1. ಸುದ್ದಿಗಳು

Mysterious blinds village : ಮನುಷ್ಯ, ಪ್ರಾಣಿ-ಪಕ್ಷಿಗಳೆಲ್ಲವೂ ಕುರುಡರೇ ಇರುವ ಜಗತ್ತಿನ ಏಕೈಕ ಗ್ರಾಮ! ಎಲ್ಲಿ ಗೊತ್ತೆ?

Kalmesh T
Kalmesh T
The only mysterious village in the world where there are blind people!

ಈ ವಿಷಯ ತಿಳಿದರೆ ನೀವೆಲ್ಲ ಅಚ್ಚರಿ ಪಡುವುದು ಖಂಡಿತ. ಈ ಗ್ರಾಮದಲ್ಲಿನ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ಕುರುಡರೇ (Blind Village) ಅಂದರೇ ನೀವು ನಂಬುತ್ತೀರಾ? ಹೌದು, ಅಚ್ಚರಿಯಾದರೂ ಇದು ಸತ್ಯ. ಇಲ್ಲಿದೆ ಈ ಕುರಿತಾದ ಇಂಟರೆಸ್ಟಿಂಗ್‌ ಸ್ಟೋರಿ…

ಲೇಖನದ ಕೊನೆಗೆ ವಿಡಿಯೋ ಕೂಡ ಲಭ್ಯವಿದೆ ವೀಕ್ಷಿಸಿ...

Mexico's Blind Village: ಒಂದಿಲ್ಲೊಂದು ನಿಗೂಢ ವಿಚಾರಗಳ ಕುರಿತು ನಾವೆಲ್ಲ ಓದಿರುತ್ತೇವೆ, ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ. ಅದೆ ತರದಲ್ಲಿ ಇಲ್ಲಿ ಇನ್ನೊಂದು ನಿಗೂಢ ವಿಷಯದ ಕುರಿತು ಇಂದು ಹೇಳಲಿದ್ದೇವೆ.

ಹೌದು, ಈ ಗ್ರಾಮದಲ್ಲಿರುವ ಎಲ್ಲರೂ ಕುರುಡರಂತೆ. ಮನುಷ್ಯರು, ಪ್ರಾಣಿಗಳನ್ನು ಸೇರಿದಂತೆ ಯಾರಿಗೂ ಕಣ್ಣು ಕಾಣದೆ ಇರುವುದೇ ಇದೀಗ ನಿಗೂಢವಾಗಿರುವುದು.

ಅಸಲಿಗೆ ಗ್ರಾಮದ ಜನರಿಗೆ ಏಕೆ ಕಣ್ಣು ಕಾಣುವುದಿಲ್ಲ? ಪ್ರಾಣಿಗಳಿಗೂ ಕೂಡ ಕಣ್ಣು ಕಾಣದೇ ಇರುವುದಕ್ಕೆ ಕಾರಣವೇನು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ ಅಲ್ಲವೇ. ಇಲ್ಲಿದೆ ಈ ಎಲ್ಲ ಸಂದೇಹಗಳಿಗೂ ಉತ್ತರ.

The world's only blind village: ಈ ಗ್ರಾಮದಲ್ಲಿ ಪ್ರತಿ ಮಗುವೂ ಹುಟ್ಟಿದ ನಂತರ ಕುರುಡಾಗುತ್ತದೆ. ಹೌದು ಇದನ್ನು ನೀವು ನಂಬಲೇಬೇಕು.  ಅಷ್ಟೇ ಅಲ್ಲದೇ ಗ್ರಾಮದಲ್ಲಿನ ಪ್ರಾಣಿಗಳಿಗೂ ಕೂಡ ಕಣ್ಣು ಕಾಣದೇ ಇರುವುದು ಇದೀಗ ಭಾರೀ ಕುತೂಹಕ್ಕೆ ಕಾರಣವಾದ ಅಂಶ.

ಓದುವಾಗ ಇದು ನಿಜವೇ ಎನ್ನುವ ಅನುಮಾನ ಮೂಡಿದರೂ ಇದು ಸತ್ಯ. ಮೆಕ್ಸಿಕೋದ ಒಂದು ಗ್ರಾಮದಲ್ಲಿ ಹುಟ್ಟುವ ಪ್ರತಿ ಮಗುವೂ ಕುರುಡರಾಗಿರುವ ಒಂದು ಹಳ್ಳಿಯಿದೆ.

ಯಾವುದು ಈ ಕುರುಡರ ಗ್ರಾಮ ?

ಮೆಕ್ಸಿಕೋದ ಟಿಲ್ಟೆಪಾಕ್ ಗ್ರಾಮದಲ್ಲಿ (Tiltepec village) ವಾಸಿಸುವ ಬುಡಕಟ್ಟಿನ ಜನರೇ ಈ ವಿಚಿತ್ರ ಸಮಸ್ಯೆಯನ್ನು ಅನುಭವಿಸುತ್ತ ಜಗತ್ತಿಗೆ ಸವಾಲಾದವರು.

ಈ Tiltepec ಗ್ರಾಮದ ಪ್ರತಿಯೊಬ್ಬ ಸದಸ್ಯರು ಕುರುಡರಾಗಿದ್ದಾರೆ. ಇದನ್ನು ವಿಶ್ವದ ನಿಗೂಢ ಹಳ್ಳಿಗಳ ಪಟ್ಟಿಯಲ್ಲಿ ಕೂಡ ಸೇರಿಸಲಾಗಿದೆ.

