1. ಸುದ್ದಿಗಳು

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಆರು ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಅವರು ಆರೋಗ್ಯಯುತ ಆಹಾರದ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಸಾಯನಿಕ ಮಿಶ್ರಿತ ವಿಷಕಾರಿ ಆಹಾರವನ್ನು ಸೇವಿಸಿ, ಆಸ್ಪತ್ರೆಗಳಿಗೆ ಹಣ ಸುರಿದು ಸಾಕಾಗಿರುವ ಮಂದಿ, ಈಗ ರಾಸಾಯನಿಕಗಳ ಸಹವಾಸವೇ ಇರದ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ತಳೆದಿದ್ದಾರೆ. ರೈತರೂ ಅಷ್ಟೇ, ತಮಗೆ ಅನ್ನ ನೀಡುವ ಭೂಮಿಯನ್ನು ಹಾಳುಗೆಡವುವ ರಾಸಾಯನಿಕ ಕೃಷಿ ಬದಿಗಿರಿಸಿ ಸಾವಯವ ಕೃಷಿ ಮಂತ್ರ ಜಪಿಸುತ್ತಿದ್ದಾರೆ.

ಮನುಷ್ಯ ಸಂಕುಲ ಇಂದು ಅನುಭವಿಸುತ್ತಿರುವ ಎಲ್ಲ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಸಾವಯವ ಕೃಷಿ ನಿಂತಿದೆ. ಹಾಗಂತಾ ಸಾವಯವ ಕೃಷಿ ಪದ್ಧತಿ ಇಂದೋ, ನೆನ್ನೆಯೋ ಹುಟ್ಟಿದ್ದಲ್ಲ. ಇದಕ್ಕೆ ಸಹಸ್ರ ಕೋಟಿ ವರ್ಷಗಳ ಇತಿಹಾಸವಿದೆ. ಮನುಷ್ಯನ ಹುಟ್ಟಿನೊಂದಿಗೆ ಆರಂಭವಾಗಿ, ಅವನೊಂದಿಗೇ ಬೆಳೆದು ಬಂದಿರುವ ಈ ಕೃಷಿ ಪದ್ಧತಿ, ಇಂದಿನ ಆರೋಗ್ಯ, ಹಾಗೂ ಪರಿಸರಕ್ಕೆ ಸಂಬAಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎನ್ನುತ್ತಾರೆ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳು. ಹಾಗಾದರೆ ಸಾವಯವ ಕೃಷಿ ಎಂದರೇನು?

ಸಾವಯವ ಕೃಷಿ ಎಂದರೆ ಮಣ್ಣಿಗೆ ಯಾವುದೇ ರಾಸಾಯನಿಕ ಬೆರೆಸದೆ, ಪ್ರಕೃತಿಯಲ್ಲಿ ಸಿಗುವ ತ್ಯಾಜ್ಯ, ಇತರ ವಸ್ತುಗಳನ್ನೇ ಬಳಸಿಕೊಂಡು ಮಾಡುವ ವ್ಯವಸಾಯ. ಇದರಿಂದ ಮಣ್ಣಿನ ಗುಣಮಟ್ಟಕ್ಕೂ ಧಕ್ಕೆಯಾಗುವುದಿಲ್ಲ. ಪರಿಸರವೂ ಪ್ರಾಂಜಲವಾಗಿರುತ್ತದೆ. ಈ ಕೃಷಿ ಪದ್ಧತಿಯಲ್ಲಿ ಬೆಳೆದ ಧಾನ್ಯ, ಹಣ್ಣು ಹಾಗೂ ತರಕಾರಿಗಳು ನೈಸರ್ಗಿಕ ಪೌಷ್ಟಿಕಾಂಶಗಳಿAದ ಶ್ರೀಮಂತವಾಗಿರುತ್ತವೆ. ಹಾಗಾಗಿಯೇ ಸಾವಯವ ಪದ್ಧತಿಯಲ್ಲಿ ಬೆಳೆಯವ ಕೆಲವು ಧಾನ್ಯಗಳನ್ನು ‘ಸಿರಿ ಧಾನ್ಯ’ ಗಳು ಎಂದು ಕರೆಯಲಾಗುತ್ತದೆ. ಒಂದು ಪರಿಸರ ಸ್ನೇಹಿ ಹಾಗೂ ಮಾಲಿನ್ಯ ಮುಕ್ತ ಕೃಷಿ ಪದ್ಧತಿಯಾಗಿರುವ ಸಾವಯವ ವಿಧಾನವು, ಇಂದಿನ ಬಹುದೊಡ್ಡ ಅವಶ್ಯಕತೆಯಾಗಿದೆ. ಹೀಗಾಗಿ ಈ ಸಾವಯವ ಕೃಷಿಯಲ್ಲಿ ಕಾಣಬಹುದಾದ ಅಥವಾ ಸಾವಯವ ಕೃಷಿಕರು ಅಳವಡಿಸಿಕೊಳ್ಳಬೇಕಿರುವ ಕೆಲವು ಮೂಲ ಮಂತ್ರಗಳ ಕುರಿತ ಮಾಹಿತಿ ಇಲ್ಲಿದೆ.

