1. ಸುದ್ದಿಗಳು

Nandini ಬ್ರ್ಯಾಂಡಿಂಗ್‌ನಲ್ಲಿ ಮತ್ತೆ ಮಿಂಚಿದ ಕರ್ನಾಟಕದ ಹೆಮ್ಮೆಯ ನಂದಿನಿ!

Hitesh
Hitesh
Nandini, the pride of Karnataka shines again in branding!

ಕಳೆದ ಕೆಲವು ದಿನಗಳಿಂದ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನದ ವಿಚಾರವಾಗಿ ಕಹಿ ಸುದ್ದಿಗಳೇ ಕೇಳಿಬರುತ್ತಿದ್ದವು.

ಇದೀಗ ನಂದಿನಿ ಉತ್ಪನ್ನದ ಬಗ್ಗೆ ಸಿಹಿಸುದ್ದಿಯೊಂದು ಬಂದಿದೆ. 

ಕರ್ನಾಟಕದ ಕೆಎಂಎಫ್ ನಂದಿನಿ ಭಾರತದಲ್ಲಿ ಅತೀ ಹೆಚ್ಚು ಜನ ಆಯ್ಕೆ ಮಾಡುವ ಹಾಗೂ ವೇಗವಾಗಿ

ಮಾರಾಟವಾಗುವ ಆರನೇ ಬ್ರ್ಯಾಂಡ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಂದಿನಿ ಬ್ರ್ಯಾಂಡ್‌ ಇದೀಗ  ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ನಲ್ಲಿ ಆರನೇ ಸ್ಥಾನ ಪಡೆದಿದೆ.

ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಕಾಂತಾರ್ ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ ವರದಿಯನ್ನು ಬಿಡುಗಡೆ ಮಾಡಿದೆ.

ಇದೀಗ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ನಂದಿನಿ ಒಂದಾಗಿದ್ದು, ಎಫ್‌ಎಂಸಿಜಿ ಬ್ರ್ಯಾಂಡ್‌ಗಳಲ್ಲಿ

ಅಮೂಲ್ ಹೊರತುಪಡಿಸಿ ಟಾಪ್ 10 ನಲ್ಲಿರುವ ಡೈರಿ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದೆ.

ಪಾರ್ಲೆಜೀ ಮೊದಲ ಸ್ಥಾನದಲ್ಲಿದ್ದರೆ, ಬ್ರಿಟಾನಿಯಾ ಎರಡನೇ ಸ್ಥಾನದಲ್ಲಿ, ಅಮುಲ್ ಮೂರನೇ ಸ್ಥಾನದಲ್ಲಿ,

ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ಟಾಟಾ ಐದನೇ ಸ್ಥಾನದಲ್ಲಿದೆ.

ಆರನೇ ಸ್ಥಾನದಲ್ಲಿ  ಕರ್ನಾಟಕದ ನಂದಿನಿ ಬ್ರ್ಯಾಂಡ್ ಇದೆ. ಈ ವರದಿಯನ್ನು ಗ್ರಾಹಕರ ರೀಚ್ ಪಾಯಿಂಟ್‌ಗಳ 

ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ಗೆ ರ್ಯಾಂಕಿಂಗ್‌ ನೀಡಲಾಗಿದೆ.

ಜನ ಯಾವ ನಿರ್ದಿಷ್ಟ ಬ್ರ್ಯಾಂಡ್ಅನ್ನು ಹೆಚ್ಚು ಖರೀದಿ ಮಾಡುತ್ತಾರೆ.

ಒಂದು ವರ್ಷದ ಅವಧಿಯಲ್ಲಿ ಅದೇ ಉತ್ಪನ್ನವನ್ನು ಎಷ್ಟು ಬಾರಿ ಖರೀದಿಸಿದ್ದಾರೆ

ಸೇರಿದಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಇದರಲ್ಲಿ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ,  ಗ್ರಾಹಕರ ಆಯ್ಕೆಯನ್ನು ಪ್ರಧಾನವಾಗಿ ಇರಿಸಿಕೊಳ್ಳಲಾಗಿದೆ.

2021 ನವೆಂಬರ್ ಮತ್ತು 2022ರ ಅಕ್ಟೋಬರ್ ಮಧ್ಯದ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಶ್ರೇಯಾಂಕವನ್ನು ನೀಡಲಾಗಿದೆ.

ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಕಾಂತಾರ್ ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ ವರದಿಯನ್ನು ಬಿಡುಗಡೆ ಮಾಡಿದೆ.

ಇದೀಗ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ನಂದಿನಿ ಒಂದಾಗಿದ್ದು, ಎಫ್‌ಎಂಸಿಜಿ ಬ್ರ್ಯಾಂಡ್‌ಗಳಲ್ಲಿ

ಅಮೂಲ್ ಹೊರತುಪಡಿಸಿ ಟಾಪ್ 10 ನಲ್ಲಿರುವ ಡೈರಿ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದೆ.

ಇದು ಇಂದಿನ ವಿಶೇಷ ಮತ್ತಷ್ಟು ವಿಶೇಷ ವರದಿಗಳಿಗಾಗಿ ಕೃಷಿ ಜಾಗರಣ ಕನ್ನಡ ನೋಡಿ, ಧನ್ಯವಾದ.   

Published On: 09 August 2023, 12:26 PM English Summary: Nandini, the pride of Karnataka shines again in branding!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.