1. ಸುದ್ದಿಗಳು

Good news ರೈತರಿಗೆ ಗುಡ್‌ನ್ಯೂಸ್‌: ಸಿರಿಧಾನ್ಯ ಪ್ರೋತ್ಸಾಹ ಧನ ಹೆಚ್ಚಳ ?!

Hitesh
Hitesh
ಸಿರಿಧಾನ್ಯ ಬೆಳೆವವರಿಗೆ ಭರ್ಜರಿ ನ್ಯೂಸ್‌

ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ಗೆ ಸ್ವಾಗತ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡುತ್ತಿರುವ ಅಕ್ಕಿಯ ವಿತರಣೆಯ ಬಗ್ಗೆ

ರಾಜ್ಯ ಸರ್ಕಾರವು ಮಹತ್ವದ ಅಪ್ಡೇಟ್ಸ್‌ ನೀಡಿದೆ. ಸಿರಿಧಾನ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಕರ್ನಾಟಕದ ಹಲವು ಭಾಗದಲ್ಲಿ ಮಳೆ ಆಗ್ತಿದೆ

ಈ ಎಲ್ಲ ಸುದ್ದಿಗಳ ವಿವರ ನೋಡೋಣ ಮೊದಲಿಗೆ ಮುಖ್ಯಾಂಶಗಳು.   

1. ಸಿರಿಧಾನ್ಯ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಚಿಂತನೆ: ಎನ್‌. ಚಲುವರಾಯಸ್ವಾಮಿ
2. ಸಿರಿಧಾನ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್‌
3. ರಾಜ್ಯದ ವಿವಿಧೆಡೆ ಮಳೆ, ಚಳಿ: ಐಎಂಡಿ ವರದಿ
4. ಜನವರಿಗೆ 12ಕ್ಕೆ ಯುವನಿಧಿ ಯೋಜನೆಗೆ ಚಾಲನೆ
5. ಅನ್ನಭಾಗ್ಯ ಯೋಜನೆ ಬಗ್ಗೆ ಮಹತ್ವದ ಮಾಹಿತಿ
6. ಜನವರಿ 26ರಿಂದ ಸಂವಿಧಾನ ಜಾಗೃತಿ ಜಾಥಾ
 ಸುದ್ದಿಗಳ ವಿವರ ಈ ರೀತಿ ಇದೆ.   

1. ಕರ್ನಾಟಕದ ಎಲ್ಲ ರೈತರು ಹೆಚ್ಚಾಗಿ ಸಿರಿಧಾನ್ಯ ಬೆಳೆಯಬೇಕು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಸಿರಿಧಾನ್ಯ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು.

ಪ್ರಸ್ತುತ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
--------------------------------

2. ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ಸಿರಿಧಾನ್ಯ ಮೇಳಕ್ಕೆ ಜನರು ಹಾಗೂ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೃಷಿ ಇಲಾಖೆಯು ಜನವರಿ ಐದರಿಂದ ಏಳರ ವರೆಗೆ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಆಯೋಜಿಸಿತ್ತು.

ಇದಕ್ಕೆ  • ಕೀನ್ಯ • ಕುವೈತ್  •ಯುಎಇ • ಆಸ್ಟ್ರೇಲಿಯಾ • ಯುರೋಪ್ ಒಕ್ಕೂಟ ರಾಷ್ಟ್ರಗಳಿಂದಲೂ ಜನ ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಅಲ್ಲದೇ ಇದರಲ್ಲಿ ದೇಶದ 16 ರಾಜ್ಯಗಳಿಂದ ಜನ ಬಂದಿದ್ದರು  190 ಸಂಸ್ಥೆಗಳು ಭಾಗವಹಿಸಿದ್ದವು. ಮೇಳದಲ್ಲಿ ಪುಂಗನೂರು

ಗಿಡ್ಡ ಹಸುಗಳು ಮತ್ತು ಆಡಿನ ಹಾಲಿನ ಉತ್ಪನ್ನಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.
-------------------------------
3. ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ. ಮಂಗಳವಾರ ಕರ್ನಾಟಕದ 13 ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ.

ದಕ್ಷಿಣ ಕರ್ನಾಟಕದ  ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಅಲ್ಲಲ್ಲಿ ಹಗುರ ಮಳೆಯಾಗಲಿದೆ.

ಇನ್ನು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ,

ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು

ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು ಮುನ್ನೆಚ್ಚರಿಕೆ ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಲಿದೆ.