  1. ಬೆಳೆ ವೈವಿಧ್ಯತೆ

ಇತ್ತೀಚೆಗೆ ಪಾಲಿಕಲ್ಚರ್ ಅಥವಾ ಬಹುಬೆಳೆ ಸಂಸ್ಕೃತಿ ಜನಪ್ರಿಯವಾಗಿದೆ. ರೈತರು ಮಿಶ್ರ ಬೆಳೆ ಪದ್ಧತಿ ಅನ್ನುತ್ತಾರಲ್ಲ, ಅದುವೇ ಈ ಪಾಲಿಕಲ್ಚರ್. ಇಲ್ಲಿ ಒಂದೇ ಭೂಮಿಯಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬೆಳೆ ವೈವಿಧ್ಯತೆಯು ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ರುತುವಿನಿಂದ ರುತುವಿಗೆ ಬದಲಾಗುತ್ತದೆ. ತಾತ ಮುತ್ತಾತಂದಿರು, ಅವರ ಅಪ್ಪ, ಅಜ್ಜಂದಿರು ಈ ಪದ್ಧತಿ ಅನುಸರಿಸುತ್ತಿದ್ದರಂತೆ. ಕಾಲಕ್ರಮೇಣ ನಾವದನ್ನು ಮರೆತಿದ್ದು, ಮೋನೊಕಲ್ಚರ್ ಅಂದರೆ ಏಕ ಬೆಳೆ ಪದ್ಧತಿಯ ದಾಸರಾಗಿದ್ದೇವೆ. ಬಹು ಬೆಳೆ ಪದ್ಧತಿ ಅಥವಾ ಮಿಶ್ರ ಬೆಳೆ ಪದ್ಧತಿಯು ಸಾವಯವ ಕೃಷಿಯ ಅತಿ ಮುಖ್ಯವಾದ ಭಾಗವಾಗಿದ್ದು, ಒಂದು ತುಂಡು ಭೂಮಿಯಲ್ಲಿ ಹಲವು ವಿಧದ ಬೆಳೆಗಳನ್ನು ಬೆಳೆಯುವುದು ಈ ಪದ್ಧತಿಯ ಮೂಲ ಗುಣಗಳಲ್ಲಿ ಒಂದಾಗಿದೆ.

