟ್ ಪ್ರಶಸ್ತಿಯನ್ನು ಗೆದ್ದಿದೆ. ನವೀನ ಮತ್ತು ಸರಳವಾದ ಕೃಷಿ ಪರಿಹಾರಗಳನ್ನು ಒದಗಿಸುವ ಭಾರತೀಯ ಸ್ಟಾರ್ಟ್‌ಅಪ್ ಖೇತಿ.

ಈ ವರ್ಷದ ಪ್ರತಿಷ್ಠಿತ ಅರ್ಥ್‌ಶಾಟ್ ಪ್ರಶಸ್ತಿಯ ಐದು ವಿಜೇತರಲ್ಲಿ ಒಬ್ಬರೆಂದು ನಾಮಿನೆಟ್‌ ಆಗಿದೆ. "ಪ್ರಕೃತಿಯನ್ನು ರಕ್ಷಿಸಿ ಮತ್ತು ಮರುಸ್ಥಾಪಿಸಿ" ವಿಭಾಗದಲ್ಲಿ "ಖೇತಿ" ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕೃಷಿ ವೆಚ್ಚ ಕಡಿಮೆ ಮಾಡಲು ಹಾಗೂ ಇಳುವರಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಸ್ಥಳೀಯ ಸಣ್ಣ ಹಿಡುವಳಿದಾರ ರೈತರಿಗೆ ಪ್ರವರ್ತಕ ಪರಿಹಾರವನ್ನು ಒದಗಿಸುವುದಕ್ಕಾಗಿ “ಖೇತಿ” ಕೆಲಸ ಮಾಡುತ್ತಿದೆ.

5. ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭಾಂಶವನ್ನು ರೈತರಿಗೆ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204 ಕೋಟಿ ಬಿಡುಗಡೆ ಮಾಡುವುದಾಗಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ಇಲ್ಲಿಯವರೆಗೆ ಸಕ್ಕರೆಯ ಉಪಉತ್ಪನ್ನಗಳ ಮೇಲೆ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನದ ಮೇಲೆ ರೈತರಿಗೆ ಲಾಭಾಂಶ ನೀಡಲು

ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಉಪ ಉತ್ಪನ್ನಗಳ ಲಾಭಾಂಶ ನೀಡುವಂತೆ  ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.

ಮೊದಲ ಹಂತದಲ್ಲಿ ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ನ ಮೇಲೆ ಲಾಭ ನೀಡಲು ಸರ್ಕಾರ ಮುಂದಾಗಿದೆ. ಕಬ್ಬಿನ ಎಫ್ಆರ್‌ಪಿ ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿಟನ್‌ಗೆ 50 ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಕಬ್ಬು ಬೆಳೆಗಾರರಿಗೆ 204 ಕೋಟಿ ಸಿಗಲಿದೆ.

6. ಬುಧವಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 10 NDRF ಮತ್ತು SDRF ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ

ಡಿಸೆಂಬರ್ 7ರ ಸಂಜೆಯ ವೇಳೆಗೆ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ. ಇನ್ನು ಕರ್ನಾಟಕದಲ್ಲಿ ಒಣಹವೆ ಮುಂದುವರಿದಿದ್ದು, ಅಲ್ಲಲ್ಲಿ ಮಳೆ ಆಗುವ ಸಾಧ್ಯತೆ ಇದೆ. 

ರಾಜ್ಯದಲ್ಲಿ ಮುಂದಿನ 24 ಗಂಟೆ ಬಹುತೇಕ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಉಳಿದಂತೆ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

7. ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.

ಮುಸುಕಿನ ಜೋಳ ಮಳೆಯಾಶ್ರಿತ ಹಾಗೂ ಮುಸುಕಿನ ಜೋಳ – ನೀರಾವರಿ ಬೆಳೆಗೆ ಬೆಳೆ ವಿಮೆ ನೊಂದಣಿ ಮಾಡಿಸಿದ ಹಾವೇರಿ ಜಿಲ್ಲೆಯ 1,36,000 ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

8. ಭಾರತದಿಂದ ಚಹಾ ಮತ್ತು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ಹೊಸ ಒಪ್ಪಂದವನ್ನು ಇರಾನ್ ಸಂಪೂರ್ಣವಾಗಿ ನಿಷೇಧಿಸಿದೆ.

