1. ಸುದ್ದಿಗಳು

Old Pension ಹಳೇ ಪಿಂಚಣಿ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ!

Hitesh
Hitesh
ಹಳೇ ಪಿಂಚಣಿ ಜಾರಿಗೆ ಅಸ್ತು ಎಂದ ಸರ್ಕಾರ

OPS Updates: ಹಳೇ ಪಿಂಚಣಿ ಜಾರಿಯ ಸರ್ಕಾರಿ ನೌಕರರ ಬಹುದಿನಗಳ ಕನಸನ್ನು ಸರ್ಕಾರ ಕೊನೆಗೂ ಅನುಮೋದನೆ ನೀಡಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆಯನ್ನು (Old pension Latest news) ಜಾರಿ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಿ ನೌಕರರು

ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದಲ್ಲೂ ಹಳೇ ಪಿಂಚಣಿಯನ್ನೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲ್ಲೇ ಇವೆ.

ಇದೀಗ ನೆರೆಯ ಮಹಾರಾಷ್ಟ್ರದಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ

ಮುಂದಾಗಿದ್ದು, ಅಲ್ಲಿನ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆಯನ್ನೂ ನೀಡಿರುವುದು ವಿಶೇಷವಾಗಿದೆ.

ಹಳೇ ಪಿಂಚಣಿ ಯೋಜನೆ ಜಾರಿ ಮಾಡಿದ ಸರ್ಕಾರ

ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಕನಸು (Old pension) ಈಡೇರಿದಂತಾಗಿದೆ.

ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡುವುದಕ್ಕೆ ಇದೀಗ ಮಹಾರಾಷ್ಟ್ರ ಸರ್ಕಾರ ಅಸ್ತು ಎಂದಿದೆ.

ಇದಕ್ಕೆ ಅನುಮೋದನೆಯನ್ನು ನೀಡುವ ಮೂಲಕ  ನವೆಂಬರ್ 2005ರ ನಂತರದ ಉದ್ಯೋಗವನ್ನು ಪ್ರಾರಂಭಿಸಿರುವ ಸರ್ಕಾರಿ

ನೌಕರರಿಗೆ ಹಳೇಯ ಪಿಂಚಣಿ ಯೋಜನೆಯ ಲಾಭಗಳನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತಿದೆ.  

ಹಳೇ ಪಿಂಚಣಿ ಜಾರಿಗೆ ನಡೆದಿತ್ತು ಪ್ರತಿಭಟನೆ  

OPS ಮರು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಭಾರತದ ವಿವಿಧ ರಾಜ್ಯಗಳ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ನಿರಂತರವಾಗಿ

ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ನಿರಂತರ ಪ್ರತಿಭಟನೆ ಹಾಗೂ ಮುಷ್ಕರಗಳನ್ನು ನಡೆಸಿದ ನಂತರದಲ್ಲಿ

ಇದೀಗ  ಮಹಾರಾಷ್ಟ್ರ ಸರ್ಕಾರವು ಹಳೇ ಪಿಂಚಣಿ ಯೋಜನೆ ಮರು ಜಾರಿ ಮಾಡಲು ಮುಂದಾಗಿದೆ.

ಈಚೆಗೆ ಮಹಾರಾಷ್ಟ್ರದ ಸಚಿವ ಸಂಪುಟ ಸಭೆಯಲ್ಲಿ ಹಳೇ ಪಿಂಚಣಿ ಯೋಜನೆ ಜಾರಿ ಮಾಡುವುದಕ್ಕೆ ಅನುಮೋದನೆ ನೀಡಿದಂತಾಗಿದೆ.

26 ಸಾವಿರ ಉದ್ಯೋಗಿಗಳಿಗೆ ಲಾಭ

ಹಳೇ ಪಿಂಚಣಿಯನ್ನು ಅಲ್ಲಿನ ರಾಜ್ಯ ಸರ್ಕಾರವು ಮರು ಜಾರಿ ಮಾಡಿರುವುದರಿಂದಾಗಿ 26 ಸಾವಿರ ಜನ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.

ಈ ಸುದ್ದಿಯಿಂದ ಸರ್ಕಾರಿ ನೌಕರರು ಮಾತ್ರವಲ್ಲದೇ 26 ಸಾವಿರ ಜನ ಸರ್ಕಾರಿ ನೌಕರರ ಕುಟುಂಬದವರೂ ಸಹ ಸಂತೋಷಗೊಂಡಿದ್ದಾರೆ.

ಇನ್ನು ಮತ್ತೊಂದು ವಿಶೇಷವೆಂದರೆ ಈ 26 ಸಾವಿರ ಜನ ಸರ್ಕಾರಿ ನೌಕರರಿಗೆ ಅಲ್ಲಿನ ಸರ್ಕಾರವು ಒಂದು ಆಯ್ಕೆಯನ್ನು ಸಹ

ನೀಡಿದ್ದು, ಈ ಸರ್ಕಾರಿ ನೌಕರರು ಒಪಿಎಸ್  ಅಥವಾ ಹೊಸ ಪಿಂಚಣಿ ಯೋಜನೆಯಲ್ಲಿ ಯಾವುದಾದರೂ ಒಂದನ್ನು

ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.  