  1. ಮಣ್ಣಿನ ನಿರ್ವಹಣೆ

ಸಕಲ ಜೀವರಾಶಿಗಳಿಗೂ ಮಣ್ಣೇ ಮೂಲ. ಮಣ್ಣಿಂದ ಕಾಯ ಎನ್ನುವಂತೆ ಕೃಷಿ ಕಾಯಕ ನಿಂತಿರುವುದು ಮಣ್ಣಿನ ಮೇಲೆಯೇ. ಹೀಗಾಗಿ ಮಣ್ಣನ್ನು ಜತನದಿಂದ ಕಾಪಾಡುವುದು ಕೃಷಿಕರ ಧರ್ಮ. ಸಾವಯವ ಕೃಷಿ ಪದ್ಧತಿಯಲ್ಲಿ ಮಣ್ಣಿನ ಗುಣಗಳು ಹಾಗೂ ಅದರ ಗುಣಮಟ್ಟದ ನೈಸರ್ಗಿಕ ನಿರ್ವಹಣೆಗೆ ಪ್ರಥಮ ಆದ್ಯತೆ ಇದೆ. ಇಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ, ಬದಲಿಗೆ ಮಣ್ಣಿನಲ್ಲಿ ಜೀವಾಣುಗಳನ್ನು ಹೆಚ್ಚಿಸುವ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ, ದ್ರಾವಣಗಳನ್ನು ಬಳಸುವುದರಿಂದ ಮಣ್ಣು ಸದಾ ಕಾಲ ಫಲವತ್ತಾಗಿರುತ್ತದೆ.

  1. ಕಳೆಯೇ ಹಸಿರೆಲೆ ಗೊಬ್ಬರ

ಕಳೆ ಗಿಡಗಳು ಯಾವ ಬೆಳೆಯನ್ನೂ ಕಾಡದೆ ಬಿಟ್ಟಿಲ್ಲ. ಕೃಷಿ ಪದ್ಧತಿ ಯಾವುದೇ ಇರಲಿ ಬೆಳೆಗಳ ನಡುವೆ ಸೇರಿಕೊಳ್ಳುವುದು ತನ್ನ ಹಕ್ಕು ಎಂಬಂತೆ ಕಳೆ ಗಿಡಗಳು ಹುಟ್ಟುತ್ತವೆ. ಆದರೆ ಬುದ್ಧಿವಂತ ಸಾವಯವ ಕೃಷಿಕರು ಈ ಕಳೆಯನ್ನೇ ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ. ಸಾವಯವ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಜತ್ರೋಪ, ಡಯಾಂಚ, ವೆಲ್ವೆಟ್ ಬೀನ್ಸ್, ಅಲಸಂದಿ ಮತ್ತಿತರ ಬೆಳೆಗಳನ್ನು ಬೆಳೆಸಿ, ಅವು ಒಂದು ಹಂತಕ್ಕೆ ಬೆಳೆದ ನಂತರ ಅವುಗಳನ್ನು ಕತ್ತರಿಸಿ (ಮಲ್ಚಿಂಗ್ ಮಾಡಿ) ಹಸಿರೆಲೆ ಗೊಬ್ಬರವಾಗಿ ಪರಿವರ್ತಿಸಬೇಕು. ಹೀಗೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಉತ್ತಮಗೊಳ್ಳುತ್ತದೆ.

  1. ಹಾನಿಕಾರಕ ಜೀವಿಗಳ ನಾಶ

ಮಣ್ಣಿನಲ್ಲಿ ಕೃಷಿಗೆ ಪೂರಕವಾಗಿರುವ ಜೀವಿಗಳು ಇರುವಂತೆ, ಹಾನಿಕಾರಕ ಜೀವಿಗಳೂ ಇರುತ್ತವೆ. ಅವು ಸದ್ದಿಲ್ಲದಂತೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ. ಆಧುನಿಕ ಕೃಷಿ ಪದ್ಧತಿಯಲ್ಲಾದರೆ ರಾಸಾಯನಿಕ ಸಿಂಪಡಿಸಿ ಇಂತಹ ಜಿವಿಗಳ ಕಾಟ ತಪ್ಪಿಸಬಹುದು. ಆದರೆ, ಸಾವಯವ ಕೃಷಿಯಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಮೂಡದೆ ಇರದು. ಸಾವಯವ ವಿಧಾನದ ಮೂಲಕವೂ ಈ ಹಾನಿಕಾರ ಜೀವಿಗಳನ್ನು ಹತೋಟಿ ಮಾಡಬಹುದು. ಈ ಪದ್ಧತಿಯಲ್ಲಿ ನೀಮಾಸ್ತç, ದಶಪರ್ಣಿ, ಅಗ್ನಿಅಸ್ತç, ಬೇವಿನಕಾಯಿ ಕಷಾಯ ಸೇರಿ ಹಲವು ಔಷಧಗಳಿವೆ. ಇವೆಲ್ಲವನ್ನೂ ಮರಗಳ ಎಲೆ, ಕಾಯಿಗಳಿಂದ ತಯಾರಿಸುವುದರಿಂದ ಭೂಮಿಗೆ ಇವುಗಳಿಂದ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಸಾವಯವ ಔಷಧಗಳ ಮೂಲಕವೇ ಬೆಳೆಯ ರೋಗಗಳು, ಕೀಟ ಬಾಧೆ ತಡೆಗಟ್ಟುವುದು ಕೂಡ ಸಾವಯವ ಕೃಷಿ ಪದ್ಧತಿಯ ಮೂಲ ಮಂತ್ರವಾಗಿದೆ.