ದಿಢಿರನೆ ಸ್ಥಗಿತಗೊಂಡ ಒಪ್ಪಂದಗಳ ಬಗ್ಗೆ ಇರಾನ್‌ನಿಂದ ಯಾವುದೇ ವಿವರಣೆ ಲಭ್ಯವಾಗಿಲ್ಲ. ಇರಾನ್ ಪ್ರತಿ ವರ್ಷ ಭಾರತದಿಂದ ಸುಮಾರು 3 ರಿಂದ 35 ಮಿಲಿಯನ್ ಕೆಜಿ ಚಹಾ

ಮತ್ತು ಸುಮಾರು 1.5 ಮಿಲಿಯನ್ ಕೆಜಿ ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿತ್ತು.

9.  ಆಧುನಿಕ ಯಂತ್ರೋಪಕರಣ ಬಂದ ನಂತರ ರೈತರ ಕೃಷಿ ಚಟುವಟಿಕೆಗೆ ಸಾಕಷ್ಟು ಅನುಕೂಲವಾಗಿದೆ.

ನವಲಗುಂದ ತಾಲೂಕಿನಲ್ಲಿ ಹತ್ತಿ ಬೆಳೆ ಹೂ ಬಿಟ್ಟಿದ್ದು, ಇನ್ನೇನು ಕಾಯಿ ಕಟ್ಟುವ ಸಮಯ. ಬರೋಬ್ಬರಿ 4 ರಿಂದ 6 ಅಡಿ ಬೆಳೆದ ಗಿಡಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುವ ಸಮಯವಿದು.

ಈ ಹಿನ್ನಲೆಯಲ್ಲಿ ಕೆಲವು ರೈತರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಡ್ರೋನ್​ ಮೂಲಕ ಈಗ ತಾಲೂಕಿನಲ್ಲಿ ರೈತರು ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.

ಈ ಮೂಲಕ ಆಧುನಿಕ ಸೌಕರ್ಯ ಬಳಕೆ ಮಾಡುವ ಮೂಲಕ ಬೆಳೆ ಕಾಪಾಡಲು ರೈತರು ಸಜ್ಜಾಗಿದ್ದಾರೆ. ರೈತರಿಗೆ ಆಧುನಿಕ ಯಂತ್ರೋಪಕರಣ ಬಳಕೆ ಮಾಡುವುದರಿಂದ ಕಾರ್ಮಿಕರ ಸಮಸ್ಯೆ, ವೇಳೆಯ ಅಭಾವ ತಪ್ಪುತ್ತದೆ.

ಮುಂದಿನ ದಿನಗಳಲ್ಲಿ ರಸಗೊಬ್ಬರಗಳು ಸಹ ದ್ರವ ರೂಪದಲ್ಲಿ ಬರಲಿದ್ದು, ಡ್ರೋನ್ ತಂತ್ರಜ್ಜಾನ ಸಹಕಾರಿಯಾಗಲಿದೆ.

10. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುವವರು ಎಚ್ಚರ. ಸರ್ಕಾರದಿಂದ ಇದಕ್ಕಾಗಿ ಸಿದ್ಧವಾಗುತ್ತಿದೆ ಹೊಸ ಆ್ಯಪ್.

ಹೌದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ತಡೆಗೆ ಆರೋಗ್ಯ ಇಲಾಖೆಯು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇಷ್ಟರಲ್ಲೇ ಬಳಕೆಗೆ ಬರಲಿದೆ.

“Stop Tobbacco” ಎಂಬ ಮೊಬೈಲ್ ಆ್ಯಪ್ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನ ತಡೆಗಟ್ಟುವ ಉದ್ದೇಶದಿಂದ ಇದನ್ನು ಜಾರಿ ಮಾಡಲಾಗುತ್ತಿದೆ. ಸಾರ್ವಜನಿಕರು ಮೊಬೈಲ್ ಮೂಲಕ ಚಿತ್ರಗಳನ್ನು ತೆಗೆದು, ಇದರಲ್ಲಿ ಅಪ್ಲೋಡ್ ಮಾಡುವ ಅವಕಾಶ ಇರಲಿದೆ.

ಈ ಛಾಯಾಚಿತ್ರದ ಆಧಾರದ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಭೇಟಿ ನೀಡಿ, ದಂಡ ವಿಧಿಸಲಿದೆ.

 

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…

Published On: 07 December 2022, 06:15 PM English Summary: Pesticide spraying by drone: accelerated agricultural activity

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.