ಎರಡು ತಿಂಗಳಿನಲ್ಲಿ ವರದಿ ಸಲ್ಲಿಸಬೇಕು

ಹಳೇ ಪಿಂಚಣಿಯಲ್ಲಿ ಮುಂದುವರಿಯುವುದು ಅಥವಾ ಯಾವುದೇ ಬದಲಾವಣೆ ಬೇಡ ಎನ್ನುವುದು ಸೇರಿದಂತೆ ಯಾವುದೇ ನಿರ್ಧರಕ್ಕೆ ಬರುವುದಕ್ಕೆ

ಅಲ್ಲಿನ ಸರ್ಕಾರವು ಸರ್ಕಾರಿ ನೌಕರರಿಗೆ ಎರಡು ತಿಂಗಳು ಗಡುವನ್ನು ನೀಡಿದೆ. ಈ ಎರಡು ತಿಂಗಳ ಅವಧಿಯಲ್ಲಿ ಅಲ್ಲಿ ಸರ್ಕಾರಿ ನೌಕರರು ಅವರ

ನಿರ್ಧಾರವನ್ನು ಪ್ರಕಟಿಸಬೇಕು ಇಲ್ಲವೇ  ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಮ್ಮ ಇಲಾಖೆಗಳಿಗೆ ಸಲ್ಲಿಸುವಂತೆ ಕ್ಯಾಬಿನೆಟ್‌ನಲ್ಲಿ  ನಿರ್ಧಾರ ಕೈಗೊಳ್ಳಲಾಗಿದೆ. 

ಹಳೆಯ ಪಿಂಚಣಿ ಯೋಜನೆ ಎಂದರೇನು

1952ರಲ್ಲಿ ಕೇಂದ್ರ ಸರ್ಕಾರವು ಹಳೇ ಪಿಂಚಣಿ ಯೋಜನೆ (OPS)ಯನ್ನು ಪ್ರಾರಂಭಿಸಿತ್ತು.

 ಹಳೇ ಪಿಂಚಣಿ ಯೋಜನೆಯ ಅಡಿಯಲ್ಲಿ ಸರ್ಕಾರಿ ನೌಕರಿ ಮಾಡಿ ನಿವೃತ್ತಿಯನ್ನು ಹೊಂದಿದ ಮೇಲೆ ಕೊನೆಯ ವೇತನದ

ಅರ್ಧ ಮೊತ್ತವನ್ನು ಪಿಂಚಣಿಯ ರೂಪದಲ್ಲಿ ನೀಡಲಾಗುತ್ತಿತ್ತು. ಇದಲ್ಲದೇ ಸರ್ಕಾರ ನೀಡುವ ತುಟ್ಟಿಭತ್ಯೆಯೂ

ಸಹ ಪಿಂಚಣಿಯ ಹಣದಲ್ಲಿ ಸೇರ್ಪಡೆಗೊಳ್ಳುತ್ತಿತ್ತು.

ಇನ್ನೂ ಮುಖ್ಯವಾಗಿ ಹಳೆಯ ಪಿಂಚಣಿ ಯೋಜನೆಯಡಿ, ನೌಕರರು ಸಾವನ್ನಪ್ಪಿದರೆ ಅವರ ಸಾವಿನ ನಂತರದಲ್ಲಿ

ಮೃತರ ಕುಟುಂಬದವರಿಗೆ ಪಿಂಚಣಿ ಹಣವನ್ನು ತೆಗೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.  

ನಿವೃತ್ತಿಯ ನಂತರವೂ ಆದಾಯ

Ops ದಾರರು ನಿವೃತ್ತಿಯ ನಂತರವೂ ಅವರ ಕುಟುಂಬದವರಿಗೆ ಆಸರೆಯಾಗುತ್ತಿದ್ದು, ಹಳೇ ಪಿಚಂಣಿ ಯೋಜನೆ ಅವರಿಗೆ ಸಂಧ್ಯಾಕಾಲದಲ್ಲಿ ಆಸರೆಯಾಗುತ್ತಿತ್ತು.

ಈ ನಡುವೆ ಭಾರತದ ಬಹುತೇಕ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆಯನ್ನು ರದ್ದು

ಪಡಿಸಿದ್ದು, ಸರ್ಕಾರಿ ನೌಕರರ ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿತ್ತು.  

ಕರ್ನಾಟಕದಲ್ಲೂ ನಿಲ್ಲದ ಪ್ರತಿಭಟನೆ

ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕದಲ್ಲೂ

ನಿರಂತರವಾಗಿ ಸರ್ಕಾರಿ ನೌಕರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರವು ಜಾರಿ ಮಾಡಿರುವ ಹೊಸ ಪಿಂಚಣಿ ಯೋಜನೆಯನ್ನು ಕೂಡಲೇ ರದ್ದು ಮಾಡಬೇಕು

ಹಾಗೂ ನಮಗೆಲ್ಲ ಹಳೇ ಪಿಂಚಣಿ ವ್ಯವಸ್ಥೆಯನ್ನೇ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳು ಮುಂದುವರಿದಿವೆ. 

Published On: 10 January 2024, 03:15 PM English Summary: Old Pension Cabinet approved the implementation of Old Pension!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.