1. ಸುದ್ದಿಗಳು

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ- ಕೃಷಿ ಸಚಿವ ಬಿ.ಸಿ. ಪಾಟೀಲ

Kalmesh T
Kalmesh T
No shortage of fertilizer in the state- Agriculture Minister B.C. Patil

ರಾಜ್ಯದಲ್ಲಿ ರಸಗೊಬ್ಬರಗಳ ಯಾವುದೇ ಕೊರತೆ ಇಲ್ಲ. ಸಮರ್ಪಕ ಪೂರೈಕೆಯನ್ನು ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿರಿ: 

Breaking: ಏಷ್ಯಾದಲ್ಲೇ ಅತಿ ಉದ್ದದ ದಂತ ಹೊಂದಿದ್ದ ಆನೆ "ದಂತ ಭೋಗೇಶ್ವರ್" ಇನ್ನಿಲ್ಲ!

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕೇಂದ್ರ ಸರ್ಕಾರ ಇದರ ಅನುಗುಣವಾಗಿ ಮಾಹೆವಾರು ರಾಜ್ಯಕ್ಕೆ ಹಂಚಿಕೆಮಾಡಲಾಗಿದೆ.

ಏಪ್ರಿಲ್ ನಿಂದ ಜೂನ್‌ವರೆಗೂ 12.5ಲಕ್ಷ ಮೆ.ಟ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಇಲ್ಲಿಯವರೆಗೆ 14.51ಲಕ್ಷ ಮೆ.ಟ ವಿವಿಧ ರಸಗೊಬ್ಬರಗಳ ಸರಬರಾಜು ಆಗಿದ್ದು 7.34 ಲಕ್ಷ ಮೆ.ಟ ವಿತರಣೆಯಾಗಿರುತ್ತದೆ. ಜಿಲ್ಲೆಗಳಲ್ಲಿ 7.16 ಲಕ್ಷ ಮೆ.ಟ ವಿವಿಧ ಗ್ರೇಡಗಳ ರಸಗೊಬ್ಬರ ದಾಸ್ತಾನು ಇರುತ್ತದೆ.

ವಿಶೇಷವಾಗಿ ಜಿಲ್ಲೆಗಳಿಂದ ಡಿ.ಎ.ಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

“ತಂತ್ರಜ್ಞಾನ ಎಷ್ಟೇ ಮುಂದುವರೆದರೂ ರೊಟ್ಟಿಯನ್ನು ಗೂಗಲ್‌ನಿಂದ ಡೌನ್ಲೋಡ್ ಮಾಡಿಕೊಳ್ಳಲಾಗುವುದಿಲ್ಲ” ಪ್ರೊ. ಆಂಚಲ್ ಅರೋರಾ

ಮುಂಗಾರು ಹಂಗಾಮಿಗೆ 4 ಲಕ್ಷ ಮೆ.ಟ ಡಿ.ಎ.ಪಿ ಬೇಡಿಕೆ ಇದ್ದು ಈಗಾಗಲೇ 2.59 ಲಕ್ಷ ಮೆ.ಟ ಸರಬರಾಜು ಆಗಿದ್ದು 1.61 ಲಕ್ಷ ಮೆ.ಟ ವಿತರಣೆಯಾಗಿರುತ್ತದೆ. ಇನ್ನೂ 98 ಸಾವಿರ ಮೆ.ಟ ದಾಸ್ತಾನು ಇರುತ್ತದೆ.

ಇದ್ದಲ್ಲದೇ ಕೇಂದ್ರ ಸರ್ಕಾರವು 60 ಸಾವಿರ ಮೆ.ಟ ಡಿ.ಎ.ಪಿ ರಸಗೊಬ್ಬರವನ್ನು ಪ್ರಸ್ತುತ ಮಾಹೆಯಲ್ಲಿ ಸರಬರಾಜು ಮಾಡಲು ಕ್ರಮವಹಿಸಿರುತ್ತದೆ.

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ರೈತರು ಯಾವುದೇ ಅಪಪ್ರಚಾರದ ಮಾಹಿತಿಗೆ ಆಂತಕಕ್ಕೆ ಒಳಗಾಗದೇ ರಸಗೊಬ್ಬರವನ್ನು ತೆಗೆದುಕೊಳ್ಳಲು ವಿನಂತಿ.

ಡಿ.ಎ.ಪಿ ರಸಗೊಬ್ಬರದಲ್ಲಿನ ಪೋಷಾಕಾಂಶಗಳು ಕಾಂಪ್ಲೆಕ್ಸ್ ರಸಗೊಬ್ಬರಗಳಲ್ಲಿಯೂ ಇದ್ದು ರೈತರು ಬೆಳೆಗಳಿಗೆ ಅವಶ್ಯಕ ತಕ್ಕಂತೆ ಸಮತೋಲನ ರಸಗೊಬ್ಬರ ಬಳಸಲು ವಿನಂತಿಸಿಕೊಳ್ಳುತ್ತೇನೆ.

Published On: 13 June 2022, 10:06 AM English Summary: No shortage of fertilizer in the state- Agriculture Minister B.C. Patil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.