  1. ಜಾನುವಾರುಗಳ ಬಳಕೆ

ಜಾನುವಾರುಗಳು, ಅದರಲ್ಲೂ ದೇಸಿ ತಳಿ ಜಾನುವಾರುಗಳು ಸಾವಯವ ಕೃಷಿಯ ಅವಿಭಾಜ್ಯ ಅಂಗಗಳಾಗಿವೆ. ಸಾವಯವ ಕೃಷಿ ಪದ್ಧತಿ ನಿಂತಿರುವುದೇ ಈ ಜಾನುವಾರುಗಳ ಮೇಲೆ ಎಂದರೂ ತಪ್ಪಾಗಲಾರದು. ಕೊಟ್ಟಿಗೆ ಗೊಬ್ಬರ, ದೇಸಿ ಹಸುಗಳ ಸಗಣಿ, ಗೋಮೂತ್ರ, ಕುರಿ, ಕೋಳಿ ಗೊಬ್ಬರಗಳು ಸಾವಯವ ಕೃಷಿಯಲ್ಲಿ ಮಣ್ಣಿನ ಗುಣಮಟ್ಟ ಹೆಚ್ಚಿಸಿ, ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಕೆಲಸ ಮಾಡುತ್ತವೆ. ಬೆಳೆ ಕಟಾವಾದ ನಂತರ, ಬಿತ್ತನೆಗೆ ಕೆಲ ದಿನ ಮುನ್ನ ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸುವುದು ಕೂಡ ಸಾವಯವ ಕೃಷಿಗೆ ಪೂರಕವಾಗಿದೆ.

  1. ನೈಸರ್ಗಿಕ ಸಂಪನ್ಮೂಲಗಳ ಬಳಕೆ

ನೈಸರ್ಗಿಕ ಸಂಪನ್ಮೂಲಗಳನ್ನು ಮಾತ್ರ ಬಳಸುವುದನ್ನು ಸಾವಯವ ಕೃಷಿ ಪ್ರೋತ್ಸಾಹಿಸುತ್ತದೆ. ಇಲ್ಲಿ ಸಾಧ್ಯವಾದಷ್ಟು ನೂಸರ್ಗಿಕ ವಿಧಾನಗಳ ಮೂಲಕವೇ ಕೃಷಿ ಮಾಡಬೇಕಾಗುತ್ತದೆ. ಉಳುಮೆಗೆ ಎತ್ತುಗಳು, ಮರದ ನೇಗಿಲು ಬಳಸುವುದು, ಬಿತ್ತನೆ ನಂತರ ಪದೇ ಪದೆ ಭೂಮಿಯನ್ನು ಉಳುಮೆ ಮಾಡದೆ, ಬೆಳೆದ ಕಳೆಯನ್ನು ಕತ್ತಿ, ಕುಡುಗೋಲು ಮತ್ತಿತರ ಸಾಧನಗಳಿಂದ ಕತ್ತರಿಸುವುದು ಸಾವಯವ ಕೃಷಿಯ ಭಾಗವಾಗಬೇಕು. ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣಗಳ ಬಳಕೆಯನ್ನು ಸಾಧ್ಯವಾದಷ್ಟು ನಿಲ್ಲಿಸಬೇಕು.

Published On: 25 June 2021, 12:51 PM English Summary: organic farming six fundamentals

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.