ಇಲ್ಲಿ ಮಗು ಜನಿಸುವ ಸಂದರ್ಭದಲ್ಲಿ ಕಣ್ಣುಗಳು ಚೆನ್ನಾಗಿಯೇ ಇರುತ್ತವೆ. ಆದರೆ, ಕ್ರಮೇಣ ಅದರ ದೃಷ್ಟಿ ಹೋಗಲಾರಂಭಿಸುತ್ತದೆ ಮತ್ತು ಕೊನೆಯಲ್ಲಿ ಅದು ಕುರುಡಾಗುತ್ತದೆ.

Pic Courtesy : Zoom News

ಶಾಪಗ್ರಸ್ತ ಮರದಿಂದ ಕುರುಡುತನ ಎಂದು ನಂಬಿಕೆ!

ಈ ಗ್ರಾಮದಲ್ಲಿ ಶಾಪಗ್ರಸ್ತ ಮರವೊಂದಿದೆ (The cursed tree). ಆ ಮರದಿಂದಲೇ ಅಲ್ಲಿನ ಎಲ್ಲರೂ ಕುರುಡರಾಗುತ್ತಿದ್ದಾರೆ ಎನ್ನುವುದು ಆ ಜನರ ನಂಬಿಕೆ.

“ಲಾವಾಜುವೆಲಾ”( Lava Juwela) ಎಂಬ ಹೆಸರಿನ ಈ ಮರವನ್ನು ನೋಡಿದ ನಂತರ, ಜನರು ಮಾತ್ರವಲ್ಲದೆ ಪ್ರಾಣಿಗಳು ಸಹ ಕುರುಡಾಗುತ್ತವೆ ಎನ್ನುತ್ತಾರೆ ಈ ಜನ.

ಆದರೆ, ಇದು ಮೂಢನಂಬಿಕೆಯಷ್ಟೇ ಇದಕ್ಕೆ ಬೇರೆಯದೆ ಕಾರಣವಿದೆ ಎಂದು ಈಚೆಗೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ವಿಜ್ಞಾನಿಗಳು ಹೇಳುವುದೇನು?

ಸ್ಥಳೀಯ ಜನರ ನಂಬಿಕೆಯನ್ನು ಪಕ್ಕಕ್ಕಿರಿಸಿ ನೋಡುವುದಾದರೇ ಇದಕ್ಕೊಂದು ಸೂಕ್ತ ಕಾರಣ ಇರಲೇಬೇಕು. ಅಂತಹ ಕಾರಣವನ್ನು ವಿಜ್ಞಾನಿಗಳ ಮೂಲಕ ತಿಳಿದುಕೊಳ್ಳುವುದಾದರೇ ಇದಕ್ಕೆ ಕಾರಣ ಬೇರೆಯೇ ಇದೆ.

ಹೌದು, ಈ ಜನರ ಕಣ್ಣು ಹೋಗಲು ಕಾರಣ ಆ ಭಾಗದಲ್ಲಿ ಕಂಡು ಬರುವ ಒಂದು ವಿಷಕಾರಿ ಜಾತಿಯ ನೊಣವಂತೆ. ವಿಜ್ಞಾನಿಗಳ ಪ್ರಕಾರ, ಈ ನೊಣದ ಕಡಿತದಿಂದ ಇಲ್ಲಿನ ಜನರು ಕ್ರಮೇಣ ಕುರುಡರಾಗುತ್ತಾರೆ ಮತ್ತು ಈ ನೊಣದ ಕಾರಣದಿಂದಲೆ ಪ್ರಾಣಿಗಳೂ ಕೂಡ ಕುರುಡುತನಕ್ಕೆ ಒಳಗಾಗಿವೆಯಂತೆ.

ಮೆಕ್ಸಿಕನ್ ಸರ್ಕಾರವು ಇಲ್ಲಿನ ಜನರ ಕಲ್ಯಾಣಕ್ಕಾಗಿ ಅನೇಕ ಪ್ರಯತ್ನಗಳನ್ನು ಕೂಡ ಮಾಡಿದೆ. ಆದರೆ ಆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

ತಿಲ್ಟೆಪಾಕ್ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಜನರನ್ನು ಇತರ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಿ, ಅಲ್ಲಿಗೆ ವರ್ಗಾಯಿಸಲಾಗಿತ್ತು.

ಆದರೆ ಪ್ರತಿಕೂಲ ವಾತಾವರಣದಿಂದಾಗಿ ಜನರು ಹೊಸ ಸ್ಥಳಗಳಲ್ಲಿ ವಾಸಿಸಲು ತೊಂದರೆಗಳನ್ನು ಎದುರಿಸಲಾರಂಭಿಸಿದರು. ಆದ್ದರಿಂದ ಮತ್ತೆ ಅವರನ್ನು ಅವರಿದ್ದ ಸ್ಥಳಕ್ಕೆ ಕರೆದುಕೊಂಡು ಬಿಡಲಾಗಿದೆಯಂತೆ.

ಹೀಗೆ ಜಗತ್ತಿನಲ್ಲಿರುವ ಸಾಕಷ್ಟು ಕುತೂಹಲ, ನಿಗೂಢಗಳ ಹಿಂದೆ ಇಂತಹ ಯಾವುದೋ ಕಾರಣಗಳಿರುವುದು ಬೆಳಕಿಗೆ ಬಂದರೂ, ಮನುಷ್ಯನ ತರ್ಕಕ್ಕೆ ನಿಲುಕದ ಅನೇಕ ಸಂಗತಿಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ.

Published On: 07 June 2023, 06:02 PM English Summary: Mysterious blinds village: Every person, animal and bird in this village is blind

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.