ಹಲವು ಕಡೆ ಚಳಿ ಹೆಚ್ಚಳವಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು,

ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
-------------------------------
4. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ.

ಅಲ್ಲದೇ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು, ಇಂಟರ್‌ನೆಟ್‌ ವೆಚ್ಚ ಭರಿಸಲು, ಆರ್ಥಿಕ ಒತ್ತಡವನ್ನು

ನಿಭಾಯಿಸಲು ಯುವಕರಿಗೆ ಸಹಾಯಧನವು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಹಿನ್ನೆಲೆ ಯುವಕರ ಸ್ಫೂರ್ತಿ ಸ್ವಾಮಿ ವಿವೇಕಾನಂದರ ಜಯಂತಿ ರಾಷ್ಟ್ರೀಯ ಯುವದಿನವಾದ

ಜನವರಿ 12ರಂದೇ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.
-------------------------------
5.  ಅನ್ನಭಾಗ್ಯ ಯೋಜನೆಯ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸಂದೇವನ್ನು ನೀಡಿದೆ.

ಕರ್ನಾಟಕದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ರೇಷನ್‌ ಕಾರ್ಡ್‌ ಹೊಂದಿರುವ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ

ಈಗ ಬ್ಯಾಂಕ್ ಖಾತೆಗಳಿಗೆ ಹಣ ಹಾಕಲಾಗುತ್ತಿದೆ. ಇನ್ನು ಕೆಲವು ದಿನಗಳ ಮಟ್ಟಿಗೆ ಇದೇ ವ್ಯವಸ್ಥೆಯನ್ನು

ಮುಂದುವರಿಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.  
-------------------------------

6 ಕರ್ನಾಟಕದಾದ್ಯಂತ ಜನವರಿ 26ರಿಂದ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲು ಸರ್ಕಾರ ನಿರ್ಧರಿಸಿದೆ.

ಸಂವಿಧಾನದ ಮಹತ್ವ ಹಾಗೂ ಮೌಲ್ಯ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ

ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಜನವರಿ 26ರಿಂದ ಜಾಗೃತಿ ಜಾಥಾ ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಸಂಚರಿಸಲಿದೆ.

ಸಂವಿಧಾನದ ಮಹತ್ವ ಮತ್ತು ರಾಷ್ಟ್ರೀಯ ಭಾವೈಕ್ಯದ ಬಗ್ಗೆ ಜಾಗೃತಿ ಮೂಡಿಸುವ

ಕಿರುಚಿತ್ರಗಳು, ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
------------------------------

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 884 ಹೊಸ ಬಸ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

ಈಗಾಗಲೇ 375 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
-------------------------------

8. ಕೃಷಿ ಪದವೀಧರರು ಆಧುನಿಕ  ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು ಎಂದು

ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದ್ದಾರೆ. ಕೃಷಿಯಲ್ಲಿ ಯುವಕರು ಹೊಸ ವಿಧಾನ ಅಳವಡಿಸಿಕೊಳ್ಳುವ ಮೂಲಕ ಪ್ರೇರಣೆ ಆಗಬೇಕು ಎಂದಿದ್ದಾರೆ.
-------------------------------
9. ಯುವ ನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಅತ್ಯಂತ ಸುಲಭವಾಗಿದೆ. ನೋಂದಣಿಗೆ ಅಗತ್ಯವಾಗಿ

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳು ಹಾಗೂ • ಆಧಾರ್ ಕಾರ್ಡ್, ಆಧಾ‌ರ್ ಸೀಡೆಡ್ ಬ್ಯಾಂಕ್

ಖಾತೆ ಆಧಾ‌ರ್ ಲಿಂಕ್ಸ್ ಮೊಬೈಲ್ ಸಂಖ್ಯೆ ಸಲ್ಲಿಸಬೇಕು. ಅಲ್ಲದೇ ನೋಂದಾಯಿತ ಅಭ್ಯರ್ಥಿಗಳು ಮಾಸಿಕವಾಗಿ ನಿರುದ್ಯೋಗಿ ಎಂದು

ಸೇವಾ ಸಿಂಧು ಪೋರ್ಟಲ್‌ನಲ್ಲಿ ದೃಢೀಕರಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಸಹಾಯವಾಣಿ: 1800 599 9918ಕ್ಕೂ ಕರೆ ಮಾಡಬಹುದಾಗಿದೆ.

Published On: 09 January 2024, 04:00 PM English Summary: Good news for farmers: Cereal subsidy increase?!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.