1. ಸುದ್ದಿಗಳು

ಡ್ರೋನ್‌ ಬಳಸಿ ಔಷಧಗಳ ತಲುಪಿಸುವ ಕಾರ್ಯ ಪ್ರಾರಂಭಿಸಿದ ಮೇಘಾಲಯ!

Hitesh
Hitesh
Meghalaya has started the delivery of medicines using drones!

ಡ್ರೋನ್‌ಗಳ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವುದು ಇದೀಗ ವೇಗ ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಇದೀಗ ಡ್ರೋನ್‌ಗಳ ಮೂಲಕ ಔಷಧ ಸರಬರಾಜು ಮಾಡುವುದು ವೇಗ ಪಡೆದುಕೊಂಡಿದೆ.

ಹೌದು, ಮೇಘಾಲಯದಲ್ಲಿ ಈ ರೀತಿಯ ಪರಿಕಲ್ಪನೆಯೊಂದು ಸಾಕಾರಗೊಳ್ಳುತ್ತಿದೆ.  ಭಾರತದಲ್ಲಿ ಡ್ರೋನ್‌ ಅಳವಡಿಸಿಕೊಂಡು ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ.

ಮೆಘಾಲಯದ ಫಾರ್ಮಸಿಯೊಂದರ ಮಾನವ ರಹಿತ ವಾಹನ ಔಷಧಗಳನ್ನು 68 ಕಿ.ಮೀ ದೂರದ ಪ್ರದೇಶದಿಂದ ತಂದು ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಚೆಸ್ರಾಂಗ್ ಮೊಮಿನ್ ಎಂಬವರು ಇದರ ಪ್ರಯೋಜನ ಪಡೆದಿದ್ದಾರೆ. ಅವರ ತಂದೆಯ ಬಿಪಿ ಮಾತ್ರೆಗಳನ್ನು ತರುವುದಕ್ಕೆ 101 ಕಿ.ಮೀ ಪ್ರಯಾಣಿಸಬೇಕಾಗಿತ್ತು.

ಇದೀಗ ಡ್ರೋನ್‌ನ ಸಹಾಯದಿಂದ ಔಷಧವನ್ನು ತರಿಸಿಕೊಳ್ಳಲಾಗುತ್ತಿದೆ.  

ಜೆಂಗ್ಜಾಲ್ ಉಪವಿಭಾಗದ ಆಸ್ಪತ್ರೆಯ ಡ್ರೋನ್ ನಿಲ್ದಾಣ ಗಾರೋ ಹಿಲ್ಸ್‌ನ ಅತ್ಯಂತ ಕುಗ್ರಾಮಕ್ಕೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವುದು ಈ ಡ್ರೋನ್‌ನಿಂದ ಸಹಾಯವಾಗಲಿದೆ.  

ಸರ್ಕಾರಿ ಆರೋಗ್ಯ ಪೂರೈಕೆ ಸರಪಳಿಗೆ ಇಲ್ಲಿನ ಭೂಕುಸಿತ, ಪ್ರವಾಹಗಳ ಕಾರಣದಿಂದಾಗಿ ಲಾಜಿಸ್ಟಿಕ್ ಸಮಸ್ಯೆಗಳು ಎದುರಾಗುತ್ತಿದ್ದು,

ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಆರೋಗ್ಯ ಕೇಂದ್ರಗಳಿಗೆ ತಲುಪಿಸುವುದು ಸವಾಲಿನ ಕೆಲಸವಾಗಿತ್ತು. ಇದೀಗ ಡ್ರೋನ್‌ ಸಹಾಯದಿಂದ ಇದು ಸುಲಭವಾಗಿದೆ.

ವಿಶ್ವಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆದು ಚಾಲ್ತಿಯಲ್ಲಿರುವ ಡ್ರೋಣ್ ಸೇವೆಗಳು ಮೇಘಾಲಯ ಆರೋಗ್ಯ ವ್ಯವಸ್ಥೆ ಸದೃಢ ಯೋಜನೆ

ಹಾಗೂ ಸ್ಟಾರ್ಟ್ ಅಪ್ ಟೆಕ್ಕೀಗಲ್ ಎಂಬ ಜಂಟಿ ಸಹಯೋಗವಾಗಿದೆ.

ಟೆಕ್ಕೀಗಲ್‌ನ ಸಹ ಸಂಸ್ಥಾಪಕ ಅಂಶು ಅಭಿಷೇಕ್ ಇದು ಏಷ್ಯಾದ ಮೊದಲ,  ಆರೋಗ್ಯ ವಿತರಣಾ ವ್ಯವಸ್ಥೆಯಗಾಗಿಯೇ ಇರುವ ಡ್ರೋಣ್ ಸ್ಟೇಷನ್ ಆಗಿದೆ. 

ಡ್ರೋನ್ ಸಾಗಬೇಕಿರುವ ಮಾರ್ಗವನ್ನು ಜಿಪಿಎಸ್ ಆಧಾರದಲ್ಲಿ ಮೊದಲೇ ನಿಗದಿಪಡಿಸಲು ಉದ್ದೇಶಿಸಲಾಗಿದೆ.  

ರಾಜ್ಯದಲ್ಲಿ “ಪಕ್ಷಿ ಉತ್ಸವ”; ಎಲ್ಲಿ ಮತ್ತು ಯಾವಾಗ ಇಲ್ಲಿದೆ ವಿವರ!

Meghalaya has started the delivery of medicines using drones!

ಈ ಡ್ರೋನ್‌ 3ರಿಂದ 5 ಕೆಜಿಯಷ್ಟು ಸರಕುಗಳನ್ನು ಹೊತ್ತು ಸಾಗುವ ಸಾಮರ್ಥ್ಯವಿದೆ.

ಲಸಿಕೆಗಳನ್ನು ತೆಗೆದುಕೊಂಡು ಹೋಗುವುದಕ್ಕಾಗಿಯೇ ಎರಡು ಪ್ರತ್ಯೇಕ ಡ್ರೋನ್ ಗಳಿದ್ದು, ಅವುಗಳಿಗೆ 20ರಿಂದ25 ಕೆ.ಜಿ ಮೊತ್ತದ

ತೂಕವನ್ನು ಸಾಗಿಸುವ ಸಾಮರ್ಥ್ಯ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಮ್ ಕುಮಾರ್ ಅವರು ತಿಳಿಸಿದ್ದಾರೆ. 

Published On: 08 December 2022, 11:28 AM English Summary: Meghalaya has started the delivery of medicines using drones!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.