1. ಸುದ್ದಿಗಳು

ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರು ತಪ್ಪಾಗಿದೆಯೇ ಕ್ಷಣಾರ್ಧದಲ್ಲಿ ಮಾಹಿತಿ ಬದಲಾಯಿಸಲು ಇಲ್ಲಿದೆ ಮಾಹಿತಿ...

Aadhaar card

ಆದಾರ್ ಕಾರ್ಡಿನಲ್ಲಿರುವ ನಿಮ್ಮ ಹೆಸರು, ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಈಗ ಆದಾರ್ ಸೆಂಟರ್, ವೆಬ್ ಸೆಂಟರ್ ಅಥವಾ ಪಟ್ಟಣಗಳಿಗೆ ಹೋಗಿ ಸರತಿಯಲ್ಲಿ ನಿಂತುಕೊಳ್ಳುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಮಾಹಿತಿಯನ್ನು ಬದಲಾಯಿಸಿಕೊಳ್ಳಬಹುದು.

ಹೌದು, ಆಧಾರ್ ಕಾರ್ಡಿನಲ್ಲಿರುವ ನಿಮ್ಮ ಹೆಸರು, ಹುಟ್ಟಿದ ದಿನಾಂಕವನ್ನು ಆನ್ ಲೈನ್ ನಲ್ಲಿ ಅಪಡೇಟ್ ಮಾಡಬಹುದು. ವಿಶೇಷವಾಗಿ ಡೆಮೊಗ್ರಾಫಿಕ್  ವಿವರಗಳಿಗಾಗಿ ಇದಕ್ಕಿಂತ ಮೊದಲು ಬಯೋಮೆಟ್ರಿಕ್ ವಿವರ ನೀಡವುದು ಕಡ್ಡಾಯವಾಗಿದ್ದರಿಂದ ಆಧಾರ್ ನೋಂದಣಿ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಆದರೆ ಈಗ ಮನೆಯಲ್ಲಿಯೇ ಕುಳಿತು ತಿದ್ದುಪಡಿಮಾಡಿಕೊಳ್ಳಬಹುದು.

ಹೇಗೆ ಬದಲಾಯಿಸಿಕೊಳ್ಳಬಹುದು?

ಮೊಟ್ಟಮೊದಲು ನೀವು ಆದಾರ್ ಲಿಂಕ್ https://uidai.gov.in ಮೇಲೆ ಕ್ಲಿಕ್ ಮಾಡಬೇಕು. ಅಪಡೇಟ್ ಡೆಮೊಗ್ರಾಫಿಕ್ ಮೇಲೆ ಕ್ಲಿಕ್ ಮಾಡಬೇಕು. ಪ್ರೊಸೆಸ್ ಟು ಅಪಡೆಟ್ ನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಪರಿಶೀಲಿಸಲು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಬೇಕು. ಕ್ಯಾಪ್ಚಾ ವೆರಿಫಿಕೇಷನ್  ಸ್ಥಳದಲ್ಲಿ ಪಕ್ಕದಲ್ಲಿಯೇ ತಿಳಿಸುವ ಕ್ಯಾಪ್ಚ್ಯಾ ಟೈಪ್ ಮಾಡಬೇಕು. ನಂತರ ಮೊದಲು ನೋಂದಾಯಿಸಿ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಓಟಿಪಿ ಟೈಪ್ ಮಾಡಿದನಂತರ,  ನೀವು ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಲಿಂಗ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಭರ್ತಿಮಾಡಬೇಕು. ನೀವು ಯಾವುದನ್ನು ಬದಲಾಯಿಸಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ  ದೃಢೀಕರಣ ಕಳಿಸಲಾಗುವುದು.

ಹೆಸರನ್ನು ಎರಡು ಸಲ, ಲಿಂಗವನ್ನು ಒಂದು ಸಲ ಹಾಗೂ ಜನ್ಮ ದಿನಾಂಕವನ್ನು ಒಂದು ಸಲ ಮಾತ್ರ ಬದಲಾಯಿಸಲು ಅವಕಾಶವಿರುತ್ತದೆ. ವಿಳಾಸ ಬದಲಾಯಿಸಲು ಸೂಕ್ತ ಸರ್ಕಾರಿ ದಾಖಲೆಗಳಿಲ್ಲದಿದ್ದರೆ ಗೆಜೆಟೆಡ್ ಅಧಿಕಾರಿಗಳಿಂದ ವಿಳಾಸವನ್ನು ದೃಢೀಕರಣ  ಪಡೆದು ಅಪಲೋಡ್ ಮಾಡಬೇಕಾಗುತ್ತದೆ.

ವಿಳಾಸ ಬದಲಾಯಿಸುವ ವಿಧಾನ

ಆಧಾರ್ ವಿಳಾಸ ಬದಲಾವಣೆಗೆ ಮೊದಲು ನೀವು UIDDAIನ ಅಧಿಕೃತ ವೆಬ್ ಸೈಟ್ ಆಗಿರುವ https://uidai.gov.in  ಲಿಂಕ್ ಗೆ ಭೇಟಿ ನೀಡಬೇಕು. ಬಳಿಕ My Aadhaar ಟ್ಯಾಬ್ ಮೇಲೆ ಕ್ಲಿಕ್ಕಿಸಿ, Update your aadhaar ಹಾಗೂ Update your address online ಮೇಲೆ ಕ್ಲಿಕ್ಕಿಸಬೇಕು. ಇದಾದ ಬಳಿಕ Proceed update address ಮೇಲೆ ಕ್ಲಿಕ್ಕಿಸಿ. ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ, Send OTP ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ಕಿಸಬೇಕು.

ಇದಾದ ನಂತರ ಅಲ್ಲಿರುವ Update address via address proof ಮೇಲೆ ಕ್ಲಿಕ್ಕಿಸಿ ನಿಮ್ಮ ಸರಿಯಾದ ವಿಳಾಸವನ್ನು ಭರ್ತಿ ಮಾಡಬೇಕು. ಈಗ ನಿಮಗೆ ಹೇಳಲಾಗಿರುವ ದಾಖಲೆಯ ಕಲರ್ ಫೋಟೋ ಅನ್ನು ಮೊಬೈಲ್ ಮೂಲಕ ಕ್ಲಿಕ್ಕಿಸಿ ಅಪ್ಲೋಡ್ ಮಾಡಿ ಪ್ರಕ್ರಿಯಯನ್ನು ಪೂರ್ಣಗೊಳಿಬೇಕು. ಇದಾದ ಬಳಿಕ ವೆರಿಫಿಕೆಶನ್ ಪ್ರಕ್ರಿಯೆ ನಡೆದು ನೀವು ನಮೂದಿಸಿರುವ ಹೊಸ ವಿಳಾಸ ನಿಮ್ಮ ಆಧಾರ್ ಕಾರ್ಡ್ ಮೇಲೆ ಬರುತ್ತದೆ.

Published On: 20 January 2021, 12:33 AM English Summary: Now Change your aadhaar information sitting at home

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.